ಮುಂಬೈ: ಸೆಲ್ಫಿ ತೆಗೆದುಕೊಳ್ಳುವ ವೇಳೆ ಆಯತಪ್ಪಿ 500 ಅಡಿ ಆಳದ ಪ್ರಪಾತಕ್ಕೆ ಬಿದ್ದು ಮಹಿಳೆ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ರಾಯಘಡ್ ಜಿಲ್ಲೆಯಲ್ಲಿ ಸಂಭವಿಸಿದೆ.
ಸರೀತಾ ರಾಮ್ ಮಹೇಶ್ ಚೌಹಾಣ್(33) ಮೃತ ದುರ್ದೈವಿಯಾಗಿದ್ದಾರೆ. ಇವರು ಮೂಲತಃ ದೆಹಲಿಯವರಾಗಿದ್ದು, ಬುಧವಾರ ಪ್ರವಾಸ ನಿಮಿತ್ತ ಮಹಾರಾಷ್ಟ್ರದ ಪ್ರಸಿದ್ಧ ಮಾಥೆರನ್‍ನ ಗಿರಿಧಾಮಕ್ಕೆ ಕುಟುಂಬ ಸಮೇತ ಬಂದಿದ್ದಾರೆ.
Advertisement
ಸಂಜೆ 6.30ರ ವೇಳೆಗೆ ಗಿರಿಧಾಮದ ಪ್ರಸಿದ್ಧ ಲೂಯಿಸ್ ಪಾಯಿಂಟ್ ನಲ್ಲಿ ಕುಟುಂಬ ಸಮೇತ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ ಮಹಿಳೆ ಆಯತಪ್ಪಿ 500 ಅಡಿ ಆಳದ ಪ್ರಪಾತಕ್ಕೆ ಬಿದ್ದಿದ್ದಾರೆ. ಕೂಡಲೇ ಕುಟುಂಬಸ್ಥರು ಮಾಥೆರನ್ ಪೊಲೀಸರಿಗೆ ಮಾಹಿತಿ ನೀಡಿ ಮಹಿಳೆಯನ್ನು ರಕ್ಷಣೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.
Advertisement
ಸ್ಥಳಕ್ಕೆ ಬಂದ ರಕ್ಷಣಾ ಪಡೆ ಹಾಗೂ ಸ್ಥಳೀಯರ ನೆರವಿನಿಂದ ಮೃತ ಮಹಿಳೆಯ ದೇಹವನ್ನು ಮಧ್ಯರಾತ್ರಿ ಪ್ರಪಾತದಿಂದ ಹೊರತೆಗೆದಿದ್ದಾರೆ. ಮಹಿಳೆಯು ಬಿದ್ದ ರಭಸಕ್ಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
Advertisement
Advertisement
ಈ ಕುರಿತು ಪ್ರತಿಕ್ರಿಯಿಸಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾದ ಸಂಜಯ್ ಪಾಟೀಲ್, ಬುಧವಾರ ಸಂಜೆ ರಾಯಘಡದ ಗಿರಿಧಾಮ ಲೂಯಿಸ್ ಪಾಯಿಂಟ್ ಬಳಿ ಸೆಲ್ಫಿ ತೆಗೆದುಕೊಳ್ಳುವ ಬರದಲ್ಲಿ ಮಹಿಳೆಯೋರ್ವರು ಆಯತಪ್ಪಿ 500 ಅಡಿ ಆಳದ ಪ್ರಪಾತಕ್ಕೆ ಬಿದ್ದು ಮೃತಪಟ್ಟಿದ್ದಾರೆ. ರಕ್ಷಣಾ ಪಡೆ ಹಾಗೂ ಸ್ಥಳೀಯರ ಸಹಾಯದಿಂದ ಮಹಿಳೆಯ ಮೃತದೇಹವು ಸಿಕ್ಕಿದ್ದು, ಮರಣೋತ್ತರ ಪರೀಕ್ಷೆ ನಂತರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು ಎಂದು ತಿಳಿಸಿದ್ದಾರೆ.
ವಾಷಿಂಗ್ಟನ್ ಪೋಸ್ಟ್ 2015ರ ವರದಿ ಪ್ರಕಾರ ಜಗತ್ತಿನಲ್ಲಿ ಸಂಭವಿಸಿದ ಸೆಲ್ಫಿ ದುರಂತಗಳ ಪೈಕಿ ಭಾರತದಲ್ಲೇ ಅರ್ಧದಷ್ಟು ದುರಂತ ವರದಿಯಾಗಿರುವುದು ಆಘಾತಕಾರಿ ಅಂಶವಾಗಿದೆ. ಜನರು ಕೇವಲ ಸೆಲ್ಫಿಗೋಸ್ಕರ ತಮ್ಮ ಪ್ರಾಣವನ್ನೆ ಕಳೆದುಕೊಳ್ಳುತ್ತಿರುವುದು ದುರಾದೃಷ್ಟಕರ ಸಂಗತಿಯಾಗಿದೆ.