ಹೈದರಾಬಾದ್: ಮಹಿಳಾ ಟೆಕ್ಕಿಯೊಬ್ಬರು ತಮಗೆ ಕಾಟಕೊಡುತ್ತಿದ್ದ ಕಾಮುಕನನ್ನು ಕಿಡ್ನಾಪ್ ಮಾಡಿ ಹಿಗ್ಗಾ-ಮುಗ್ಗಾ ಥಳಿಸಿದ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.
ಕೆಲ ದಿನಗಳಿಂದ ವ್ಯಕ್ತಿಯೊಬ್ಬನು 24 ವರ್ಷದ ಮಹಿಳಾ ಸಾಫ್ಟ್ವೇರ್ ಎಂಜಿನಿಯರ್ ಗೆ ಫೋನ್ ಮಾಡಿ, ಮೆಸೇಜ್ ಮಾಡಿ ಅಶ್ಲೀಲವಾಗಿ ಮಾತನಾಡುತ್ತ ವಿಪರೀತ ಕಾಟ ಕೊಡುತ್ತಿದ್ದನು. ಮಹಿಳೆಯ ಗೆಳತಿಯ ಮನೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬನು ಹೇಗೋ ಆಕೆಯ ಫೋನ್ ನಂಬರ್ ಪಡೆದು ಕಾಲ್ ಹಾಗೂ ಮೆಸೇಜ್ ಮಾಡಿ ಹಿಂಸೆ ನೀಡುತ್ತಿದ್ದನು.
Advertisement
Advertisement
ಕಾಮುಕನ ಹಿಂಸೆಯಿಂದ ಬೇಸತ್ತಿದ್ದ ಮಹಿಳೆಯು ತನ್ನ ಸ್ನೇಹಿತೆಯರ ಸಹಾಯ ಪಡೆದು ಆ ಕಾಮುಕನಿಗೆ ಪಾಠ ಕಲಿಸಬೇಕು ಎಂದು ಫ್ಲಾನ್ ಮಾಡಿದ್ದರು. ಬಳಿಕ ಕಾಮುಕನಿಗೆ ಕರೆಮಾಡಿ ಸಿಕಂದರಾಬಾದ್ ಬಳಿ ಇರುವ ಕಾಲೇಜ್ ಹತ್ತಿರ ಬರಲು ಹೇಳಿದ್ದಾರೆ. ನಂತರ ಅಲ್ಲಿ ಆತನಿಗೆ ಹಿಗ್ಗಾ ಮುಗ್ಗಾ ಹೊಡೆದು ಕಿಡ್ನಾಪ್ ಮಾಡಿದ್ದಾರೆ. ಅಲ್ಲದೆ ನಿರ್ಜನ ಪ್ರದೇಶಕ್ಕೆ ಆತನನ್ನು ಕರೆದುಕೊಂಡು ಹೋಗಿ ಥಳಿಸಿದ್ದಾರೆ.
Advertisement
Advertisement
ಆದ್ರೆ ತೀವ್ರ ಗಾಯಗೊಂಡಿದ್ದರೂ ಚಾಲಾಕಿ ಕಾಮುಕನು ಮಹಿಳೆಯಿಂದ ತಪ್ಪಿಸಿಕೊಂಡು ಬಂದು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾನೆ. ಈ ವಿಷಯದ ಬಗ್ಗೆ ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಆಸ್ಪತ್ರೆಗೆ ಬಂದ ಪೊಲೀಸರು ವ್ಯಕ್ತಿಯನ್ನು ವಿಚಾರಣೆ ನಡೆಸಿದಾಗ ಸತ್ಯಾಂಶ ಹೊರಬಿದ್ದಿದೆ. ವ್ಯಕ್ತಿಯ ಹೇಳಿಕೆ ಮೇಲೆ ಪೊಲೀಸರು ಮಹಿಳೆ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾನೂನನ್ನು ಉಲ್ಲಂಘಿಸಿ ಕಿಡ್ನಾಪ್ ಮಾಡಿ ಥಳಿಸಿದಕ್ಕೆ ಸದ್ಯ ಮಹಿಳಾ ಟೆಕ್ಕಿ ವಿರುದ್ಧ ಗೋಪಾಲ್ಪುರಂ ಪೊಲೀಸ್ ಠಾಣೆಯಲ್ಲಿ ಅಪಹರಣ ಹಾಗೂ ಕೊಲೆ ಪ್ರಯತ್ನ ಪ್ರಕರಣವನ್ನು ದಾಖಲಿಸಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv