CrimeLatestMain PostNational

ಅಳು ನಿಲ್ಲಿಸದ್ದಕ್ಕೆ ಮಕ್ಕಳನ್ನೇ ಕೊಂದು ಸುಟ್ಟು ಹಾಕಿದ ತಾಯಿ

ಮುಂಬೈ: ಮಹಿಳೆಯೊಬ್ಬಳು ತನ್ನ ನಾಲ್ಕು ತಿಂಗಳ ಮಗಳು ಹಾಗೂ 2 ವರ್ಷದ ಮಗ ನಿರಂತರವಾಗಿ ಅಳುತ್ತಿವೆ ಎಂದು ಇಬ್ಬರನ್ನು ಕೊಂದು ನಂತರ ಅವರ ದೇಹವನ್ನು ಸುಟ್ಟ ಅಮಾನವೀಯ ಘಟನೆ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.

ಧುರ್ಪಾದಬಾಯಿ ಗಣಪತ್ ನಿಮಲ್ವಾಡ್ (30) ಆರೋಪಿ. ಆಕೆಯ ತಾಯಿ ಮತ್ತು ಸಹೋದರ ಮಕ್ಕಳ ಶವಗಳನ್ನು ಸುಡಲು ಸಹಾಯ ಮಾಡಿದರು. ಮೇ 31 ಮತ್ತು ಜೂನ್ 1 ರಂದು ಸತತ ಎರಡು ದಿನಗಳಲ್ಲಿ ಜಿಲ್ಲೆಯ ಭೋಕರ್ ತಾಲೂಕಿನ ಪಾಂಡುರ್ನಾ ಗ್ರಾಮದಲ್ಲಿ ಹತ್ಯೆಗಳು ನಡೆದಿವೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಮೇ. 31ರಂದು ಧುರ್ಪಾದಬಾಯಿಯ ನಾಲ್ಕು ತಿಂಗಳ ಮಗಳು ಅನುಸೂಯಾ ತುಂಬಾ ಅಳುತ್ತಿದ್ದಳು. ಇದರಿಂದ ಕೋಪಗೊಂಡ ಧುರ್ಪಾದಬಾಯಿ ಆಕೆಯ ಕತ್ತು ಹಿಸುಕಿ ಕೊಂದಿದ್ದಾಳೆ. ಮರುದಿನ ಮಗನು ಅಳುತ್ತಿದ್ದನ್ನು ನೋಡಿ ಕೋಪಗೊಂಡು ಆತನ ಕತ್ತನ್ನು ಹಿಸುಕಿ ಕೊಂದಿದ್ದಾಳೆ. ಇದನ್ನೂ ಓದಿ: RSSಗೆ ಗೊತ್ತಾಗಿದೆ ಈ ಹೋರಾಟದಲ್ಲಿ ಸೋಲಾಗುತ್ತೆ ಅಂತಾ ಹಾಗಾಗಿ ಭಾಗವತ್ ಈ ಹೇಳಿಕೆ ನೀಡಿದ್ದಾರೆ: ಅಬ್ದುಲ್ ರಜಾಕ್

ಈ ಕೃತ್ಯವೆಸಗಲು ಮುಖೇಡ್ ತಾಲೂಕಿನ ನಿವಾಸಿಗಳಾದ ಧುರ್ಪಾದಬಾಯಿಯ ತಾಯಿ ಕೊಂಡಬಾಯಿ ರಾಜೇಮೋದ್ ಮತ್ತು ಸಹೋದರ ಮಾಧವ್ ರಾಜೇಮೋದ್ ಸಹಾಯ ಮಾಡಿದ್ದಾರೆ. ಇವರ ಸಹಾಯದೊಂದಿಗೆ ಮೃತ ಮಕ್ಕಳ ಶವವನ್ನು ಹೊಲದಲ್ಲಿ ಸುಟ್ಟುಹಾಕಿದ್ದಾಳೆ.

POLICE JEEP

ಘಟನೆ ಸಂಬಂಧಿಸಿ ಗ್ರಾಮಸ್ಥರು ನೀಡಿದ ಮಾಹಿತಿಯ ಮೇರೆಗೆ ಮೂವರ ವಿರುದ್ಧವೂ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಸಂಬಂಧ ಮೂವರನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ನಾವು ಅಧಿಕಾರಕ್ಕೆ ಬರದೇ ಹೋದ್ರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ತೀನಿ: ಸಿಎಂ ಇಬ್ರಾಹಿಂ

Leave a Reply

Your email address will not be published.

Back to top button