ಬೀಜಿಂಗ್: ಸಾಕುನಾಯಿಯ ಹುಟ್ಟುಹಬ್ಬ ಆಚರಿಸಲು ಮಹಿಳೆಯೊಬ್ಬಳು 11 ಲಕ್ಷ ರೂ. ಖರ್ಚು ಮಾಡಿರುವ ವಿಚಿತ್ರ ಘಟನೆ ಚೀನಾದಲ್ಲಿ ನಡೆದಿದೆ.
ಚೀನಾದ ಹುನಾನ್ ಪ್ರಾಂತ್ಯದ ಚಾಂಗ್‍ಶಾದ ಕ್ಸಿಯಾಂಗ್‍ಜಿಯಾಂಗ್ ನದಿ ಬಳಿ ಪ್ರಾಣಿಪ್ರೇಮಿ ತನ್ನ ಸಾಕುನಾಯಿಯ 10ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಲು ಸುಮಾರು 1,00,000 ಯುವಾನ್(ರೂ 11 ಲಕ್ಷ) ರೂ. ಖರ್ಚು ಮಾಡಿದ್ದಾಳೆ. ಈ ಹುಟ್ಟುಹಬ್ಬಕ್ಕೆ 520 ಡ್ರೋನ್‍ಗಳನ್ನು ಬಾಡಿಗೆಗೆ ತೆಗೆದುಕೊಂಡಿರುವ ಸುದ್ದಿ ಎಲ್ಲರ ಹುಬ್ಬು ಏರಿಸುವಂತೆ ಮಾಡಿದೆ. ಇದನ್ನೂ ಓದಿ: ಅಧಿಕಾರದಲ್ಲಿದ್ದಾಗ ಕುಂಭಕರ್ಣ ನಿದ್ದೆ, ಈಗ ಮೇಕದಾಟು ಹೋರಾಟ: ಡಿಕೆಶಿಗೆ ಕಾರಜೋಳ ಟಾಂಗ್
ಮಹಿಳೆ ತನ್ನ ಸಾಕುನಾಯಿಯ ಹುಟ್ಟುಹಬ್ಬವನ್ನು ನದಿಯ ಪಕ್ಕ ಮಾಡಿದ್ದು ‘ಡೌಡೌಗೆ 10ನೇ ಹುಟ್ಟುಹಬ್ಬದ ಶುಭಾಶಯಗಳು’ ಎಂದು ಹೇಳಲು 520 ಡ್ರೋನ್‍ಗಳನ್ನು ಬಾಡಿಗೆಗೆ ತೆಗದುಕೊಂಡಿದ್ದಳು. ಈ ಮೂಲಕ ಅವು ಆಕಾಶದಲ್ಲಿ ನಾಯಿಗೆ ಹುಟ್ಟುಹಬ್ಬದ ವಿಶ್ ಮಾಡಿದೆ.
ಈ ಎಲೆಕ್ಟ್ರಾನಿಕ್ ಫ್ಲೈಯಿಂಗ್ ಮೆಷಿನ್‍ಗಳನ್ನು ಬಳಸಿದ ಈ ಮಹಿಳೆ, ಆಕಾಶದಲ್ಲಿ ಇವುಗಳಿಂದ ಹುಟ್ಟುಹಬ್ಬದ ಕೇಕ್, ನಾಯಿಯ ಹೆಸರನ್ನು ಚಿತ್ರಿಸಿ ಸ್ಪೆಷಲ್ ಆಗಿ ವಿಶ್ ಮಾಡಿದ್ದಾಳೆ. ನಂತರ ನಾಯಿಯ ಮುಂದೆ ಕೇಕ್ ಇಟ್ಟು ಹುಟ್ಟುಹಬ್ಬಕ್ಕೆ ಬಂದಿದ್ದ ಎಲ್ಲರೂ ಫುಲ್ ಖುಷಿಯಿಂದ ವಿಶ್ ಮಾಡಿದ್ದಾರೆ.
ಎತ್ತರದ ಅಪಾರ್ಟ್‍ಮೆಂಟ್‍ಗಳ ಬಳಿ ಡ್ರೋನ್‍ಗಳು ಹಾರಾಟವಿಲ್ಲದೇ ಒಂದೇ ಕಡೆ ನಿಂತಿರುವುದನ್ನು ನೋಡಿದ ಅಧಿಕಾರಿಗಳು ಡ್ರೋನ್ ಗಳನ್ನು ಹೊಡೆದುರುಳಿಸಿದ್ದಾರೆ. ನಾಗರಿಕರು ಅಪಾರ್ಟ್‍ಮೆಂಟ್ ಅಥವಾ ಯಾವುದೇ ನಾಗರಿಕ ಪ್ರದೇಶಗಳಲ್ಲಿ ಡ್ರೋನ್‍ಗಳನ್ನು ಹಾರಿಸಬೇಕಾದರೆ ಮೊದಲು ಪೊಲೀಸ್ ಅನುಮತಿ ಪಡೆಯಬೇಕು. ಆದರೆ ಇವರು ಅನುಮತಿ ಪಡೆದಿರಲಿಲ್ಲ. ಇದನ್ನೂ ಓದಿ: ಸೆಲ್ಫ್ ಕೋವಿಡ್ ಟೆಸ್ಟಿಂಗ್ ಮಾಡಿಕೊಳ್ಳುವವರಿಗೆ ಮಾರ್ಗಸೂಚಿ ನೀಡಬೇಕು: ಡಾ.ವಿಶಾಲ್ ರಾವ್
ಅಕ್ಟೋಬರ್‌ನಲ್ಲಿಯೂ ಸಹ ಹೆನಾನ್ ಪ್ರಾಂತ್ಯದ ಝೆಂಗ್‍ಝೌ ಹೈಟೆಕ್ ವಲಯದಲ್ಲಿರುವ ವಂಡಾ ಪ್ಲಾಜಾ ಶಾಪಿಂಗ್ ಮಾಲ್‍ನಲ್ಲಿ 200 ಕ್ಕೂ ಹೆಚ್ಚು ಡ್ರೋನ್‍ಗಳು ಆಕಾಶಕ್ಕೆ ಹಾರಿಸಲಾಗಿತ್ತು. ಆದರೆ ಈ ಡ್ರೋನ್ ಗಳು ರಸ್ತೆಗೆ ಬಿದ್ದಿದ್ದು, ಈ ಪರಿಣಾಮ ಪಾದಚಾರಿಗಳು ಭಯದಿಂದ ಕಿರುಚಾಡುತ್ತ ರಕ್ಷಣೆಗಾಗಿ ಅಲ್ಲಿಂದ ಓಡಿದ್ದರು.
ಈ ಘಟನೆಯಿಂದ ಜನರಿಗೆ ಯಾವುದೇ ರೀತಿಯ ತೊಂದರೆಯಾಗಿದೆ ಎಂದು ವರದಿಯಾಗಿಲ್ಲ. ಆದರೆ ಈ ವೇಳೆ ಪ್ರದರ್ಶನವನ್ನು ವೀಕ್ಷಿಸಲು ಬೀದಿಯಲ್ಲಿ ಮಕ್ಕಳು ಸೇರಿದಂತೆ ಸುಮಾರು 5,000 ಜನರು ಜಮಾಯಿಸಿದ್ದರು ಎಂದು ವರದಿಗಳ ಪ್ರಕಾರ ತಿಳಿದುಬಂದಿದೆ.