ಚೆನ್ನೈ: ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣ ಕೋವಿಡ್-19 ರೋಗಿ ಮೃತಪಟ್ಟಿರುವ ಘಟನೆ ತಮಿಳುನಾಡಿನ ಕಡಲೂರು ಜಿಲ್ಲೆಯಲ್ಲಿ ನಡೆದಿದೆ.
Advertisement
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವೀಡಿಯೋದಲ್ಲಿ, ಚಿದಂಬರಂ ಸರ್ಕಾರಿ ಆಸ್ಪತ್ರೆಯ ನರ್ಸ್‍ಗಳು ಮತ್ತು ಮಹಿಳೆಯ ಸಂಬಂಧಿ ಸೇರಿದಂತೆ ಇಬ್ಬರು ಮಹಿಳೆಯರು, ಮೃತಪಟ್ಟಿರುವ ಮಹಿಳೆಗೆ ಸಿಪಿಆರ್ ನೀಡುತ್ತಿರುವುದನ್ನು ಕಾಣಬಹುದಾಗಿದೆ. ಇನ್ನೂ ಈ ವೀಡಿಯೋವನ್ನು ಮಗ ಸೆರೆಹಿಡಿದಿದ್ದು, ಉಸಿರಾಟ ತೊಂದರೆಯಿಂದ ಬಳಲುತ್ತಿರುವುದನ್ನು ತನ್ನ ತಾಯಿಯನ್ನು ನೋಡಲು ವೈದ್ಯರಿಲ್ಲ ಎಂದು ಹೇಳುತ್ತಿರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ಏಷ್ಯಾದ ಹಳೆಯ ರಾಷ್ಟ್ರೀಯ ಉದ್ಯಾನವನಕ್ಕೆ ರಾಮಗಂಗಾ ಹೆಸರಿಡುವಂತೆ ಒತ್ತಾಯ
Advertisement
Advertisement
ಮೃತಪಟ್ಟ ಮಹಿಳೆಯನ್ನು ಸೆಂಥಾಮರೈ ಎಂದು ಗುರುತಿಸಲಾಗಿದೆ. ನರ್ಸ್‍ಗಳು ವೈದ್ಯರಿಗಾಗಿ ಆಸ್ಪತ್ರೆ ಪೂರ್ತಿ 20 ನಿಮಿಷಗಳ ಕಾಲ ಹುಡುಕಾಟ ನಡೆಸಿದ್ದಾರೆ. ಆದರೆ ಅವರಿಗೆ ವೈದ್ಯರು ಎಲ್ಲಿದ್ದಾರೆ ಎಂಬ ಅರಿವು ಕೂಡ ಇಲ್ಲ. ಈ ವೇಳೆ ನರ್ಸ್‍ಗಳಿಗೆ ಏನು ಮಾಡಬೇಕೆಂದು ಎಂದು ಕೂಡ ತಿಳಿದಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಈ ರೀತಿ ಪರಿಸ್ಥಿತಿ ಇದೆ ಎಂದು ಯುವಕ ತನ್ನ ಅಳಲನ್ನು ತೊಡಿಕೊಂಡಿದ್ದಾರೆ. ಇದನ್ನೂ ಓದಿ: 2023ರಲ್ಲೂ ಬೊಮ್ಮಾಯಿ ಸಿಎಂ ಆಗಿ ದಸರಾ ಉದ್ಘಾಟಿಸಲಿದ್ದಾರೆ: ಪ್ರತಾಪ್ ಸಿಂಹ
Advertisement
ಸೆಂಥಾಮರೈ ಅಕ್ಟೋಬರ್ 5ರಂದು ನಿಧನರಾದರೆ, ಅವರ ಪತಿ ಗೋತಂಡರಾಮನ್ ಕೂಡ ಕೋವಿಡ್ ಸೋಂಕಿನಿಂದ ಅಕ್ಟೋಬರ್ 1 ರಂದು ಸಾವನ್ನಪ್ಪಿದ್ದರು. ಸದ್ಯ ಈ ಘಟನೆ ಕುರಿತಂತೆ ತನಿಖೆ ನಡೆಸಲು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.