ಮುಂಬೈ: ಬ್ಯಾಂಕ್ನ ಓಟಿಪಿ(ಒನ್ ಟೈಮ್ ಪಾಸವರ್ಡ್)ಯನ್ನು ದುರ್ಬಳಕೆ ಮಾಡಿಕೊಂಡು ಮಹಿಳೆಯ ಖಾತೆಯಿಂದ 7 ಲಕ್ಷ ರೂಪಾಯಿಗಳನ್ನು ವಂಚನೆ ಮಾಡಿದ ಘಟನೆ ಮಹಾರಾಷ್ಟ್ರದ ನವಿ ಮುಂಬೈನಲ್ಲಿ ನಡೆದಿದೆ.
40 ವರ್ಷದ ನೆರುಲ್ ಹಣ ಕಳೆದುಕೊಂಡ ಮಹಿಳೆ. ತಸ್ನೀಮ್ ಮುಜ್ಜಕ್ಕರ್ ಮೊದಕ್ ಹೆಸರಿನ ಆರೋಪಿಯು ಮೇ 17ರಂದು ಮಹಿಳೆಗೆ ಕರೆ ಮಾಡಿ ತನ್ನನ್ನು ಬ್ಯಾಂಕ್ ಅಧಿಕಾರಿಯೆಂದು ಪರಿಚಯಿಸಿಕೊಂಡಿದ್ದಾನೆ. ನಿಮ್ಮ ಎಟಿಎಂ ಕಾರ್ಡ್ ತಾತ್ಕಾಲಿಕವಾಗಿ ಸ್ಥಗಿತವಾಗಿದ್ದು, ಪುನಃ ಸರಿಪಡಿಸಲು ಎಟಿಎಂನ ಮಾಹಿತಿಗಳನ್ನು ಕೇಳಿದ್ದಾನೆ.
Advertisement
ಇದನ್ನು ನಂಬಿದ ಆಕೆಯು ತನ್ನ ಎಟಿಎಂನ 16 ಅಂಕಿಗಳು ಹಾಗೂ ಎಲ್ಲಾ ಗುಪ್ತ ಮಾಹಿತಿಗಳನ್ನು ಆರೋಪಿಯೊಂದಿಗೆ ಹಂಚಿಕೊಂಡಿದ್ದಾರೆ. ಕಳೆದ ಒಂದು ವಾರದಿಂದ ಆರೋಪಿಯು 28 ಬಾರಿ ಮೊಬೈಲ್ಗೆ ಓಟಿಪಿಯನ್ನು ಕಳುಹಿಸಿದ್ದ, ಸಂದೇಶಗಳನ್ನು ಅವನೊಂದಿಗೆ ಹಂಚಿಕೊಂಡಿದ್ದಾರೆ. ಬಳಿಕ ಖಾತೆಯಿಂದ ಒಟ್ಟು 7 ಲಕ್ಷ 20 ಸಾವಿರ ರೂಪಾಯಿ ಕಡಿತಗೊಂಡಾಗ ಅನುಮಾನಗೊಂಡು ಬ್ಯಾಂಕ್ನಲ್ಲಿ ವಿಚಾರಿಸಿದ್ದಾರೆ. ಬ್ಯಾಂಕ್ನಲ್ಲಿ ವಂಚನೆಯಾಗಿರುವುದು ತಿಳಿದ ಬಳಿಕ ಪೊಲೀಸರಿಗೆ ದೂರನ್ನು ನೀಡಿದ್ದಾರೆ.
Advertisement
ಪೊಲೀಸ್ ಅಧಿಕಾರಿಯಾದ ಬಿ. ಎನ್. ಆಟಿರವರು ಮಾತನಾಡಿ, ಆರೋಪಿಯು ಮಹಿಳೆಗೆ ಬ್ಯಾಂಕ್ ಅಧಿಕಾರಿಯೆಂದು ಕರೆ ಮಾಡಿದ್ದಾನೆ. ಮಹಿಳೆಯ ಎಟಿಎಂನ ಮಾಹಿತಿಯನ್ನು ಪಡೆದುಕೊಂಡು ಹಂತ ಹಂತವಾಗಿ ಹಣ ಎಗರಿಸಿದ್ದಾನೆ. ಒಟ್ಟು ಆರೋಪಿಯು 6,98,973 ರೂಪಾಯಿ ವಂಚನೆ ಮಾಡಿದ್ದು, ಆರೋಪಿಯು ಮೂರು ಬೇರೆ ಬೇರೆ ಸಿಮ್ಗಳನ್ನು ಕೃತ್ಯಕ್ಕೆ ಬಳಸಿರುವುದು ತಿಳಿದು ಬಂದಿದೆ. ಮುಂಬೈ, ನೋಯ್ಡಾ, ಗುರುಗಾವ್, ಕೊಲ್ಕತ್ತಾ ಮತ್ತು ಬೆಂಗಳೂರಿನ ವಿವಿಧ ನಗರಗಳಲ್ಲಿ ಆನ್ಲೈನ್ ಮೂಲಕ ವಹಿವಾಟು ನಡೆಸಿದ್ದಾನೆಂದು ತಿಳಿದು ಬಂದಿದೆ ಎಂದು ಹೇಳಿದ್ದಾರೆ.
Advertisement
ಹೆಚ್ಚಿನ ಆನ್ಲೈನ್ ವಂಚನೆಗಳಲ್ಲಿ ಆರೋಪಿಗಳು ತಾವು ಬ್ಯಾಂಕ್ನ ಸಿಬ್ಬಂದಿಗಳೆಂದು ವಂಚಿಸುತ್ತಿರುವುದು ಬೆಳಕಿಗೆ ಬಂದಿದೆ. ಪೊಲೀಸರು ಮಾಧ್ಯಮಗಳ ಮೂಲಕ ಗ್ರಾಹಕರನ್ನು ಎಚ್ಚರಿಸುತ್ತಿದ್ದರೂ, ಗ್ರಾಹಕರು ಪದೇ ಪದೇ ಇಂತಹ ವಂಚನೆ ಪ್ರಕರಣಗಳಿಗೆ ಬಲಿಯಾಗುತ್ತಿರುವುದು ಶೋಚನೀಯ ಸಂಗತಿಯಾಗಿದೆ. ಯಾವುದೇ ಬ್ಯಾಂಕ್ನ ಸಿಬ್ಬಂದಿ ಅಥವಾ ಅಧಿಕಾರಿಗಳಾಗಲಿ ಗ್ರಾಹಕರಿಗೆ ಕರೆ ಮಾಡಿ ಯಾವುದೇ ಮಾಹಿತಿ ಪಡೆಯುವುದಿಲ್ಲವೆಂದು ಈ ವೇಳೆ ತಿಳಿಸಿದ್ದಾರೆ.