ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮೈಸೂರಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಮಹಿಳೆಯೊಬ್ಬರು ಸಿಎಂ ಕಂಡು ಕೈ ಮುಗಿದ ಪ್ರಸಂಗವೊಂದು ನಡೆದಿದೆ.
Advertisement
ಸಿದ್ದರಾಮಯ್ಯ (Siddaramaiah) ಅವರು ಇಂದು ಮೈಸೂರಿನ ಉತ್ತನಹಳ್ಳಿ ಮಾರಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದರು. ದೇವರ ದರ್ಶನ ಪಡೆದು ತಮ್ಮ ಕಾರಿನತ್ತ ತೆರಳುತ್ತಿದ್ದ ಸಂದರ್ಭದಲ್ಲಿ ಅಲ್ಲಿಗೆ ಬಂದ ಗ್ರಾಮದ ಮಹಿಳೆಯೊಬ್ಬರು ಸಿಎಂ ನೋಡಿ ಕೈ ಮುಗಿದಿದ್ದಾರೆ. ಬಳಿಕ ಅನ್ನ ಕೊಟ್ಟ ದೇವರು ನೀನು ಚೆನ್ನಾಗಿರಪ್ಪ ಎಂದು ಆಶೀರ್ವಾದ ಮಾಡಿದ್ದಾರೆ.
Advertisement
ಅಲ್ಲದೆ ನಿನ್ನನ್ನು ನೋಡಿ ಸಂತೋಷ ಆಯ್ತು ಎಂದು ಹೇಳಿದ್ದಾರೆ. ಮಹಿಳೆಯ ಮಾತು ಕೇಳಿ ಮುಗುಳು ನಗೆ ಬೀರಿದ ಸಿಎಂ ಕಾರು ಹತ್ತಿ ತೆರಳಿದರು.
Advertisement
Advertisement
ಕಾವೇರಿ ಹೋರಾಟದ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಪ್ರತಿಭಟನೆ ಮಾಡಲು ನಮ್ಮದೇನು ತಕರಾರಿಲ್ಲ. ಆದರೆ ರಾಜಕೀಯ ಮಾಡಬಾರದು. ಕಾವೇರಿ ವಿವಾದವನ್ನು ರಾಜಕೀಯಕ್ಕೆ ಹೋಲಿಸುವುದು ರಾಜ್ಯದ ಹಿತದೃಷ್ಟಿಯಲ್ಲಿ ಒಳ್ಳೆಯದಲ್ಲ. ಬಿಜೆಪಿಯವರು ಕಾವೇರಿ ಪ್ರತಿಭಟನೆ ರಾಜಕೀಯಕ್ಕಾಗಿ ಮಾಡುತ್ತಿದ್ದಾರೆ ಹೊರತು ಜನರ ಹಿತದೃಷ್ಟಿಗಾಗಲಿ, ನಾಡಿನ ಹಿತದೃಷ್ಟಿಗಾಗಲಿ ಮಾಡುತ್ತಿಲ್ಲ ಎಂದರು.
ಕರ್ನಾಟಕ ಬಂದ್ (Karnataka bandh) ಕುರಿತು ಮಾತನಾಡಿದ ಅವರು, ಯಾವುದೇ ಬಂದ್‍ಗಳನ್ನು ಮಾಡಬಾರದು, ಮೆರವಣಿಗೆ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ಆದೇಶ ಇದೆ. ಆದರೆ ಇದಕ್ಕೆ ನಾವೇನೂ ಅಡ್ಡಿಪಡಿಸಲು ಹೋಗುವುದಿಲ್ಲ ಎಂದು ತಿಳಿಸಿದರು. ಕಾವೇರಿ ವಿವಾದದ ಕುರಿತು ದೇವೇಗೌಡರು ಪ್ರಧಾನಿಗೆ ಪತ್ರ ಬರೆದಿದ್ದಾರೆ. ನಾನು ಅದನ್ನು ಸ್ವಾಗತಿಸುತ್ತೇನೆ. ರಾಜ್ಯಸರ್ಕಾರ ರಾಜ್ಯದ ಹಿತ್ತಾಸಕ್ತಿ ಕಾಪಾಡಲು ಬದ್ಧವಾಗಿದೆ. ನಮಗೆ ಅಧಿಕಾರ ಮುಖ್ಯ ಅಲ್ಲಾ. ರಾಜ್ಯದ ಜನರ ಹಿತ ಮುಖ್ಯ ಎಂದರು.
Web Stories