ಭುವನೇಶ್ವರ್: 23 ವರ್ಷದ ಮಹಿಳೆಯೊಬ್ಬರ ಮೇಲೆ ಮಾವನೇ ಅತ್ಯಾಚಾರವೆಸಗಿ ಬೆಂಕಿ ಹಚ್ಚಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಒಡಿಶಾದ ಮಯೂರ್‍ಬಂಜ್ ಜಿಲೆಯಲ್ಲಿ ನಡೆದಿದೆ.
ಶೇ. 80 ರಷ್ಟು ಸುಟ್ಟಗಾಯಗಳಾಗಿದ್ದ ಮಹಿಳೆಯನ್ನು ಜಾರ್ಖಂಡ್‍ನ ಜಮ್ಶೆದ್‍ಪುರ್‍ನಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಭಾನುವಾರ ಬೆಳಗ್ಗೆ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ಮಯೂರ್‍ಬಂಜ್ ಎಎಸ್‍ಪಿ ಅಶೋಕ್ ಪಟ್ನಾಯಕ್ ಹೇಳಿದ್ದಾರೆ. ಮಯೂರ್‍ಬಂಜ್ ಎಸ್‍ಪಿ ಅನಿರುದ್ಧ್ ಸಿಂಗ್ ಜಮ್ಶೆದ್‍ಪುರ್‍ಗೆ ಹೋಗಿ ಸಂತ್ರಸ್ತೆಯ ಕುಟುಂಬಸ್ಥರ ಹೇಳಿಕೆಯನ್ನ ದಾಖಲಿಸಿಕೊಳ್ತಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ತರಲು ವ್ಯವಸ್ಥೆ ಮಡಲಾಗ್ತಿದೆ ಎಂದು ಅವರು ಹೇಳಿದ್ದಾರೆ.
- Advertisement
ಶುಕ್ರವಾರ ರಾತ್ರಿ ವೇಳೆ ರಾಯ್‍ರಂಗ್‍ಪುರ್ ನಲ್ಲಿ ಮಹಿಳೆ ತನ್ನ ಅತ್ತೆ ಮನೆಯಲ್ಲಿ ಒಬ್ಬರೇ ಇದ್ದ ವೇಳೆ ಈ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
- Advertisement
ಮಹಿಳೆಯ ತಂದೆ ರಾಯ್‍ರಂಗ್‍ಪುರ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಿದ್ದಾರೆ. ಮನೆಯಲ್ಲಿ ರಾತ್ರಿ ಎಲ್ಲರೂ ಹೊರಗಡೆ ಹೋಗಿದ್ದ ವೇಳೆ ಮಹಿಳೆಯ ಮಾವ ರಾಮ್‍ಗೋಪಾಲ್ ಆಕೆಯ ಮೇಲೆ ದಾಳಿ ಮಾಡಿ ಅತ್ಯಾಚಾರವೆಸಗಿದ್ದಾನೆ. ಸಂತ್ರಸ್ತೆ ಈ ವಿಚಾರವನ್ನ ಕುಟುಂಬಸ್ಥರಿಗೆ ಹೇಳುವುದಾಗಿ ಎಚ್ಚರಿಕೆ ನೀಡಿದಾಗ ಆರೋಪಿ ಆಕೆಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಆರೋಪಿ ಮಾವ ರಾಮ್‍ಗೋಪಾಲ್(55) ನನ್ನು ಬಂಧಿಸಲಾಗಿದೆ ಎಂದು ಎಎಸ್‍ಪಿ ಹೇಳಿದ್ದಾರೆ. ಮಹಿಳೆ ರಾಮ್‍ಗೋಪಾಲ್ ನ ಮಗ ಅವಿನಾಶ್ ಅವರನ್ನ ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.