ವಾಷಿಂಗ್ಟನ್: ಸಾಮಾನ್ಯವಾಗಿ ಪ್ರೇಮಿಗಳ ಮಧ್ಯೆ ಜಗಳವಾದರೆ ಕೆಲವು ಮೆಸೇಜ್ ಮಾಡಿ ಅಥವಾ ಕರೆ ಮಾಡಿ ಮಾತನಾಡಿ ಸರಿ ಮಾಡಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ಮಹಿಳೆ ಪ್ರಿಯತಮನಿಗೆ ಬರೋಬ್ಬರಿ 1.59 ಲಕ್ಷ ಮೆಸೇಜ್ ಗಳನ್ನು ಕಳುಹಿಸಿದ್ದಾಳೆ.
ಈ ಘಟನೆ ಅಮೆರಿಕದ ಅರಿಜೋನಾ ರಾಜ್ಯದಲ್ಲಿ ನಡೆದಿದ್ದು, 31 ವರ್ಷದ ಜಾಕ್ವೆಲಿನ್ ಅಡೆಸ್ ಎಂಬಾಕೆ ಪ್ರಿಯತಮನಿಗೆ 1.59 ಲಕ್ಷ ಮೆಸೇಜ್ ಮಾಡಿದ್ದಾಳೆ. ಈಕೆ ತನ್ನ ಪ್ರೀತಿ ಪ್ರಸ್ತಾಪವನ್ನು ತಿರಸ್ಕರಿಸಿದ ಕಾರಣಕ್ಕೆ 1.59 ಲಕ್ಷ ಮೆಸೇಜ್‍ಗಳನ್ನು ಕಳುಹಿಸಿದ್ದಾಳೆ. ಸದ್ಯಕ್ಕೆ ಪೊಲೀಸರು ಜಾಕ್ವೆಲಿನ್ ಅಡೆಸ್ ನನ್ನು ಬಂಧಿಸಿದ್ದಾರೆ.
Advertisement
Advertisement
ಜಾಕ್ವೆಲಿನ್ ಅಡೆಸ್ ಅಷ್ಟಕ್ಕೆ ಸುಮ್ಮನಾಗದೇ ಅನೇಕ ಬಾರಿ ಪ್ರಿಯತಮನ ಮನೆಗೆ ನುಗ್ಗಿ ಆತನ ಬಾತ್ ರೂಮ್ ಕೂಡ ಬಳಸಿ ಬಂದಿದ್ದಳಂತೆ ಎಂದು ವರದಿಯಾಗಿದೆ. ಬಳಿಕ ಪ್ರಿಯತಮ ಪೊಲೀಸ್ರಿಗೆ ದೂರು ಕೊಟ್ಟಿದ್ದಾನೆ. ಆತನ ದೂರಿನ ಆಧಾರದ ಮೇರೆಗೆ ಪೊಲೀಸರು ಪೋನಿಕ್ಸ್ ನಲ್ಲಿರುವ ಆಕೆಯ ಮನೆಯಲ್ಲಿಯೇ ಬಂಧಿಸಿದ್ದಾರೆ. ಈ ವೇಳೆ ಆಕೆಯ ಕಾರಿನಲ್ಲಿ ಚಾಕು ಪತ್ತೆಯಾಗಿದ್ದು, ಅದನ್ನು ವಶಪಡಿಸಿಕೊಂಡಿದ್ದಾರೆ.
Advertisement
ಅಂದಹಾಗೆ ಜಾಕ್ವೆಲಿನ್ ಅಡೆಸ್ ವೃತ್ತಿಯಲ್ಲಿ ಬ್ಯೂಟಿಷಿಯನ್ ಆಗಿದ್ದು, ಫ್ಲೋರಿಡಾದಿಂದ ಉದ್ಯೋಗಕ್ಕಾಗಿ ಪೋನಿಕ್ಸ್ ಗೆ ಬಂದಿದ್ದಳು. ಪ್ರಿಯತಮ ಸ್ಕಿನ್‍ಕೇರ್ ಪ್ರಾಡಕ್ಟ್ಸ್ ಕಂಪನಿಯ ಸಿಇಒ ಆಗಿದ್ದನು. ಇವರಿಬ್ಬರು ಡೇಟಿಂಗ್ ಸೈಟ್ ಮೂಲಕ ಭೇಟಿಯಾಗಿದ್ದು, ಒಮ್ಮೆ ಇಬ್ಬರೂ ಕೂಡ ಡೇಟ್ ಮಾಡಿದ್ದಾರೆ. ಬಳಿಕ ಜಾಕ್ವೆಲಿನ್ ಅಡೆಸ್ ಮತ್ತೆ ಆತನನ್ನು ಡೇಟ್‍ಗೆ ಕರೆದಿದ್ದಾಳೆ. ಆದರೆ ಆತನಿಗೆ ಜಾಕ್ವೆಲಿನ್ ಅಡೆಸ್ ಜೊತೆಗೆ ಹೋಗಲು ಇಷ್ಟವಿರಲಿಲ್ಲ. ಆದ್ದರಿಂದ ಆಕೆಯೊಂದಿಗೆ ಡೇಟಿಂಗ್ ಹೋಗಲು ನಿರಾಕರಿಸಿದ್ದಾನೆ.
Advertisement
ಇದರಿಂದ ಕೋಪಗೊಂಡ ಜಾಕ್ವೆಲಿನ್ ಅಡೆಸ್ ಈ ರೀತಿಯಾಗಿ ಲಕ್ಷಗಟ್ಟಲೆ ಮೆಸೇಜ್ ಮಾಡಿದ್ದಾಳೆ. ಜಾಕ್ವೆಲಿನ್ ಅಡೆಸ್ ಮೆಸೇಜ್ ಗಳಲ್ಲಿ ಅನೇಕ ಕೋರಿಕೆಗಳಿದ್ದವು, ಜೊತೆಗೆ ಕೆಲವು ಎಚ್ಚರಿಕೆಗಳು ಮತ್ತು ಬೆದರಿಕೆ ಸಂದೇಶಗಳು ಕೂಡ ಇದ್ದವು.
“ನೀನಿಲ್ಲಿಗೆ ಬರಲು ಅದೇನು ಬೇಕಾದರೂ ಮಾಡು, ಆದರೆ ನನ್ನನ್ನು ಬಿಟ್ಟಿರಲು ಪ್ರಯತ್ನಿಸಬೇಡ, ನಾನು ನಿನ್ನನ್ನು ಕೊಲೆ ಮಾಡುತ್ತೇನೆ. ಆದರೆ ನನಗೆ ಕೊಲೆಗಾರ್ತಿಯಾಗಲು ಇಷ್ಟವಿಲ್ಲ” ಎಂದೆಲ್ಲ ವಿಚಿತ್ರ ಸಂದೇಶ ಕಳುಹಿಸಿದ್ದಾಳೆ. ಈಗ ಇದೇ ಕಾರಣಕ್ಕೆ ಪೊಲೀಸರು ಈಕೆಯನ್ನು ಬಂಧಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv