ಲಂಡನ್: ತನ್ನ ಸೈಕಲ್ ಕದ್ದು ಅದನ್ನು ಮಾರಾಟ ಮಾಡಲು ಯತ್ನಿಸಿದ ಕಳ್ಳನಿಗೆ ಮಹಿಳೆಯೊಬ್ಬರು ಚಳ್ಳೆ ಹಣ್ಣು ತಿನ್ನಿಸಿದ ಘಟನೆ ಲಂಡನ್‍ನಲ್ಲಿ ನಡೆದಿದೆ.
ಬ್ರಿಸ್ಟೋಲ್‍ನಲ್ಲಿ ಜೆನ್ನಿ ಮಾರ್ಟನ್ ಹಂಫ್ರೀಸ್ ಎಂಬ 30 ವರ್ಷದ ಮಹಿಳೆ ತನ್ನ ಸೈಕಲ್ ಕಳ್ಳತನವಾಗಿದೆ ಎಂದು ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿದ್ದರು. ಕಳ್ಳತನವಾದ ಸೈಕಲ್‍ನ ಫೋಟೋ ಹಾಕಿ ಸಹಾಯಕ್ಕಾಗಿ ಕೋರಿದ್ದರು. ಪೋಸ್ಟ್ ಹಾಕಿದ ಹಲವು ಗಂಟೆಗಳ ಬಳಿಕ ಕಳ್ಳತನವಾಗಿದ್ದ ಸೈಕಲನ್ನು ಕಳ್ಳ ಮಾರಾಟಕ್ಕಿಟ್ಟಿದ್ದು ಈ ಬಗ್ಗೆ ಫೇಸ್‍ಬುಕ್ ನಲ್ಲಿ ಜಾಹಿರಾತು ನೀಡಿದ್ದನ್ನು ಮತ್ತೊಬ್ಬ ಸೈಕ್ಲಿಸ್ಟ್ ಗಮನಿಸಿದ್ದರು.
Advertisement
ನಂತರ ಇಬ್ಬರೂ ಆ ಸೈಕಲನ್ನು ಕೊಳ್ಳಲು ತೀರ್ಮಾನಿಸಿದ್ರು. ಜೆನ್ನಿ ಮಾರ್ಟನ್ ಸಿಟಿ ಪೊಲೀಸರಿಗೆ ತನ್ನೊಂದಿಗೆ ಬಂದು ಕಳ್ಳನನ್ನು ಬಂಧಿಸುವಂತೆ ಮನವಿ ಮಾಡಿದ್ದರು. ಆದ್ರೆ ಪೊಲೀಸರು ಅದಕ್ಕೆ ಒಪ್ಪಿರಲಿಲ್ಲ. ಆದ್ರೆ ಜೆನ್ನಿ ಮಾರಾಟಗಾರರನ್ನು ಭೇಟಿಯಾಲು ತೀರ್ಮಾನಿಸಿದ್ರು. ಅದರಂತೆ ಮಾರಾಟಗಾರನನ್ನು ಸಂಪರ್ಕಿಸಿ ಭೇಟಿಗೆ ಸಮಯ ನಿಗದಿ ಮಾಡಿದ್ರು.
Advertisement
Advertisement
ನಾನು ಸೈಕಲ್ ಕೊಳ್ಳಲು ಆಸಕ್ತಿ ಇರುವವಳಂತೆ ವರ್ತಿಸಿದೆ. ಸೈಕಲ್ ಬಗ್ಗೆ ಆತನಿಗೆ ಏನೇನೋ ಪ್ರಶ್ನೆಗಳನ್ನ ಕೇಳಿದೆ. ಪೆಡಲ್ ತುಂಬಾ ಎತ್ತರದಲ್ಲಿದೆ, ನಾನು ಒಮ್ಮೆ ಸೈಕಲ್ ತುಳಿದು ಟೆಸ್ಟ್ ಮಾಡಲೇ ಎಂದು ಕೇಳಿದೆ ಅಂತ ಜೆನ್ನಿ ಟೆಲಿಗ್ರಾಫ್ ಪತ್ರಿಕೆಗೆ ಹೇಳಿದ್ದಾರೆ.
Advertisement
ನಂತರ ಜೆನ್ನಿ ಈ ಸಂದರ್ಭವನ್ನ ಉಪಯೋಗಿಸಿಕೊಂಡು ಸೈಕಲ್ ಟೆಸ್ಟ್ ಮಾಡಲೆಂದು ತೆಗೆದುಕೊಂಡು ಹೋದವರು ವಾಪಸ್ ಬರಲೇ ಇಲ್ಲ. ತನ್ನ ಪಾಡಿಗೆ ತನ್ನ ಸೈಕಲನ್ನ ತುಳಿದುಕೊಂಡು ಮನೆಗೆ ಹೋದರು.
ಇದರ ಮೇಲೆ ಬೋನಸ್ ಅಂದ್ರೆ ಆ ಕಳ್ಳ ಸೈಕಲ್ ಮಾರಾಟಕ್ಕೆ ಇಡುವ ಮುನ್ನ ಅದರ ಸಣ್ಣಪುಟ್ಟ ರಿಪೇರಿಗಳನ್ನ ಮಾಡಿಸಿದ್ದ.