– ಆಂಟಿ ಬಂಧನಕ್ಕೆ ಮುಂದಾಗಿರುವ ಪೊಲೀಸರು
– ಬಾಲಕಿಯ ತಾಯಿಯಿಂದ ದೂರು ದಾಖಲು
ಭೋಪಾಲ್: 11 ವರ್ಷದ ಬಾಲಕಿಗೆ ಸೆಕ್ಸ್ ವೀಡಿಯೋ ಕಳಿಸುತ್ತಿದ್ದ ಮಹಿಳೆ ವಿರುದ್ಧ ಮಧ್ಯ ಪ್ರದೇಶದ ಗ್ವಾಲಿಯರ್ ನಲ್ಲಿ ಎಫ್‍ಐಆರ್ ದಾಖಲಾಗಿದೆ. ಆರೋಪಿ ಮಹಿಳೆ ಭೋಪಾಲ್ ನಲ್ಲಿ ವಾಸವಾಗಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗಿದ್ದು, ಬಂಧನಕ್ಕೆ ಮುಂದಾಗಿದ್ದಾರೆ.
ಪ್ರಕರಣದ ಕುರಿತು ಮಾಹಿತಿ ನೀಡಿರುವ ಗ್ವಾಲಿಯರ್ ಠಾಣೆಯ ಇನ್‍ಸ್ಪೆಕ್ಟರ್ ಸಂಜೀವ್ ಶರ್ಮಾ, ಜನ್‍ಕಂಗಜ್ ಪೊಲೀಸ್ ಠಾಣಾ ವ್ಯಾಪ್ತಿಯ ಮಹಿಳೆಯೊಬ್ಬರು ದೂರು ದಾಖಲಿಸಿದ್ದಾರೆ. ತನ್ನ 11 ವರ್ಷದ ಮಗಳ ಮೊಬೈಲ್ ಗೆ ಮಧ್ಯ ವಯಸ್ಕ ಮಹಿಳೆ ಪ್ರತಿನಿತ್ಯ ಅಶ್ಲೀಲ ವೀಡಿಯೋ ಕಳುಹಿಸುತ್ತಿರುವ ಬಗ್ಗೆ ದೂರು ನೀಡಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಆಂಟಿ ಎಂದು ಕರೆದ ಹುಡಿಗಿಗೆ ಗೂಸಾ ಕೊಟ್ಟ ಮಹಿಳೆ
ಈ ರೀತಿ ವೀಡಿಯೋ ಕಳಿಸೋದು ನಿಲ್ಲಿಸುವಂತೆ ತಿಳಿ ಹೇಳಿದ್ರೂ ಮಹಿಳೆ ಕೇಳುತ್ತಿಲ್ಲ. ಇದರಿಂದ ಮಾನಸಿಕವಾಗಿ ನೊಂದಿದ್ದೇವೆ. ಈ ಘಟನೆ ನಮ್ಮ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ವ್ಯವಹಾರಕ್ಕ ಸಂಬಂಧಿಸಿದ ವಿಷಯವಾಗಿ ಪತಿಗೂ ಮತ್ತು ಮಹಿಳೆ ನಡುವೆ ವಿವಾದ ಉಂಟಾಗಿದೆ. ಆದ್ದರಿಂದ ಈ ರೀತಿ ವೀಡಿಯೋ ನೀಡಿ ಮಾನಸಿಕ ಕಿರುಕುಳ ನೀಡುತ್ತಿದ್ದಾಳೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ. ಇದನ್ನೂ ಓದಿ: ಯುವಕನನ್ನು ಮದುವೆಯಾಗಲು ಆಂಟಿ ಪ್ಲ್ಯಾನ್- ಪೊಲೀಸ್ ಮೊರೆ ಹೋದ ಯುವಕ
ಮಹಿಳೆ ದೂರಿನ ಅನ್ವಯ ಪೋಕ್ಸೋ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇದರ ಜೊತೆ ಐಟಿ ಆ್ಯಕ್ಟ್ ಅಡಿಯಲ್ಲಿಯೂ ಪ್ರಕರಣ ದಾಖಲಾಗಿದ್ದು, ಮಹಿಳೆಯ ಬಂಧನಕ್ಕಾಗಿ ನಮ್ಮ ತಂಡ ಭೋಪಾಲ್ ಗೆ ತೆರಳಿದೆ. ಮಹಿಳೆಯ ಬಂಧನದ ಬಳಿಕ ವಿಚಾರಣೆ ನಡೆಸಲಾಗುವುದು ಎಂದು ಸಂಜೀವ್ ಶರ್ಮಾ ಹೇಳಿದ್ದಾರೆ. ಇದನ್ನೂ ಓದಿ: ಮದ್ವೆಯಾಗಿ ನೋಡ್ಕೋತ್ತಿನಿ-73ರ ಅಜ್ಜನಿಂದ 1.3 ಕೋಟಿ ಪಡೆದ ಆಂಟಿ ಜೂಟ್