ವಿಜಯಪುರ: ಈಕೆಗೆ ಬೇಕು ಮದುವೆಗೊಬ್ಬ, ಸಂಸಾರಕ್ಕೊಬ್ಬ. ಯಾಮಾರಿ ಹಿಂದೆ ಬಿದ್ರೆ ಊರಹಬ್ಬ ಮಾಡ್ತಾಳೆ ಅನ್ನೋ ಕೊಪ್ಪಳದಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮಹಿಳೆ ಸ್ಪಷ್ಟನೆ ನೀಡಿದ್ದಾಳೆ.
ಕೊಪ್ಪಳದ ವಿಶ್ವ ಎಂಬಾತನಿಗೆ ಕೈಕೊಟ್ಟು ವಂಚಿಸಿದ್ದ ಶ್ರೀಲತಾ ವಿಜಯಪುರದಲ್ಲಿ ಮಾಧ್ಯಮಕ್ಕೆ ಸ್ಪಷ್ಟನೆ ನೀಡಿದ್ದಾಳೆ. “ನಾನು ಯಾವ ತಪ್ಪನ್ನು ಮಾಡಿಲ್ಲ ವಿಶ್ವನಿಗೆ ಕೈ ಕೊಟ್ಟಿಲ್ಲ. ನನಗೆ ಬಸ್ ನಿಲ್ದಾಣ, ಮನೆಯಲ್ಲಿ ಸೇರಿದಂತೆ ಹಲವೆಡೆ ಹೊಡೆದು, ಚಿತ್ರಹಿಂಸೆ ನೀಡಿದ್ದಾನೆ. ಸಾಲದ್ದಕ್ಕೆ ನನ್ನ ಆಫೀಸ್‍ಗೆ ಬಂದು ಅಲ್ಲಿಯೂ ನನ್ನ ಗೆಳೆಯರಿಗೆ ನಿಂದಿಸುವುದು, ಹೊಡೆಯುವುದು ಮಾಡಿದ್ದಾನೆ. ಅದಕ್ಕೆ ನಾನು ಬೇಸತ್ತು ಅವನನ್ನು ಬಿಟ್ಟು ಬಂದಿದ್ದೇನೆ. ಅವನಿಗೆ ಡಿವೋರ್ಸ್ ಕೂಡ ನೀಡುತ್ತಿದ್ದೇನೆ” ಎಂದು ಹೇಳಿದ್ದಾಳೆ.
Advertisement
Advertisement
ಶ್ರೀಲತಾ ಮಾಧ್ಯಮದ ಜೊತೆ ಮಾತನಾಡಿದ್ದನ್ನು ನೋಡಿ ಆಕೆಯ ತಾಯಿ ಸುಶೀಲಾ ಕೂಡ ಮಗಳ ಮಾತಿಗೆ ತಾಳ ಹಾಕಿದ್ದಾರೆ. ಅವಳಿಗೆ ಸಣ್ಣ ವಯಸ್ಸಿನಲ್ಲಿ ಮದುವೆ ಮಾಡಿದ್ದೆವು. ಆದರೆ ವಿಶ್ವ ಪ್ರತಿನಿತ್ಯ ನೀಡುತ್ತಿದ್ದ ಹಿಂಸೆ ತಾಳಲಾರದೆ ಡಿವೋರ್ಸ್ ಕೊಡುವ ನಿರ್ಧಾರಕ್ಕೆ ನನ್ನ ಮಗಳು ಬಂದಿದ್ದಾಳೆ ಎಂದು ತಾಯಿ ಸ್ಪಷ್ಟಪಡಿಸಿದ್ದಾರೆ.
Advertisement
Advertisement
ಒಂದು ವರ್ಷದ ಹಿಂದೆ ಶ್ರೀಲತಾ ಜೊತೆ ವಿಶ್ವ ಮದುವೆ ಮಾಡಿಕೊಂಡಿದ್ದನು. ವಿಶ್ವನಿಗೆ ಮೊದಲನೇ ಮದುವೆ ಆದರೆ ಶ್ರೀಲತಾ 2ನೇ ಮದುವೆಯಾಗಿತ್ತು. ಶ್ರೀಲತಾ ಮೊದಲು ವಿಜಯಪುರ ಮೂಲದ ಯುವಕನೊಂದಿಗೆ ಮದುವೆ ಮಾಡಿಕೊಂಡಿದ್ದಳು. 6 ವರ್ಷ ಆತನೊಂದಿಗೆ ಸಂಸಾರ ನಡೆಸಿ ನಂತರ ಆತನಿಗೆ ವಿಚ್ಛೇದನ ನೀಡಿದ್ದಳು. ಬಳಿಕ ವಿಶ್ವನ ಜೊತೆ ಮದುವೆ ಮಾಡಿಕೊಳ್ಳಲು ಅವರ ಮನೆಯವರ ಜೊತೆ ಮಾತಾಡಿ ಮದುವೆಯ ಎಲ್ಲಾ ಸಿದ್ಧತೆ ನಡೆಸಿ ಮದುವೆಯಾದಳು.
ವಿಶ್ವ ಹಾಗೂ ಶ್ರೀಲತಾ ಇಬ್ಬರು ಮದುವೆಯಾಗಿ ಬೆಂಗಳೂರಲ್ಲಿ ಕೆಲ ತಿಂಗಳು ಸಂಸಾರ ನಡೆಸಿದ್ದಾರೆ. ನಂತರ ಹುಡುಗಿಗೆ ಬೆಂಗಳೂರಿನ ಸಾಫ್ಟ್ ವೇರ್ ಕಂಪೆನಿಯಲ್ಲಿ ಉದ್ಯೋಗ ಸಿಕ್ಕಿದೆ. ಕೆಲಸ ಸಿಕ್ಕ 3 ತಿಂಗಳಿಗೆ ಹುಡುಗಿ ಶೋಕಿಗೆ ಬಿದ್ದು ವಿಶ್ವನ ಜೊತೆ ಕ್ಯಾತೆ ತೆಗೆದು ಇವನನ್ನು ಬಿಟ್ಟು ಹೋಗಿದ್ದಾಳೆ. ಅಷ್ಟೇ ಅಲ್ಲದೆ ತನ್ನ ಫ್ರೆಂಡ್ ಸರ್ಕಲ್ ನಲ್ಲಿ ನನಗೆ ಮದುವೆ ಆಗಿಲ್ಲ ಎಂದು ಹೇಳಿಕೊಂಡು ಮತ್ತೊಬ್ಬನ ಜೊತೆ ಸುತ್ತಾಡಿದ್ದಾಳೆ. ಇಷ್ಟೆಲ್ಲಾ ಗೊತ್ತಿದ್ದರೂ ವಿಶ್ವ, ನೀನು ಒಂದು ಹೆಣ್ಣಾಗಿ ನನ್ನ ಬಾಳಿಗೆ ಬರುವುದಾದರೆ ಬಾ ನಾನು ನಿನ್ನನ್ನು ಅಂಗೈಯಲ್ಲಿಟ್ಟು ನೋಡಿಕೊಳ್ಳುತ್ತೇನೆ ಎಂದು ಆಕೆಗೆ ಕೆಲ ಕಂಡೀಷನ್ ಹಾಕಿದ್ದನು ಎಂಬುದಾಗಿ ವರದಿಯಾಗಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews