ಬಾಗಲಕೋಟೆ: ಸಚಿವ ಮುರುಗೇಶ್ ನಿರಾಣಿ (Murugesh Nirani) ಹಂಚಿದ ಸಕ್ಕರೆಯನ್ನು ಮಹಿಳೆಯೊಬ್ಬರು ತಿರಸ್ಕರಿಸಿದ ಪ್ರಸಂಗವೊಂದು ನಡೆದಿದೆ.
ಬಾಗಲಕೋಟೆ ಜಿಲ್ಲೆಯ ಬೀಳಗಿ ಮತಕ್ಷೇತ್ರದ ಗಲಗಲಿಯಲ್ಲಿ ಸಕ್ಕರೆ ಚೀಲ (Sugar Packet) ತಿರಸ್ಕರಿಸಿದ ಮಹಿಳೆ ವೀಡಿಯೋ ಇದೀಗ ಸಾಮಾಜಿಕ ಜಾಲತಾಣ (Social Media) ದಲ್ಲಿ ವೈರಲ್ ಆಗಿದೆ.
Advertisement
Advertisement
ಏಮಿದು ಘಟನೆ..? ಸಚಿವ ನಿರಾಣಿ ಬೆಂಬಲಿಗರು ಮನೆ ಮನೆಗೂ ಸಕ್ಕರೆ ಹಂಚುತ್ತಿದ್ದರು. ಅಂತೆಯೇ ಗಲಿಗಲಿಯ ಮನೆಯೊಂದಕ್ಕೆ ಸಕ್ಕರೆ ಚೀಲ ಹಂಚಿದ ವೇಳೆ ಮಹಿಳೆ ಅದನ್ನು ತೆಗೆದುಕೊಳ್ಳಲು ನಿರಾಕರಿಸಿದ್ದಾರೆ. ಕೊನೆಗೆ ಬೆಂಬಲಿಗರು ಒತ್ತಾಯವಾಗಿ ಸಕ್ಕರೆ ಚೀಲ ಮನೆಯೊಳಗೆ ಹೋಗಿ ನೀಡಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಸೇರಿದ್ರೆ 50 ಸಾವಿರ ಲೀಡ್‌ನಲ್ಲಿ ಗೆಲ್ತೀನಿ – ಶಾಸಕ ಶಿವಲಿಂಗೇಗೌಡರದ್ದು ಎನ್ನಲಾದ ಆಡಿಯೋ ವೈರಲ್
Advertisement
Advertisement
ಒತ್ತಾಯಪೂರ್ವಕವಾಗಿ ನೀಡಿದ ಸಕ್ಕರೆ ಚೀಲವನ್ನು ಮಹಿಳೆ ಬಾಗಿಲು ಹೊರಗೆ ಇಟ್ಟರು. ಈ ದೃಶ್ಯವೆಲ್ಲಾ ವೀಡಿಯೋದಲ್ಲಿ ಸೆರೆಯಾಗಿದೆ. ಮಹಿಳೆಯರ ವರ್ತನೆ ಬೆಂಬಲಿಸಿ ವೀಡಿಯೋವನ್ನು ಸಾಮಾಜಿಕ ಕಾರ್ಯಕರ್ತ ಯಲ್ಲಪ್ಪ ಹೆಗಡೆ ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದಾರೆ. ಇದೀಗ ಮಹಿಳೆಯರ ವರ್ತನೆಗೆ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ.
ಈ ತಾಯಿಗಿರುವ ನಿಯತ್ತಿಗೆ ಜನತೆಯಿಂದ ಧನ್ಯವಾದಗಳು. ಆಸೆ, ಆಮಿಷಗಳಿಗೆ ಬಲಿಯಾಗದೆ ಪ್ರಬುದ್ಧತೆ ತೋರುವ ಇಂತಹ ಜನರಿಂದ ಮಾತ್ರ. ಪ್ರಜಾಪ್ರಭುತ್ವ ಉಳಿಯಲು ಸಾಧ್ಯ, ಇಂತಹ ಆಲೋಚನೆ ಎಲ್ಲ ಮತದಾರರಿಗೂ ಬರಬೇಕಿದೆ ಎಂದು ವೀಡಿಯೋ ಜೊತೆಗೆ ಪೋಸ್ಟ್ ಕೂಡ ವೈರಲ್ ಆಗಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k