ವಾಷಿಂಗ್ಟನ್: ಸಾಮಾನ್ಯವಾಗಿ ಶಸ್ತ್ರ ಚಿಕಿತ್ಸೆ ಎಂದರೆ ಎಲ್ಲರೂ ಆತಂಕಕ್ಕೆ ಒಳಗಾಗುವುದು ಸಹಜ. ಇನ್ನೂ ಕೆಲವರು ಸಣ್ಣ ಸರ್ಜರಿ ಎಂದರೂ ಅತ್ತೆ ಬಿಡುತ್ತಾರೆ. ಸದ್ಯ ಮಹಿಳೆಯೊಬ್ಬರು ದೇಹದ ಮೇಲಿನ ಮಚ್ಚೆಯನ್ನು ಶಸ್ತ್ರ ಚಿಕಿತ್ಸೆ ಮೂಲಕ ಹೊರ ತೆಗೆಯುವ ವೇಳೆ ಅತ್ತಿದ್ದಕ್ಕೆ ಆಸ್ಪತ್ರೆ ಹಣ ವಸೂಲಿ ಮಾಡಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.
Advertisement
ಮಹಿಳೆ ಮಿಡ್ಜ್, ಶಸ್ತ್ರ ಚಿಕಿತ್ಸೆ ವೇಳೆ ಅತ್ತಿದ್ದಕ್ಕೆ ಹಣ ವಸೂಲಿ ಮಾಡಿರುವ ಆಸ್ಪತೆಯ್ರ ಬಿಲ್‍ನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಈ ವಿಚಾರವಾಗಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ವೈದ್ಯರು ಮತ್ತು ಶಸ್ತ್ರ ಚಿಕಿತ್ಸೆ ಸೇವೆಗಳ ಜೊತೆಗೆ ಬಿಲ್‍ನಲ್ಲಿ “ಬ್ರೀಫ್ ಎಮೋಶನ್” ಎಂದು ಉಲ್ಲೇಖಿಸಿ 11 ಡಾಲರ್ ಅಂದರೆ 815.60 ರೂ. ಶುಲ್ಕವನ್ನು ವಿಧಿಸಿದೆ. ಇದನ್ನೂ ಓದಿ: ಉತ್ತರ ಪ್ರದೇಶ ಸರ್ಕಾರದ ಯೋಜನೆಯ ರಾಯಭಾರಿಯಾದ ಕಂಗನಾ
Advertisement
Mole removal: $223
Crying: extra pic.twitter.com/4FpC3w0cXu
— Midge (@mxmclain) September 28, 2021
Advertisement
ಸದ್ಯ ಈ ಆಸ್ಪತ್ರೆಯ ಬಿಲ್ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಈ ಪೋಸ್ಟ್‍ಗೆ ಇಲ್ಲಿಯವರೆಗೂ 15.3 ಸಾವಿರ ಮರು ಟ್ವೀಟ್ ಹಾಗೂ 192.3 ಸಾವಿರಕ್ಕಿಂತಲೂ ಅಧಿಕ ಲೈಕ್ಸ್ ಬಂದಿದೆ ಮತ್ತು ಸಾಕಷ್ಟು ಕಾಮೆಂಟ್‍ಗಳು ಹರಿದುಬರುತ್ತಿದೆ. ಇದನ್ನೂ ಓದಿ: ನಾನು ಭಾರತದ ಕೋವಿಶೀಲ್ಡ್ ವ್ಯಾಕ್ಸಿನ್ ಪಡೆದಿದ್ದೇನೆ: ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಅಧ್ಯಕ್ಷ ಅಬ್ದುಲ್ಲಾ ಶಾಹಿದ್
Advertisement