ಜೈಪುರ್: ಅಪ್ರಾಪ್ತನನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದ 30 ವರ್ಷದ ಮಹಿಳೆಗೆ ರಾಜಸ್ಥಾನದ (Rajasthan) ಬುಂಡಿಯ ನ್ಯಾಯಾಲಯ (Court) 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
2023ರ ಅಕ್ಟೋಬರ್‌ನಲ್ಲಿ ಲಾಲಿಬಾಯಿ ಮೊಗಿಯಾ ಎಂಬಾಕೆ 16 ವರ್ಷದ ಬಾಲಕನನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಳು. ಈ ಸಂಬಂಧ ಪೋಕ್ಸೋ (POCSO) ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಮಹಿಳೆಗೆ 20 ವರ್ಷ ಜೈಲು, 45,000 ರೂ. ದಂಡ ವಿಧಿಸಿದೆ.
ಬಾಲಕನ ತಾಯಿ ನೀಡಿದ್ದ ದೂರಿನಲ್ಲಿ, ಮೊಗಿಯ, 16 ವರ್ಷದ ಮಗನನ್ನು ಜೈಪುರಕ್ಕೆ ಕರೆದೊಯ್ದು, ಹೋಟೆಲ್‌ನಲ್ಲಿ ತಂಗಿದ್ದಳು. ಬಾಲಕನಿಗೆ ಕುಡಿಸಿ ಆರರಿಂದ ಏಳು ದಿನಗಳ ಕಾಲ ಲೈಂಗಿಕ ದೌರ್ಜನ್ಯ ಎಸಗಿದ್ದಳು ಎಂದು ಆರೋಪಿಸಲಾಗಿತ್ತು. ಇದನ್ನೂ ಓದಿ: ಪ್ರಜ್ವಲ್ ರೇವಣ್ಣಗೆ ಇಲ್ಲ ಜಾಮೀನು
ತಾಯಿಯ ದೂರಿನ ಅನ್ವಯ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 363 (ಅಪಹರಣ), ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯಡಿ (ಪೋಕ್ಸೋ) ಪ್ರಕರಣ ದಾಖಲಿಸಲಾಗಿತ್ತು.
ಆರಂಭಿಕ ತನಿಖೆಯ ನಂತರ ಮೊಗಿಯಳನ್ನು ಬಂಧಿಸಲಾಯಿತು. ಆಕೆ ಜಾಮೀನಿನ ಮೇಲೆ ಹೊರಗೆ ಬಂದಿದ್ದಳು. ವಿಚಾರಣೆಯ ನಂತರ ಪೋಕ್ಸೊ ನ್ಯಾಯಾಲಯವು ಆಕೆಯನ್ನು ಅಪರಾಧಿ ಎಂದು ನ್ಯಾಯಾಲಯ ಘೋಷಿಸಿದೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ತಿಳಿಸಿದ್ದಾರೆ. ಇದನ್ನೂ ಓದಿ: ಕಾರವಾರ| ಮಟ್ಕಾ ಆಡಿಸಲು ಲಂಚ ಪಡೆದ ಪೊಲೀಸ್‌ಗೆ 8 ವರ್ಷಗಳ ಬಳಿಕ ಜೈಲು ಶಿಕ್ಷೆ