ಸಿಡ್ನಿ: ಸಾಮಾನ್ಯವಾಗಿ ಹೆಬ್ಬಾವುಗಳು ಮೊಲ, ನಾಯಿ, ಕುರಿಯಂತಹ ಪ್ರಾಣಿಗಳನ್ನ ತಿಂದು ಅವುಗಳ ಹೊಟ್ಟೆ ಊದಿಕೊಂಡಿರೋದನ್ನ ನೋಡಿರ್ತೀರ. ಹಾಗೆ ಕೆಲವೊಮ್ಮೆ ಹೆಬ್ಬಾವುಗಳು ಸಿಕ್ಕ ಸಿಕ್ಕ ವಸ್ತುಗಳನ್ನೆಲ್ಲಾ ನುಂಗಿಬಿಡುತ್ತವೆ ಅನ್ನೋದಕ್ಕೆ ಇಲ್ಲೊಂದು ಉದಾಹರಣೆ ಇದೆ. ಹೆಬ್ಬಾವೊಂದರ ಬಾಯಿಯಿಂದ ಟೆನ್ನಿಸ್ ಬಾಲ್ ಹೊರತೆಗೆಯೋ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Advertisement
ಸುಮಾರು 20 ನಿಮಿಷಗಳ ಕಾಲ ಪ್ರಯತ್ನಿಸಿ ಕೊನೆಗೂ ಹಾವು ನುಂಗಿದ್ದ ಟೆನ್ನಿಸ್ ಬಾಲ್ ಹೊರತೆಗೆಯಲಾಗಿದೆ.
Advertisement
ಆಸ್ಟ್ರೇಲಿಯಾದ ಟೌನ್ಸ್ ವಿಲ್ಲೆಯ ಬೆಲ್ಜಿಯನ್ ಗಾಡನ್ಸ್ ನಿವಾಸಿಯೊಬ್ಬರು ತಮ್ಮ ಮನೆಯ ಹಿತ್ತಲಿನಲ್ಲಿ ಈ ಹಾವು ಹರಿದಾಡೋದನ್ನ ನೋಡಿದ್ದರು. ಅದರ ದೇಹದಲ್ಲಿ ಏನೋ ಗೆಡ್ಡೆಯಂತಿರುವುದನ್ನು ನೋಡಿ ಉರಗ ತಜ್ಞ ಬ್ರೇನ್ ವೆಸ್ಟ್ ಅವರಿಗೆ ವಿಷಯ ತಿಳಿಸಿದ್ರು. ಬ್ರೇನ್ ವೆಸ್ಟ್ ಈ ಹಾವನ್ನು ಟೌನ್ಸ್ ವಿಲ್ಲೆಯ ಪಶುವೈದ್ಯಾಲಯಕ್ಕೆ ಕರೆದೊಯ್ದರು.
Advertisement
Advertisement
ಅಲ್ಲಿನ ವೈದ್ಯರಾದ ಟ್ರಿಶ್ ಪ್ರೆಂಡರ್‍ಗಾಸ್ಟ್, ಹಾವಿನ ಎಕ್ಸ್- ರೇ ತೆಗೆದರು. ಹಾವು ನುಂಗಿದ್ದ ಚೆಂಡು ಗಂಟಲಿನಿಂದ ತುಂಬಾ ಒಳಗೆ ಹೋಗಿಲ್ಲವಾದ್ದರಿಂದ ಅದನ್ನು ಹೊರತೆಗೆಯಬಹುದು ಎಂದು ವೈದ್ಯರು ಹೇಳಿದ್ದರು. ನಂತರ ಹಾವಿನ ಗಂಟಲಿನ ಭಾಗದಲ್ಲಿ ಮಸಾಜ್ ಮಾಡಿ ಬಾಲ್ ಹೊರತೆಗೆದಿದ್ದಾರೆ. ಈ ಹಾವಿಗೆ ಕೆಲ ದಿನ ಚಿಕಿತ್ಸೆ ನೀಡಿ ನಂತರ ಅರಣ್ಯಕ್ಕೆ ಬಿಡಲಾಗುತ್ತದೆ ಎಂದು ಹೇಳಿದ್ದಾರೆ.
ಬುಧವಾರದಂದು ಫೇಸ್‍ಬುಕ್‍ನಲ್ಲಿ ಅಪ್‍ಲೋಡ್ ಆಗಿರೋ ಈ ವೀಡಿಯೋ ಈಗಾಗಲೇ 1 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿದೆ.
https://www.youtube.com/watch?v=P1diUY5WGO4