CrimeDistrictsKarnatakaLatestMain PostUttara Kannada

ಮೊಬೈಲ್ ಜಾಸ್ತಿ ಬಳಸಬೇಡ ಅಂದಿದ್ದಕ್ಕೆ ಯುವತಿ ಆತ್ಮಹತ್ಯೆ

ಕಾರವಾರ: ಮೊಬೈಲ್ ನೋಡದಂತೆ ಪೋಷಕರು ಬುದ್ಧಿವಾದ ಹೇಳಿದ್ದಕ್ಕೆ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಹಬ್ಬುವಾಡದಲ್ಲಿ ನಡೆದಿದೆ.

ಮೇಘ (20) ಆತ್ಮಹತ್ಯೆ ಮಾಡಿಕೊಂಡಿರುವ ಯುವತಿ. ಈಕೆ ಮೂಲತಃ ಸಿದ್ದಾಪುರದವಳು. ಪ್ಯಾರಾಮೇಡಿಕಲ್ ಕೋರ್ಸ್ ಮುಗಿಸಿಕೊಂಡಿದ್ದ ಯುವತಿ ಮೊಬೈಲ್ ಗೀಳು ಹಚ್ಚಿಕೊಂಡಿದ್ದಳು. ಇದಲ್ಲದೇ ಸ್ನೇಹಿತರೊಂದಿಗೆ ಮೊಬೈಲ್ ನಲ್ಲಿ ಹರಟುತ್ತಿದ್ದರಿಂದ ಪೋಷಕರು ತಿಳಿಹೇಳಿದ್ದಾರೆ. ಇದನ್ನೂ ಓದಿ: ಸೀಬೆ ಹಣ್ಣು ಕೀಳಲು ಹೋಗಿ ಪ್ರಾಣ ಕಳೆದುಕೊಂಡ ಸಹೋದರಿಯರು

ಹೆತ್ತವರ ಮಾತಿನಿಂದ ಕೋಪಗೊಂಡಿದ್ದ ಈಕೆ ಮನೆಯ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಘಟನೆ ಸಂಬಂಧ ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.

Back to top button