ಮುಂಬೈ: ಮಹಿಳೆಯರಿಗೆ ಬ್ಯೂಟಿ ಕಾನ್ಶಿಯಸ್ ಸ್ವಲ್ಪ ಜಾಸ್ತಿ. ಹೀಗಾಗಿ ತಾವು ಚಂದಗಾಣಬೇಕು ಎಂದು ಏನೆಲ್ಲ ಸರ್ಕಸ್ ಮಾಡುತ್ತಾರೆ. ಅಂತೆಯೇ ಇಲ್ಲೊಬ್ಬಳು ಯುವತಿ ತಾನು ಚಂದ ಕಾಣಿಸಬೇಕು ಎಂದು ಬರೋಬ್ಬರಿ 17,500 ರೂ ಕೊಟ್ಟು ಫೇಶಿಯಲ್ ಮಾಡಿಸಿಕೊಂಡಿದ್ದಾಳೆ. ಆದರೆ ಮುಂದೆ ಆಗಿದ್ದೇ ಬೇರೆ.
ಹೌದು. ಮುಖದ ಅಂದನ್ನು ಹೆಚ್ಚಿಸುವ ಸಲುವಾಗಿ ಯುವತಿ ಫೇಶಿಯಲ್ ಮಸಾಜ್ ಟ್ರೀಟ್ಮೆಂಟ್ ಮಾಡಿಸಿದ್ದಾಳೆ. ಆ ಬಳಿಕ ಆಕೆಯ ಮುಖದ ಚರ್ಮದಲ್ಲಿ ಸುಟ್ಟ ಗಾಯಗಳಾಗಿದ್ದು, ಶಾಶ್ವತ ಹಾನಿಗೊಳಗಾಗಿದೆ. ಈ ಹಿನ್ನೆಲೆ ಯುವತಿ ಮುಂಬೈನಲ್ಲಿರುವ ಬ್ಯೂಟಿ ಸಲೂನ್ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾಳೆ. ಇದನ್ನೂ ಓದಿ: ಸೆಕ್ಸ್ ನಡೆಸದಿರುವುದು ಹಿಂದೂ ವಿವಾಹ ಕಾಯ್ದೆ ಅಡಿ ಕ್ರೌರ್ಯ – IPC ಸೆಕ್ಷನ್ 498A ಅಡಿ ಅಲ್ಲ
Advertisement
Advertisement
ಏನಿದು ಟ್ರೀಟ್ಮೆಂಟ್..?: ವೈದ್ಯಕೀಯ-ದರ್ಜೆಯ ರೀಸರ್ಫೇಸಿಂಗ್ ಚಿಕಿತ್ಸೆ ಹೈಡ್ರಾಫೇಶಿಯಲ್. ಇದು ರಂಧ್ರಗಳನ್ನು ಕ್ಲಿಯರ್ ಮಾಡುತ್ತದೆ. ಅಲ್ಲದೆ ಚರ್ಮವನ್ನು ಕೂಡ ಹೈಡ್ರೇಟ್ ಮಾಡುತ್ತದೆ. ಪರವಾನಗಿ ಪಡೆದ ವೈದ್ಯಕೀಯ ವೃತ್ತಿಪರ ಅಥವಾ ಪ್ರಮಾಣೀಕೃತ ಹೈಡ್ರಾಫೇಶಿಯಲ್ ಸೌಂದರ್ಯಶಾಸ್ತ್ರಜ್ಞರು ಲಭ್ಯವಿರುವಲ್ಲಿ ಮಾತ್ರ ಈ ಚಿಕಿತ್ಸೆಯನ್ನು ನೀಡಲಾಗುತ್ತದೆ.
Advertisement
ಸದ್ಯ ಈ ಚಿಕಿತ್ಸೆ ಪಡೆದ ಯುವತಿಯಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಯುವತಿ ಚರ್ಮ ತಜ್ಞರನ್ನು ಸಂಪರ್ಕಿಸಿದ್ದಾರೆ. ಈ ವೇಳೆ ಮಸಾಜ್‍ನಿಂದ ಚರ್ಮದಲ್ಲಿ ಸುಟ್ಟಗಾಯಗಳು ಆಗಿರುವುದು ಬಯಲಾಗಿದೆ. ಈ ಸಮಸ್ಯೆ ಶಾಶ್ವತವಾಗಿ ಉಳಿಯುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಇದರಿಂದ ಬೇಸರಗೊಂಡು ಯುವತಿ ಸ್ಥಳೀಯ ಎಂಎನ್‍ಎಸ್ ಕಾರ್ಪೊರೇಟರ್ ಪ್ರಶಾಂತ್ ರಾಣೆ ಸಹಾಯದಿಂದ ಎಫ್‍ಐಆರ್ ದಾಖಲಿಸಿದ್ದಾರೆ.
Advertisement
ಇತ್ತ ಈ ಸಂಬಂಧ ಯುವತಿ ತನಗಾಗಿರುವ ಸಮಸ್ಯೆಯನ್ನು ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ. ಈ ಟ್ವೀಟ್ ವೈರಲ್ ಆಗಿದ್ದು, ಟ್ವಿಟ್ಟರ್ ಬಳಕೆದಾರರು ಘಟನೆಯ ಬಗ್ಗೆ ಆಘಾತದಿಂದ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಆತ್ಮೀಯ ಗೆಳೆಯನ ಜೊತೆಗೆ ತನ್ನ ಪತ್ನಿಯ ರಾಸಲೀಲೆ ನೋಡಿದ ಪತಿ ಮಟಾಶ್