ಬೀಜಿಂಗ್: ಆಫೀಸ್‍ನ (Office) ರಾಜಕೀಯದಿಂದ ತಪ್ಪಿಸಿಕೊಳ್ಳಲು ಪದವೀಧರೆಯೊಬ್ಬಳು ಸ್ಮಶಾನದಲ್ಲಿ (Cemetery) ಕೆಲಸ (Job) ಮಾಡುವ ಮೂಲಕ ಅಚ್ಚರಿಯನ್ನು ಉಂಟುಮಾಡಿದ್ದಾಳೆ.
ಟಾನ್ (22) ಎಂಬ ಯುವತಿ ಉತ್ತಮ ಕೆಲಸ ಹಾಗೂ ಜೀವನದಲ್ಲಿ ಸಮತೋಲನ ಸಾಧಿಸಲು ಸ್ಮಶಾನದಲ್ಲಿ ಕೆಲಸ ಮಾಡುತ್ತಿದ್ದಾಳೆ. ಈಕೆ ಚೀನೀ ವಿಶ್ವವಿದ್ಯಾನಿಲಯದ ಪದವೀಧರೆಯಾಗಿದ್ದಾಳೆ. ಟಾನ್ ವಾರದಲ್ಲಿ 6 ದಿನ ಬೆಳಗ್ಗೆ 8:30 ರಿಂದ ಸಂಜೆ 5ರವರೆಗೆ ಕೆಲಸ ಮಾಡುತ್ತಾಳೆ. ಅಷ್ಟೇ ಅಲ್ಲದೇ 2 ಗಂಟೆಗಳ ಕಾಲ ಊಟಕ್ಕೆಂದು ವಿರಾಮವನ್ನು ಪಡೆಯುತ್ತಾಳೆ. ಈಕೆ ಈ ಕೆಲಸದಿಂದ ಸುಮಾರು 4,000 ಯುವಾನ್ (45,766ರೂ.) ಮಾಸಿಕ ವೇತನವನ್ನು ಗಳಿಸುತ್ತಿದ್ದಾಳೆ. ಈ ಬಗ್ಗೆ ಟಾನ್ ಪಶ್ಚಿಮ ಚೀನಾದ ಚಾಂಗ್‍ಕಿಂಗ್ ಪುರಸಭೆಯಲ್ಲಿ ಪರ್ವತದ ಸ್ಮಶಾನದಲ್ಲಿ ಕೆಲಸ ಮಾಡುತ್ತಿರುವ ಸ್ಥಳದ ವೀಡಿಯೋ ಹಾಗೂ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾಳೆ.
Advertisement
Advertisement
ಈ ವೀಡಿಯೋದಲ್ಲಿ ಟಾನ್ ಅಲ್ಲೇ ವಾಸಿಸುವ ಕಾರಣದಿಂದಾಗಿ ತನ್ನನ್ನು ತಾನು ಸಮಾಧಿ ಕೀಪರ್ ಎಂದು ಪರಿಚಯಸಿಕೊಂಡಿದ್ದಾಳೆ. ಅಷ್ಟೇ ಅಲ್ಲದೇ ಇದು ಬಹಳ ಸರಳ ಹಾಗೂ ಸುಲಭದ ಕೆಲಸವಾಗಿದೆ ಎಂದು ತಿಳಿಸಿದ್ದಾಳೆ. ಜೊತೆಗೆ ವೀಡಿಯೋದಲ್ಲಿ ತನ್ನ ಕೆಲಸದ ಬಗ್ಗೆ ತಿಳಿಸಿದ್ದು, ಸ್ಮಾಶಾನದಲ್ಲಿ ಮೃತದೇಹ ಹೂಳಲು ಜಾಗ ನೀಡುವುದು ಹಾಗೂ ಸತ್ತವರ ಸಂಬಂಧಿಕರ ಪರವಾಗಿ ಸಮಾಧಿಗಳನ್ನು ಮುಚ್ಚಲು ಸಹಾಯ ಮಾಡುವುದಾಗಿದೆ ಎಂದಿದ್ದಾಳೆ. ಇದನ್ನೂ ಓದಿ: ಕಾಡಾನೆ ಹಾವಳಿ ಗಂಭೀರವಾಗಿ ಪರಿಗಣಿಸಿ, ವಿಶೇಷ ಕಾರ್ಯಪಡೆ ರಚನೆ ಮಾಡಿದ್ದೇವೆ: ಬೊಮ್ಮಾಯಿ
Advertisement
Advertisement
ಈ ವೀಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. ನೆಟ್ಟಿಗನೊಬ್ಬ ಕಾಮೆಂಟ್ ಮಾಡಿದ್ದು, ಇಂತಹ ಕೆಲಸವನ್ನು ಹಳೆಯ ದಿನಗಳಲ್ಲಿ ದುರದೃಷ್ಟಕರವೆಂದು ಪರಿಗಣಿಸಲಾಗುತ್ತಿತ್ತು. ಆದರೆ ಆಧುನಿಕ ಜನರಿಗೆ ಇದು ಒತ್ತಡವಿಲ್ಲದ ಕೆಲಸವಾಗಿದೆ ಎಂದು ಹೇಳಿದ್ದಾನೆ. ಮತ್ತೊಬ್ಬ ಪ್ರತಿಕ್ರಿಯೆ ನೀಡಿದ್ದು, ನನಗೂ ಈ ಕೆಲಸ ಇಷ್ಟವಾಗಿದೆ. ಅಲ್ಲಿ ಯಾವುದೇ ಕಚೇರಿ ರಾಜಕೀಯ ಇಲ್ಲ, ಜನರೊಂದಿಗೂ ವ್ಯವಹರಿಸುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾನೆ. ಇದನ್ನೂ ಓದಿ: ಸೆರೆ ಹಿಡಿದಿದ್ದ ಆನೆ ಜೊತೆ ಕಾದಾಟ – ದಸರಾ ಆನೆ ಗೋಪಾಲಸ್ವಾಮಿ ಸಾವು