– ಕೈಮುಗಿದು ಬೇಡಿಕೊಳ್ಳುತ್ತಿರೋ ಪೊಲೀಸರು
ಬೆಂಗಳೂರು: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ಸಲುವಾಗಿ ಇಡೀ ದೇಶವನ್ನೇ ಲಾಕ್ ಡೌನ್ ಮಾಡಲಾಗಿದೆ. ಆದರೆ ಸಿಲಿಕಾನ್ ಸಿಟಿಯಲ್ಲಿ ಮಾತ್ರ ಜನ ಲಾಕ್ ಡೌನ್ ಗೆ ಕ್ಯಾರೇ ಅಂತಿಲ್ಲ. ಹೀಗಾಗಿ ಇಂದು ತಮ್ಮ ವಾಹನ ತಡೆದಿದ್ದಕ್ಕೆ ಮಹಿಳೆಯೊಬ್ಬರು ಪೊಲೀಸರ ಕಾಲಿಗೆ ಬಿದ್ದು ಬೇಡಿಕೊಂಡ ಪ್ರಸಂಗ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಶಿರ್ಸಿ ಸರ್ಕಲ್ ಬಳಿ ಪೊಲೀಸರ ಮುಂದೆ ಸವಾರರ ಈ ಡ್ರಾಮಾ ಇಂದು ನಡೆದಿದೆ. ಪಾಸ್ ಇಲ್ಲದೆ ರೋಡಿಗಿಳಿದು ಗಾಡಿ ಸವಾರನನ್ನು ತಡೆದ ಪೊಲೀಸರು, ಗೊತ್ತಾಗಲ್ವಾ ರಾಜ್ಯ ಗಂಭೀರ ಪರಿಸ್ಥಿತಿಯಲ್ಲಿದೆ. ಹೀಗಿದ್ರೂ ಪಾಸ್ ಇಲ್ಲದೇ ರೋಡಿಗೆ ಬರ್ತಿಯಲ್ಲ ಎಂದು ಸವಾರನಿಗೆ ಸಖತ್ ಕ್ಲಾಸ್ ತೆಗೆದುಕೊಂಡರು.
Advertisement
Advertisement
ಈ ವೇಳೆ ಮಹಿಳೆ, ಸಾರ್ ನಮ್ಮ ವಾಹನ ಬಿಡಿ ಅಂತ ಪೊಲೀಸ್ ಕಾಲಿಗೆ ಬೀಳಲು ಮುಂದಾಗಿದ್ದಾಳೆ. ಅಲ್ಲದೆ ಮಂಡಿಯೂರಿ, ಕೈ ಮುಗಿದು ಸ್ಕೂಟಿ ಬಿಟ್ಟು ಕೊಡುವಂತೆ ಪೊಲೀಸರ ಬಳಿ ಬೇಡಿಕೊಂಡಿದ್ದಾಳೆ. ಕೊನೆಗೆ ಮಹಿಳೆಗೆ ಬುದ್ಧಿವಾದ ಹೇಳಿ ಪೊಲೀಸರು ಅವರನ್ನು ಅಲ್ಲಿಂದ ಕಳುಹಿಸಿದ್ದಾರೆ.
Advertisement
ಬೆಂಗಳೂರಿನ ಶಿರ್ಸಿ ಸರ್ಕಲ್ ಬಳಿ ಟ್ರಾಫಿಕ್ ಪೊಲೀಸರಿಂದ ಫುಲ್ ಸ್ಟ್ರಿಕ್ಟ್ ತಪಾಸಣೆ ನಡೆಯುತ್ತಿದೆ. ಪೊಲೀಸರು ಪ್ರತಿಯೊಂದು ವಾಹನಗಳನ್ನ ತಡೆದು ತಪಾಸಣೆ ನಡೆಸುತ್ತಿದ್ದಾರೆ. ಅನಗತ್ಯವಾಗಿ ರೋಡಿಗಿಳಿದವ್ರಿಗೆ ಬೆವರಿಳಿಸಿದ್ದಾರೆ.
Advertisement
ಬಿಬಿಎಂಪಿ ಪಾಸ್ ಇಟ್ಟುಕೊಂಡು ಪ್ರಯಾಣಿಕರನ್ನ ಪಿಕ್ ಮಾಡಲು ಹೋಗುತ್ತಿದ್ದ ಆಟೋ ರಿಕ್ಷಾವನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಒಟ್ಟಿನಲ್ಲಿ ಪಾಸ್ ಇಲ್ಲದೆ ರಸ್ತೆಗೆ ಇಳಿದವರ ವಿರುದ್ಧ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.
ಜನರ ಮೊಂಡುತನಕ್ಕೆ ಪೊಲೀಸರೇ ಕೈ ಮುಗಿಯುತ್ತಿದ್ದಾರೆ. ರಸ್ತೆಗೆ ಬರಬೇಡಿ ಅಂತ ಕೈ ಮುಗಿದು ಮನವಿ ಮಾಡಿಕೊಳ್ಳುತ್ತಿದ್ದಾರೆ. ಯಾಕಪ್ಪ ಹೊರಗೆ ಬರುತ್ತೀರಿ, ಒಮ್ಮೆ ನಿಮ್ಮ ಕುಟುಂಬ, ಮಕ್ಕಳ ಬಗ್ಗೆ ಯೋಚಿಸಿ. ಯಾವ ಎಮರ್ಜೆನ್ಸಿ ಕೆಲಸ ಇದೆ ಅಂತ ರಸ್ತೆಗೆ ಬರುತ್ತೀರಿ ಎಂದು ವಾಹನ ಸವಾರರಿಗೆ ಕೈ ಮುಗಿದು ರಸ್ತೆ ಗೆ ಬರಬೇಡಿ ಅಂತ ಪೊಲೀಸರು ಮನವಿ ಮಾಡಿಕೊಳ್ಳುತ್ತಿದ್ದಾರೆ.
ಆದರೆ ಪೊಲೀಸರ ಮನವಿಗೂ ಸ್ಪಂದಿಸದೇ ಯುವಕರಿಬ್ಬರು ಮಾಸ್ಕ್ ಇಲ್ಲದೆ ಆಟೋದಲ್ಲಿ ಓಡಾಡುತ್ತಿದ್ದರು. ಇದನ್ನು ಗಮನಿಸಿದ ಪೊಲೀಸರು ಅವರನ್ನು ಆಟೋದಿಂದ ಇಳಿಸಿ ಯುವಕರು ಧರಿಸಿದ್ದ ಸ್ವೆಟರ್ ತೆಗಿಸಿ ಮಾಸ್ಕ್ ಕಟ್ಟಿಸುವ ಮೂಲಕ ಬುದ್ಧಿವಾದ ಹೇಳಿದ್ದಾರೆ. ಇನ್ನೂ ಕೆಲ ಬೈಕ್ ಸವಾರರು ಪೊಲೀಸರನ್ನು ಕಂಡು ಯೂ ಟರ್ನ್ ಮಾಡಿ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ.