ನವದೆಹಲಿ: ಮಹಿಳೆಯೊಬ್ಬಳು ವಿಮಾನ ನಿಲ್ದಾಣದಲ್ಲಿ ಬಾಂಬ್ ಪದವನ್ನು ಹೇಳಿದ್ದಕ್ಕೆ ಕೇಂದ್ರಿಯ ಕೈಗಾರಿಕೆಯ ಭದ್ರತಾ ಪಡೆ (ಸಿಐಎಸ್‍ಎಫ್) ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಘಟನೆ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಮಹಿಳೆ ಕೊಲ್ಕತ್ತಾಗೆ ಹೋಗಬೇಕಿತ್ತು. ನಿಗದಿಯಾಗಿದ್ದ ಸಮಯಕ್ಕಿಂತ 4 ಗಂಟೆ ಮೊದಲೇ ವಿಮಾನ ನಿಲ್ದಾಣಕ್ಕೆ ಬಂದಿದ್ದ ಮಹಿಳೆಯನ್ನು ಹಲವಾರು ಬಾರಿ ತಪಾಸಣೆ ನಡೆಸಿದ್ದಾರೆ.
Advertisement
ತಪಾಸಣೆ ವೇಳೆ ಕಿರಿಕಿರಿ ಉಂಟಾಗಿ ಮಹಿಳೆ, “ನೀವು ಏನನ್ನು ಪರೀಕ್ಷಿಸುತ್ತಿದ್ದೀರಿ ನನ್ನ ಬಳಿ ಬಾಂಬ್ ಇದೆ” ಎಂದು ಜೋರಾಗಿ ಕಿರುಚಿದ್ದಾಳೆ. ಮಹಿಳೆ ಆ ರೀತಿ ಹೇಳುತ್ತಿದ್ದಂತೆ ಸಿಐಎಸ್‍ಎಫ್ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಆಕೆಯನ್ನು ವಿಚಾರಣೆಗೆ ಕರೆದುಕೊಂಡು ಹೋಗಿದ್ದಾರೆ.
Advertisement
Advertisement
ಕೊಲ್ಕತ್ತಾ ಹೋಗುವ ವಿಮಾನದ ಸಮಯ 4.45ಗೆ ನಿಗದಿಯಾಗಿತ್ತು. ಆದರೆ ಸೆಕ್ಯೂರಿಟಿ ಚೆಕ್ ಗಾಗಿ ಮಹಿಳೆ ಸುಮಾರು 1 ಗಂಟೆಗೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.
Advertisement
ಮಹಿಳೆಯನ್ನು ಕೆಳಗಿಳಿಸಿ ಆಕೆಯ ಲಗೇಜ್ ಬ್ಯಾಗ್ ಗಳನ್ನು ಸಂಪೂರ್ಣವಾಗಿ ಸ್ಕ್ಯಾನ್ ಮಾಡಲಾಗಿತ್ತು. ಬಳಿಕ ಲಗ್ಗೇಜ್‍ನಲ್ಲಿ ಯಾವುದೇ ಬಾಂಬ್ ಇಲ್ಲ ಎಂದು ಖಚಿತಪಡಿಸಿದ ನಂತರ ಮಹಿಳೆಯನ್ನು ಹಾಗೂ ಆಕೆಯ ಸಹ ಪ್ರಯಾಣಿಕರನ್ನು ವಿಮಾನ ಹತ್ತಲು ಅನುಮತಿ ನೀಡಲಾಗಿದೆ. ವಿಚಾರಣೆ ವೇಳೆ ಸೆಕ್ಯೂರಿಟಿ ಚೆಕ್ಕಿಂಗ್ ಕಿರಿಕಿರಿಯಿಂದ ಸಿಟ್ಟಾಗಿ ಈ ರೀತಿ ಹೇಳಿದ್ದಾಳೆಂದು ತಿಳಿದು ಬಂದಿದೆ.