ಪ್ರಿಯತಮನನ್ನು ಮದುವೆಯಾಗಲು ಬಾಂಗ್ಲಾದಿಂದ ಭಾರತಕ್ಕೆ ಈಜಿಕೊಂಡೇ ಬಂದ್ಳು!

Public TV
1 Min Read

ಕೋಲ್ಕತ್ತಾ: ನಾವು ಈ ಹಿಂದೆ ಪ್ರೇಮಿಗಳು ತಮ್ಮ ಪ್ರೀತಿಯನ್ನು ಹುಡುಕಲು ಸಪ್ತ ಸಾಗರವನ್ನೇ ದಾಟಿ ಬರುವಂತಹ ಕಥೆಗಳನ್ನು ಕೇಳಿರುತ್ತೇವೆ. ಆದರೆ ಅವು ಕಾಲ್ಪನಿಕ ಕಥೆಗಳೇ ಹೊರತು ನಿಜವಲ್ಲ. ಆದರೆ ಇಲ್ಲೊಬ್ಬ ಬಾಂಗ್ಲಾದೇಶದ ಯುವತಿ ಭಾರತದಲ್ಲಿರುವ ತನ್ನ ಗೆಳೆಯನನ್ನು ಮದುವೆಯಾಗಲು ಈಜಿಕೊಂಡೇ ಬಂದಿದ್ದಾಳೆ. ತನ್ನ ಪ್ರಾಣವನ್ನೂ ಲೆಕ್ಕಿಸದೇ 1 ಗಂಟೆ ನದಿಯಲ್ಲಿ ಈಜುವ ಮೂಲಕ ಭಾರತ ಪ್ರವೆಶಿಸಿ ತನ್ನ ಪ್ರಿಯತಮನನ್ನು ಕೊನೆಗೂ ಭೇಟಿಯಾಗಿದ್ದಾಳೆ.

ಹೌದು, ಬಾಂಗ್ಲಾದೇಶದ ಯುವತಿ ಕೃಷ್ಣ ಮಂಡಲ್ ಭಾರತದ ಯುವಕ ಅಭಿಕ್ ಮಂಡಲ್‌ನನ್ನು ಸಾಮಾಜಿಕ ಮಾಧ್ಯಮದಲ್ಲಿ ಭೇಟಿಯಾಗಿ, ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಕೃಷ್ಣ ಬಳಿ ಪಾಸ್‌ಪೋರ್ಟ್ ಇಲ್ಲದ ಕಾರಣ ಆಕೆ ತನ್ನ ಗೆಳೆಯನನ್ನು ಭೇಟಿಯಾಗಲು ಅಕ್ರಮವಾಗಿ ಭಾರತ ಪ್ರವೇಶಿಸಿಲು ನಿರ್ಧರಿಸಿದಳು. ಇದನ್ನೂ ಓದಿ: ಪ್ರೀತಿಸಿ ಮೋಸ ಮಾಡ್ತಾರೆ, ಕೈಗೊಂದು ಮಗು ಕೊಟ್ಟು ಓಡಿ ಹೋಗ್ತಾರೆ – ಲವ್‌ಜಿಹಾದ್ ವಿರುದ್ಧ ಶೋಭಾ ಗುಡುಗು

LOVE

ಕೃಷ್ಣ ಮೊದಲು ರಾಯಲ್ ಬೆಂಗಾಲ್ ಟೈಗರ್ಸ್ಗೆ ಹೆಸರುವಾಸಿಯಾಗಿರುವ ಸುಂದರಬನ್ಸ್ ಪ್ರವೆಶಿಸಿದ್ದಳು. ಬಳಿಕ ತನ್ನ ಗೆಳೆಯನನ್ನು ತಲುಪಲು ನದಿಯಲ್ಲಿ ಸುಮಾರು 1 ಗಂಟೆ ಈಜಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ನಾಸಿಕ್ ಧರ್ಮಸಂಸದ್‍ನಲ್ಲಿ ಹನುಮ ಜನ್ಮಸ್ಥಳ ಗಲಾಟೆ- ಕಿಷ್ಕಿಂದೆ ಸ್ವಾಮೀಜಿ ಮೇಲೆ ಹಲ್ಲೆ ಯತ್ನ

ಮುಂದೇನಾಯ್ತು?
ಕೃಷ್ಣ 3 ದಿನಗಳ ಹಿಂದೆ ತನ್ನ ಗೆಳೆಯ ಅಭಿಕ್‌ನನ್ನು ಕೋಲ್ಕತ್ತಾದ ಕಾಳಿಘಾಟ್ ದೇವಾಲಯದಲ್ಲಿ ವಿವಾಹವಾಗಿದ್ದಾಳೆ. ಆದರೆ ಆಕೆ ಅಕ್ರಮವಾಗಿ ಭಾರತ ಪ್ರವೇಶಿಸಿರುವುದರಿಂದ ಸೋಮವಾರ ಪೊಲೀಸರು ಬಂಧಿಸಿದ್ದಾರೆ. ಕೃಷ್ಣಳನ್ನು ಬಾಂಗ್ಲಾದೇಶದ ಹೈಕಮಿಷನ್‌ಗೆ ಹಸ್ತಾಂತರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

Share This Article