ಡಿಜೆ ಸೌಂಡ್ ನಿಲ್ಲಿಸಲು ಹೇಳಿದ್ದಕ್ಕೆ ಗರ್ಭಿಣಿ ಮೇಲೆ ಗುಂಡು ಹಾರಿಸಿದ ನೆರೆಮನೆಯಾತ

Public TV
1 Min Read
dj song

ನವದೆಹಲಿ: ಗರ್ಭಿಣಿಯೊಬ್ಬಳು (Pregnant) ಡಿಜೆ (DJ) ಸಂಗೀತದ ಸೌಂಡ್ ಅನ್ನು ನಿಲ್ಲಿಸುವಂತೆ ಹೇಳಿದ್ದಕ್ಕೆ ನೆರೆಯವರು ಆಕೆ ಮೇಲೆ ಗುಂಡು ಹಾರಿಸಿ ಗರ್ಭಪಾತವಾದ ಘಟನೆ ವಾಯುವ್ಯ ದೆಹಲಿಯಲ್ಲಿ (Delhi) ನಡೆದಿದೆ.

ಸಿರಸ್‍ಪುರದ ನಿವಾಸಿ ರಂಜು ಗುಂಡು ತಗುಲಿದ ಮಹಿಳೆ. ರಂಜು ಮನೆಯ ನೆರೆ ಮನೆಯಲ್ಲಿ ಸಮಾರಂಭವೊಂದು ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಮನೆಯ ಮಾಲೀಕ ಹರೀಶ್ ಡಿಜೆಯನ್ನು ಕರೆಸಿದ್ದ. ಜೋರಾಗಿ ಮ್ಯೂಸಿಕ್ ಹಾಕಲಾಗಿತ್ತು. ಈ ಹಿನ್ನೆಲೆಯಲ್ಲಿ ಗರ್ಭಿಣಿ ರಂಜು ಮನೆಯ ಬಾಲ್ಕನಿಗೆ ಬಂದು ಹರೀಶ್‍ಗೆ ಮ್ಯೂಸಿಕ್  ನಿಲ್ಲಿಸುವಂತೆ ಕೇಳಿಕೊಂಡಿದ್ದಾಳೆ.

husband forced a woman to eat human bones to get pregnant

ಇದರಿಂದ ಕೋಪಕೊಂಡ ಹರೀಶ್ ತನ್ನ ಸ್ನೇಹಿತ ಅಮಿತ್ ಬಳಿಯಿದ್ದ ಗನ್‍ನಿಂದ ಗುಂಡು ಹಾರಿಸಿದ್ದಾನೆ. ಈ ವೇಳೆ ರಂಜು ಕುತ್ತಿಗೆಗೆ ತಗುಲಿದೆ. ಘಟನೆಗೆ ಸಂಬಂಧಿಸಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗರ್ಭಿಣಿಯ ಮೇಲೆ ಗುಂಡು ಹಾರಿಸಿದ ಹರೀಶ್ ಮತ್ತು ಆತನ ಸ್ನೇಹಿತ ಅಮಿತ್ ಎಂಬಾತನನ್ನು ಬಂಧಿಸಿದ್ದಾರೆ. ಹರೀಶ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದು, ಅಮಿತ್ ಮೊಬೈಲ್ ರಿಪೇರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾನೆ.

ARREST

ರಂಜುವಿನ ಪತಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಕುಟುಂಬವು ಬಿಹಾರಕ್ಕೆ ಸೇರಿದ್ದು, ಇಲ್ಲಿ ಬಾಡಿಗೆ ವಸತಿಗೃಹದಲ್ಲಿ ವಾಸಿಸುತ್ತಿದೆ. ಘಟನೆ ವೇಳೆ ಮಹಿಳೆಯ ಕುತ್ತಿಗೆಗೆ ಗುಂಡೇಟು ತಗುಲಿದ್ದು, ಸ್ಥಿತಿ ಚಿಂತಾಜನಕವಾಗಿದೆ. ಈ ಹಿನ್ನೆಲೆಯಲ್ಲಿ ಆಕೆಯನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಪತಿ ಇಲ್ಲದಿರುವ ನೋವು ನನಗೆ ಕಾಡುತ್ತಿದೆ: ಕುಸುಮಾ ಶಿವಳ್ಳಿ

POLICE JEEP 1

ಘಟನೆ ಕುರಿತು ಸಂತ್ರಸ್ತೆಯ ತಾಯಿ ಸಂಧ್ಯಾ ದೇವಿ ಮಾತನಾಡಿ, ರಂಜುಗೆ ಗರ್ಭಪಾತವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಆಕೆಯ ಕುತ್ತಿಗೆಗೆ ಬುಲೆಟ್ ತಗುಲಿದೆ. ಈ ಹಿನ್ನೆಲೆಯಲ್ಲಿ ಆಕೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ಶಸ್ತ್ರಚಿಕಿತ್ಸೆಯ ಸಾಧ್ಯತೆಯಿದೆ. ಅವರಿಗೆ ಮೂರು ಮಕ್ಕಳಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: 12 ಚುನಾವಣೆಗಳಲ್ಲಿ ಒಂದೇ ಕುಟುಂಬದವರ ಆಯ್ಕೆ – ಎನ್.ಆರ್‌. ಕ್ಷೇತ್ರದಲ್ಲಿ ಸೇಠ್ ಫ್ಯಾಮಿಲಿ ಅಧಿಪತ್ಯ!

Share This Article