ಬೀದರ್: ಉಚಿತ ರೇಷನ್ ಕಾರ್ಡ್ (Ration Card) ಎಂದು ಹೇಳಿದ್ದು, ಮಾಡಿಸೋಕೆ ಹೋದಾಗ 100, 200 ರೂ.ನಂತೆ ದುಡ್ಡು ಕೇಳುತ್ತಿದ್ದಾರೆ ಎಂದು ಜಿಲ್ಲಾಧ್ಯಕ್ಷನಿಗೆ ಮಹಿಳೆಯೊಬ್ಬಳು ಚಳಿ ಬಿಡಿಸಿರುವ ಘಟನೆ ಬೀದರ್‌ನ (Bidar) ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದಿದೆ.
ಬೀದರ್ ತಾಲೂಕಿನ ಜನವಾಡ ಗ್ರಾಮದಿಂದ ಪಂಚ ಗ್ಯಾರಂಟಿ ಯೋಜನೆಯ ವಸ್ತು ಪ್ರದರ್ಶನಕ್ಕೆ ಬಂದಿದ್ದ ವೇಳೆ ಈ ಘಟನೆ ನಡೆದಿದೆ. ಈ ವೇಳೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ಅಮೃತ್ ರಾವ್ ಚಿಮಕೊಡೆಗೆ ಸಚಿವ ರಹೀಂಖಾನ್‌ರ ಜನವಾಡ ಗ್ರಾಮದ ಮಹಿಳೆ ತರಾಟೆಗೆ ತೆಗೆದುಕೊಂಡಿದ್ದಾರೆ. ಫ್ರೀ ರೇಷನ್ ಕಾರ್ಡ್ ಅಂತ ಹೇಳಿದ್ದರು. ಈಗ ಕಾರ್ಡ್ ಮಾಡಿಸಲು ಹೋದರೆ 100, 200 ರೂ. ತೆಗೆದುಕೊಳ್ಳುತ್ತಿದ್ದಾರೆ. ಯಾರು ಕೇಳುವವರಿಲ್ಲ, ಹೇಳುವವರಿಲ್ಲ ಎಂದಿದ್ದಾರೆ.ಇದನ್ನೂ ಓದಿ: ಕಪಿಲ್ ಶರ್ಮಾ ಕೆಫೆ ಮೇಲೆ ಖಲಿಸ್ತಾನಿ ಭಯೋತ್ಪಾದಕರಿಂದ ಗುಂಡಿನ ದಾಳಿ
ನಮ್ಮ ಬಳಿ ವೋಟ್ ಕೇಳಲು ಬಂದಾಗ ರೇಷನ್ ಕಾರ್ಡ್ ಯಾಕಿಲ್ಲ ಎಂದು ಯಾರು ಕೇಳಲ್ಲ. ಈಗ ನಾನು ಗ್ರಾಮ ಪಂಚಾಯ್ತಿಗೆ ಅಲೆಯುತ್ತಿದ್ದೇನೆ. ಎಲೆಕ್ಷನ್ ಬಂದರೆ ಸಾಕು ನಾವೆಲ್ಲ ನಿಮ್ಮ ಕರ್ತವ್ಯಕ್ಕಾಗಿಯೇ ಇದ್ದೇವೆ ಎಂದು ಹೇಳುತ್ತಾರೆ. ಆದರೆ ಈಗ ಯಾರೂ ಕೇಳಲು ಬರುವುದಿಲ್ಲ ಎಂದು ಕಿಡಿಕಾರಿದ್ದಾರೆ.
ಪ್ರದರ್ಶನದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಕೂಡಾ ಭಾಗಿಯಾಗಿದ್ದರು. ಈ ವೇಳೆ ಮಹಿಳೆ ಹೀಗೆ ಮಾತನಾಡಿದ್ದು, ಜಿಲ್ಲಾಧ್ಯಕ್ಷರಿಗೆ ಮುಜುಗರ ತಂದಿದೆ.ಇದನ್ನೂ ಓದಿ: ರೀಲ್ಸ್ ಚಟ – ಟೆನ್ನಿಸ್ ಆಟಗಾರ್ತಿ ಮಗಳನ್ನು ಗುಂಡಿಕ್ಕಿ ಕೊಂದ ತಂದೆ