ತನ್ನ ಮನೆಯ ಜೊತೆ ಮಾಜಿ ಪತಿಯನ್ನೂ ಮಾರಾಟಕ್ಕಿಟ್ಟಳು!

ಫ್ಲೋರಿಡಾ: ಮಹಿಳೆಯೊಬ್ಬಳು ತನ್ನ ಮನೆಯ ಜೊತೆ ಮಾಜಿ ಪತಿಯನ್ನು ಕೂಡ ಮಾರಾಟಕ್ಕಿಟ್ಟ ಅಚ್ಚರಿಯ ಘಟನೆಯೊಂದು ಅಮೆರಿಕದ ಫ್ಲೋರಿಡಾದಲ್ಲಿ ನಡೆದಿದೆ.
43 ವರ್ಷದ ಕ್ರಿಸ್ಟಲ್ ಬಾಲ್ ಮಾಜಿ ಪತಿ ಮಾರಾಟಕ್ಕಿಟ್ಟ ಮಹಿಳೆ. ಈಕೆ ಹಾಗೂ 54 ವರ್ಷದ ಪತಿ ರಿಚರ್ಡ್ ಚೈಲೌ ತಮ್ಮ 7 ವರ್ಷಗಳ ದಾಂಪತ್ಯಕ್ಕೆ ಇತ್ತೀಚೆಗಷ್ಟೇ ಇತಿಶ್ರೀ ಹಾಡಿದ್ದರು. ಆದರೆ ಇಬ್ಬರೂ ತಮ್ಮ ಪುತ್ರರಿಗೆ ಸಹ ಪೋಷಕರಾಗಿ ಮುಂದುವರಿಯುತ್ತಿರುವುದಾಗಿ ಮಾತು ಕೊಟ್ಟಿದ್ದರಿಂದ ವಿಚ್ಛೇದನದ ಬಳಿಕವೂ ಹಲವಾರು ವ್ಯವಹಾರಗಳನ್ನು ಒಟ್ಟಿಗೆ ನಡೆಸಿಕೊಂಡು ಬರುತ್ತಿದ್ದಾರೆ. ಇದನ್ನೂ ಓದಿ: ಪ್ರೇಯಸಿಯ ಸಹೋದರನನ್ನು ಸಾಯಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡ
ಪನಾಮಾ ಸಿಟಿ ಬೀಚ್‍ನಲ್ಲಿರುವ ತನ್ನ ಆಸ್ತಿಗಳಲ್ಲಿ ಒಂದನ್ನು ಮಾರಾಟ ಮಾಡುತ್ತಿರುವ ಫ್ಲೋರಿಡಾ ಮಹಿಳೆ ಈ ಬಗ್ಗೆ ಜಾಹೀರಾತು ನೀಡಿದ್ದಾಳೆ. ಅದರಲ್ಲಿ ಮೂರು ಮಲಗುವ ಕೋಣೆಗಳು, ಎರಡು ಸ್ನಾನಗೃಹಗಳು, ಒಳಾಂಗಣ, ಪೂಲ್, ಹಾಟ್ ಟಬ್ ಹಾಗೂ ಮಾಜಿ ಪತಿ ರಿಚರ್ಡ್ ಮನೆಯಲ್ಲಿರುವುದಾಗಿ ವಿವರಿಸಿದ್ದಾಳೆ. ಮನೆ ಕೊಳ್ಳುವವರಿಗೆ ರಿಚರ್ಡ್ ಅಡುಗೆ ಮಾಡಲು ಹಾಗೂ ಸ್ವಚ್ಛತೆ ಮಾಡಲು ಸಹಾಯ ಮಾಡುತ್ತಾನೆ ಎಂದು ತಿಳಿಸಿದ್ದಾಳೆ.
ಹುಲಿ ಗೊಂಬೆ ಜೊತೆ ರಿಚರ್ಡ್ ಪೋಸ್ ನೀಡುತ್ತಿರುವ ಫೋಟೋವನ್ನು ಜಾಹೀರಾತಿನಲ್ಲಿ ನೀಡಲಾಗಿದೆ. ರಿಚರ್ಡ್ ನಿಮಗೆ ಭಾರವಾಗಿ ಇರುವುದಿಲ್ಲ ಅವರು ಲೈವ್ ಇನ್ ಹ್ಯಾಂಡಿಮ್ಯಾನ್ ಪಾತ್ರದ ಭಾಗವಾಗಿ ಅಡುಗೆ ಮಾಡಲು, ಮನೆ ಸ್ವಚ್ಛಗೊಳಿಸಲು ಮತ್ತು ರಿಪೇರಿಗಳನ್ನು ನಿರ್ವಹಿಸಲು ಸಹಾಯ ಮಾಡುತ್ತಾರೆ ಎಂದು ತನ್ನ ಮಾಜಿ ಗಂಡನ ಬಗ್ಗೆ ಕ್ರಿಸ್ಟಲ್ ವಿವರಿಸಿದ್ದಾಳೆ. ಇದನ್ನೂ ಓದಿ: ಸೌತ್ ಸಿನಿಮಾದಿಂದ ಬಾಲಿವುಡ್‌ನಲ್ಲಿ ಅಭದ್ರತೆ – ಖಡಕ್ ಉತ್ತರ ಕೊಟ್ಟ ನವಾಜುದ್ದೀನ್ ಸಿದ್ದಿಕಿ
ಅಲ್ಲದೆ ಆತನ ದೊಡ್ಡದಾದ ಮೂಗು ನಿಮ್ಮ ಮನೆಯಲ್ಲಿ ಏನಾದರೂ ದುರ್ವಾಸನೆ ಬರುತ್ತಿದ್ದರೆ ಅದೂ ನಿಮ್ಮ ಗಮನಕ್ಕೆ ಬರುವ ಮೊದಲು ಆತನ ಮೂಗಿಗೆ ಬಡಿಯುತ್ತದೆ. ಹಾಗೂ ಅದನ್ನು ಆತ ಸ್ವಚ್ಛಗೊಳಿಸುತ್ತಾನೆ. ತಮ್ಮ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಹಲವು ಬಾರಿ ಈ ಜಾಹೀರಾತನ್ನು ತಿರಸ್ಕರಿಸಲಾಗಿದೆ.