ಶಿವಮೊಗ್ಗ: ಶಂಕಿತ ಡೆಂಗ್ಯೂಗೆ (Suspected Dengue) ಮಹಿಳೆಯೊಬ್ಬರು ಬಲಿಯಾದ ಘಟನೆ ಶಿವಮೊಗ್ಗ (Shivamogga) ಜಿಲ್ಲೆ ಹೊಸನಗರ ತಾಲೂಕಿನ ರಿಪ್ಪನ್ ಪೇಟೆಯಲ್ಲಿ (Ripponpet) ನಡೆದಿದೆ.
ರಶ್ಮಿ ಆರ್.ನಾಯಕ್ (42) ಮೃತ ಮಹಿಳೆ. ಕಳೆದ 15 ದಿನಗಳಿಂದ ರಶ್ಮಿ ತೀವ್ರ ಜ್ವರದಿಂದ ಬಳಲುತ್ತಿದ್ದು, ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದನ್ನೂ ಓದಿ: ಖರ್ಗೆಗೆ ಒಂದು ಕಡೆ ಲ್ಯಾಂಡ್ ಅಲಾಟ್ ಆಗಿದೆಯಂತೆ: ರಮೇಶ್ ಜಿಗಜಿಣಗಿ ಹೊಸ ಬಾಂಬ್
ಇಂದು ಚಿಕಿತ್ಸೆ ಫಲಕಾರಿಯಾಗದೇ ರಶ್ಮಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ಸೂರಜ್ ರೇವಣ್ಣ ಜಾಮೀನು ಅರ್ಜಿ ವಜಾ