ನವದೆಹಲಿ: ಗೃಹಿಣಿ ತಮ್ಮ ಮನೆಯ ಮೆಟ್ಟಿಲಿನಿಂದ ಬಿದ್ದು, ಮಾಂಗಲ್ಯ ಸರ ಆಕೆಯ ಕುತ್ತಿಗೆ ಸೀಳಿ ಮೃತಪಟ್ಟಿರುವ ಘಟನೆ ದೆಹಲಿಯ ಗಾಂಧಿನಗರದಲ್ಲಿ ನಡೆದಿದೆ.
ಮೆಟ್ಟಿಲಿನಿಂದ ಗೃಹಿಣಿ ಜಾರಿಬಿದ್ದ ವೇಳೆ ತಾಳಿಯು ಆಕೆಯ ಕುತ್ತಿಗೆ ಸೀಳಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಗ್ರಾಮ ಪಂಚಾಯ್ತಿ ಕಚೇರಿಯಲ್ಲೇ ಪಿಡಿಒಗೆ ಕಿಸ್ ಕೊಟ್ಟ ಸದಸ್ಯ!
ದೆಹಲಿಯ ಗಾಂಧಿನಗರದ ರಘುವೀರ್‌ಪುರ 2ನೇ ಮುಖ್ಯರಸ್ತೆಯ 4ನೇ ಮನೆಯಲ್ಲಿ ಗೃಹಿಣಿಯೊಬ್ಬರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವ ಬಗ್ಗೆ ಮಧ್ಯಾಹ್ನ 12:39ರ ವೇಳೆಗೆ ಪೊಲೀಸ್ ನಿಯಂತ್ರಣಾ ಕೊಠಡಿಗೆ ಮಾಹಿತಿ ಬಂದಿದೆ. ತಕ್ಷಣವೇ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಗೃಹಿಣಿ ರಾಧಾದೇವಿ ಅವರ ಮೃತದೇಹ ಮೆಟ್ಟಿಲುಗಳ ಮೇಲೆ ಇತ್ತು. ಆಕೆಯ ಕುತ್ತಿಗೆ ಮೇಲೆ ಗಾಯದ ಗುರುತುಗಳಾಗಿದ್ದವು ಎಂದಿದ್ದಾರೆ. ಇದನ್ನೂ ಓದಿ: ದೇವೇಗೌಡ್ರು ಇಬ್ಬರ ಮೇಲೆ ಕೈ ಹಾಕ್ಕೊಂಡು ಹೋಗ್ತಾವ್ರೆ… ನಾಲ್ವರ ಮೇಲೆ ಹೋಗೋದು ಹತ್ತಿರದಲ್ಲೇ ಇದೆ: KN ರಾಜಣ್ಣ
ಘಟನೆಯ ಸಮಯದಲ್ಲಿ ಆಕೆಯ ನಾಲ್ಕು ವರ್ಷದ ಮಗ ಅವಳೊಂದಿಗೆ ಇದ್ದನು. ತನ್ನ ತಾಯಿ ಬಟ್ಟೆ ಒಣಗಿಸಲು ಟೆರೇಸ್‌ಗೆ ಹೋಗಿದ್ದು, ಕೆಳಗೆ ಬರುವಾಗ ಮೆಟ್ಟಿಲಿನಿಂದ ಜಾರಿ ಬಿದ್ದಿದ್ದಾಳೆ. ಆಕೆಯ ಗಂಟಲಿನ ಮೇಲೆ ಗಾಯದ ಗುರುತುಗಳಿದ್ದವು. ಆಕೆ ಮೆಟ್ಟಿಲಿನಿಂದ ಬಿದ್ದಾಗ ಕುತ್ತಿಗೆಯಲ್ಲಿದ್ದ ಮಂಗಳಸೂತ್ರ ಅವಳ ಗಂಟಲಿನ ಮೇಲೆ ಆಳವಾದ ಗಾಯವನ್ನು ಮಾಡಿ ಕತ್ತು ಸೀಳುವಂತೆ ಮಾಡಿದೆ. ಇದರಿಂದಾಗಿ ಆಕೆ ಮೃತಪಟ್ಟಿದ್ದಾಳೆ ಎಂದು ತಿಳಿಸಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಟಿಬಿ ಆಸ್ಪತ್ರೆಗೆ ರವಾನಿಸಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.