ಗಾಂಧಿನಗರ: ಮಗ ಪ್ರೀತಿ ಮಾಡಿ ಯುವತಿಯೊಂದಿಗೆ ಪರಾರಿ ಆಗಿದ್ದಕ್ಕೆ ಆತನ ತಾಯಿಯನ್ನು ಕೊಟ್ಟಿಗೆಯಲ್ಲಿ ಕಟ್ಟಿ ಥಳಿಸಿರುವ ಅಮಾನವೀಯ ಘಟನೆಯೊಂದು ಗುಜರಾತ್ ನ ನರ್ಮದಾ ಜಿಲ್ಲೆಯ ಬಿತಾಡಾ ಗ್ರಾಮದಲ್ಲಿ ನಡೆದಿದೆ.
ಫೆಬ್ರವರಿ 16ರಂದು ಈ ಅಮಾನವೀಯ ಘಟನೆ ನಡೆದಿದೆ. ಮಹಿಳೆಯ ಮಗ ಅದೇ ಗ್ರಾಮದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದನು. ಇಬ್ಬರೂ ಮನೆಯವರ ವಿರೋಧದ ನಡುವೆಯೂ ಮದುವೆಯಾಗಿ ಊರು ಬಿಟ್ಟು ಓಡಿ ಹೋಗಿದ್ದರು. ಈ ಸಂಬಂಧ ಗ್ರಾಮದಲ್ಲಿ ಎರಡೂ ಕುಟುಂಬಗಳ ನಡುವೆ ಪಂಚಾಯ್ತಿ ಕೂಡ ಮಾಡಲಾಗಿತ್ತು. ಆದ್ರೆ ಪಂಚಾಯ್ತಿಯಿಂದ ಯಾವುದೇ ಪ್ರಯೋಜನವಾಗಿರಲಿಲ್ಲ. ಇದನ್ನೂ ಓದಿ: ಲವ್ವರ್ ಜೊತೆ ಸೇರಿ ಹೆತ್ತ ತಾಯಿಯನ್ನೇ ಕೊಂದ ಮಗಳು!
Advertisement
Advertisement
ಮಗಳು ಓಡಿ ಹೋಗಿದ್ದಕ್ಕೆ ಗ್ರಾಮದಲ್ಲಿ ಅವಮಾನಿತರಾದ ಆಕೆಯ ಪೋಷಕರು ಯುವಕನ ತಾಯಿಯನ್ನು ಹಿಡಿದು ತಂದು ಹಸುಗಳ ಕೊಟ್ಟಿಗೆಯಲ್ಲಿಯ ಕಂಬವೊಂದಕ್ಕೆ ಕಟ್ಟಿ ಥಳಿಸಿದ್ದಾರೆ. ನಂತರ ಈ ಬಗ್ಗೆ ಗ್ರಾಮಸ್ಥರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ವಿಷಯ ತಿಳಿದು ಗ್ರಾಮಕ್ಕೆ ಆಗಮಿಸಿದ ಪೊಲೀಸರು ಕಂಬಕ್ಕೆ ಕಟ್ಟಲಾಗಿದ್ದ ಯುವಕನ ತಾಯಿಯನ್ನು ರಕ್ಷಣೆ ಮಾಡಿದ್ದಾರೆ. ಇದನ್ನೂ ಓದಿ: ಮರ್ಯಾದಾ ಹತ್ಯೆ: ಅನ್ಯಜಾತಿ ಹುಡ್ಗನನ್ನು ಲವ್ ಮಾಡಿದ ಮಗಳನ್ನು ದೊಣ್ಣೆಯಿಂದ ಹೊಡೆದು ಸುಟ್ಟ ತಂದೆ
Advertisement
ಇದನ್ನೂ ಓದಿ: ನವದಂಪತಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ವಧುವಿನ ಚಿಕ್ಕಪ್ಪಂದಿರು
Advertisement
ಇದನ್ನೂ ಓದಿ: ಬೇರೊಬ್ಬ ಯುವಕನನ್ನು ಪ್ರೀತಿಸಿ ಮದ್ವೆಯಾಗಿದ್ದಕ್ಕೆ ಸೋದರಿಯನ್ನ ಚಾಕುವಿನಿಂದ ಚುಚ್ಚಿ..ಚುಚ್ಚಿ ಕೊಂದ ಸಹೋದರ