ಬೆಂಗಳೂರು: ಮದ್ಯಪಾನ ಮಾಡಿಸಿ ಸ್ನೇಹಿತನ ಹೆಂಡತಿಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ನಗರದ ಹೆಚ್‍ಎಸ್‍ಆರ್ ಲೇಔಟ್ ನ ಸರ್ಜಾಪುರ ರಸ್ತೆಯಲ್ಲಿ ನಡೆದಿದೆ.
ಎಚ್‍ಎಸ್‍ಆರ್ ಲೇಔಟ್ ನ ಹೂಡ್ ರೆಸ್ಟೋರೆಂಟ್ ನಲ್ಲಿ ಪಾರ್ಟಿ ನಡೆದಿದ್ದು, ಭುವನೇಶ್ವರದಿಂದ ಬೆಂಗಳೂರಿಗೆ ಚಿಕಿತ್ಸೆಗೆಂದು ಬಂದಿದ್ದ ಸಂತ್ರಸ್ತೆಯನ್ನು ಬರ್ತ್ ಡೇ ಪಾರ್ಟಿಗೆಂದು ಕರೆದುಕೊಂಡು ಹೋಗಿ ಮದ್ಯಪಾನ ಮಾಡಿಸಿ ಅತ್ಯಾಚಾರ ಎಸಗಿದ್ದಾರೆ.
ದೂರಿನಲ್ಲಿ ಏನಿದೆ?
ಆಸ್ಪತ್ರೆಗೆಂದು ಬೆಂಗಳೂರಿಗೆ ಬಂದಿದ್ದೆ. ಈ ವೇಳೆ ಸ್ನೇಹಿತ ಹಿಮಾಂಶು ಭಟ್ ಕರೆ ಮಾಡಿ ಆತನ ಬಾವನ ಬರ್ತ್ ಡೇ ಎಂದು ರೆಸ್ಟೊರೆಂಟ್ ಗೆ ಕರೆದಿದ್ದನು. ನಂತರ ನಾನು ಪಾರ್ಟಿಗೆ ಹೋದೆ. ಅಲ್ಲಿ ಹಿಮಾಂಶು ಭಟ್, ಆತನ ಸಹೋದರಿ ಹಾಗು ಪತಿ, ಜೊತೆಗೆ ಆತನ ಸ್ನೇಹಿತ ರವಿರಂಜನ್ ಇದ್ದರು.
ನನಗೆ ಪಾರ್ಟಿಯಲ್ಲಿ ಡ್ರಿಂಕ್ಸ್ ಕುಡಿಯಬೇಕು ಎಂದು ಒತ್ತಾಯಿಸಿ ಬಿಯರ್ ಕುಡಿಸಿದ್ರು. ಬಳಿಕ ಬಲವಂತವಾಗಿ ಹೆಚ್ಚಿನ ಡ್ರಿಂಕ್ಸ್ ಕುಡಿಸಿದರು. ಪಾರ್ಟಿಯಲ್ಲಿ ಸಹೋದರಿಯ ಪತಿ ಕೆಳಗೆ ಬಿದ್ದು ಗಾಯ ಮಾಡಿಕೊಂಡರು. ಅವರನ್ನು ಆಸ್ಪತ್ರೆಗೆಂದು ಹಿಮಾಂಶು ಭಟ್ ಮತ್ತು ಆತನ ಸಹೋದರಿ ಕರೆದುಕೊಂಡು ಹೋದರು. ಈ ವೇಳೆ ನನ್ನ ಫೋನ್ ತೆಗೆದುಕೊಂಡು ಹೋಗಿದ್ದರು.
ಇದೇ ಸಂದರ್ಭದಲ್ಲಿ ರವಿರಂಜನ್ ಫೋನ್ ತೆಗೆದುಕೊಂಡು ಬರುದಾಗಿ ಹೇಳಿ ಕ್ಯಾಬಿನ್ ನಲ್ಲಿ ಕರೆದುಕೊಂಡು ಹೋದನು. ಆದರೆ ದಾರಿ ಮಧ್ಯೆ ಬೆದರಿಕೆ ಹಾಕಿ ಕ್ಯಾಬ್ ಚಾಲಕನ ಮನೆಗೆ ಕರೆದುಕೊಂಡು ಹೋಗಿ ಬಲವಂತವಾಗಿ ನನ್ನ ಮೇಲೆ ಅತ್ಯಾಚಾರ ಎಸಗಿರುವುದಾಗಿ ದೂರಿನಲ್ಲಿ ಸಂತ್ರಸ್ತೆ ಉಲ್ಲೇಖಿಸಿದ್ದಾರೆ.
ಈ ಸಂಬಂಧ ಹೆಚ್‍ಎಸ್‍ಆರ್ ಲೇಔಟ್ ನಲ್ಲಿ ಪ್ರಕರಣ ದಾಖಲಾಗಿದೆ.