ಮಂಗಳೂರು: ಮನೆ ಕೆಲಸದ ಉದ್ಯೋಗಕ್ಕೆಂದು ಸೌದಿ ಅರೇಬಿಯಾಕ್ಕೆ ತೆರಳಿ ಹಿಂದಿರುಗಲಾಗದೆ ಸಂಕಷ್ಟಕ್ಕೀಡಾಗಿದ್ದ ಮಂಗಳೂರಿನ ವಾಮಂಜೂರಿನ ಮಹಿಳೆ ಕೊನೆಗೂ ತಾಯ್ನಾಡಿಗೆ ಮರಳಿದ್ದಾರೆ.
44 ವರ್ಷದ ವಿಜಯಾ ಎಂಬವರು 2015 ರಲ್ಲಿ ಸೌದಿ ರಾಷ್ಟ್ರ ದಮಾಮ್ ಗೆ ತೆರಳಿದ್ದರು. ಆದರೆ ಮೊದಲ ಮೂರು ತಿಂಗಳು ಮಾತ್ರ ಮನೆಯವರೊಂದಿಗೆ ಸಂಪರ್ಕದಲ್ಲಿದ್ದ ವಿಜಯಾ ಆ ಬಳಿಕ ಸಂಪರ್ಕಕ್ಕೆ ಸಿಗದಿದ್ದರಿಂದ ಮನೆಯವರು ಆತಂಕಕ್ಕೊಳಗಾಗಿದ್ದರು.
Advertisement
Advertisement
ವಿಜಯಾ ಪತಿ ಬಾಲಕೃಷ್ಣ ಅನಾರೋಗ್ಯ ಪೀಡಿತರಾಗಿದ್ದಲ್ಲದೆ ಮಕ್ಕಳು ಸಂಕಷ್ಟ ಅನುಭವಿಸಿದ್ದರು. ಎರಡು ವರ್ಷಗಳ ಬಳಿಕ ಇತ್ತೀಚೆಗೆ ವಿಜಯಾ ನಾಪತ್ತೆ ವಿಚಾರ ಸುದ್ದಿಯಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಇಂಡಿಯನ್ ಸೋಶಿಯಲ್ ಫಾರಂ ವಿಜಯಾ ಬಗ್ಗೆ ವಿದೇಶಾಂಗ ಇಲಾಖೆಗೆ ಮಾಹಿತಿ ರವಾನಿಸಿದ್ದರು. ಆ ಬಳೀಕ ರಾಜತಾಂತ್ರಿಕ ಒತ್ತಡ ಹೇರಿದ ಹಿನ್ನೆಲೆಯಲ್ಲಿ ದಮಾಮ್ ದೇಶದ ಅಧಿಕಾರಿಗಳು ವಿಜಯಾರನ್ನು ಪತ್ತೆ ಮಾಡಿ ಬಿಡುಗಡೆ ಮಾಡಿದ್ದಾರೆ.
Advertisement
ದಮಾಮ್-ಮುಂಬೈ-ಮಂಗಳೂರು ಜೆಟ್ ಏರ್ ವೇಸ್ ಮೂಲಕ ವಿಜಯಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಎಸ್ ಡಿಪಿಐ ಇಂಡಿಯನ್ ಸೋಶಿಯಲ್ ಫೋರಂ ಪರವಾಗಿ ಎಸ್ ಡಿಪಿಐ ಮುಖಂಡರು ವಿಜಯಾರನ್ನು ಸ್ವಾಗತಿಸಿದ್ರು.
Advertisement