ಲಕ್ನೋ: ಮನೆಗೆ ತಡವಾಗಿ ಬಂದಿದ್ದನ್ನು ಪ್ರಶ್ನಿಸಿದ್ದಕ್ಕೆ ರೊಚ್ಚಿಗೆದ್ದ ಪತ್ನಿಯೊಬ್ಬಳು ಪತಿ ಮುಖದ ಮೇಲೆ ಆ್ಯಸಿಡ್ ಎರಚಿದ ವಿಲಕ್ಷಣ ಘಟನೆಯೊಂದು ಉತ್ತರಪ್ರದೇಶದ ಕಾನ್ಪುರದ ಕೂಪರ್ ಗಂಜ್ ಪ್ರದೇಶದಲ್ಲಿ ನಡೆದಿದೆ.
Advertisement
ಆ್ಯಸಿಡ್ ದಾಳಿ (Acid Attack) ಗೆ ಒಳಗಾದ ವ್ಯಕ್ತಿಯನ್ನು ಡಬ್ಬು ಎಂದು ಗುರುತಿಸಲಾಗಿದ್ದು, ಉರ್ಸಾಲ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಒಡಿಶಾ ಆರೋಗ್ಯ ಸಚಿವರ ಹತ್ಯೆ ಕೇಸ್ – ASIಗೆ ಇತ್ತು Bipolar Disorder ಮಾನಸಿಕ ಕಾಯಿಲೆ
Advertisement
Advertisement
ಡಬ್ಬು ತನ್ನ ಪತ್ನಿ (Wife) ಜೊತೆ ಮನೆಗೆ ಬರಲು ತಡವಾಗಿದ್ದು ಏಕೆ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದಿದೆ. ಅಲ್ಲದೆ ಪತಿಯ ಮಾತಿನಿಂದ ಸಿಟ್ಟಿಗೆದ್ದ ಪತ್ನಿ ಆ್ಯಸಿಡ್ ಬಾಟ್ಲಿ ತೆಗೆದುಕೊಂಡು ಮುಚ್ಚಳ ತೆಗೆದು ಪತಿಯ ಮುಖಕ್ಕೆ ಎರಚಿದ್ದಾಳೆ ಎಂದು ಆತ ನಡೆದ ಘಟನೆಯನ್ನು ವಿವರಿಸಿದ್ದಾನೆ.
Advertisement
ಪ್ರಕರಣ ಸಂಬಂಧ ಪೊಲೀಸರು ಪತ್ನಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k