ನವದೆಹಲಿ: ಬ್ರಿಟಿಷ್ ಕೌನ್ಸಿಲ್ (British Council ) ಲೈಬ್ರರಿಯಲ್ಲಿ ಉದ್ಯೋಗ ಮಾಡಿಕೊಂಡಿದ್ದ ಯುವತಿ ಈಗ ದೆಹಲಿಯ (Delhi) ಬೀದಿಯಲ್ಲಿ ಚಹಾ (Roadside Tea Stall) ಮಾರಾಟ ಮಾಡುವ ಮೂಲಕ ಸುದ್ದಿಯಾಗಿದ್ದಾರೆ.
26 ವರ್ಷದ ಶರ್ಮಿಷ್ಠ ಘೋಷ್ ಇಂಗ್ಲಿಷ್ ಪದವೀಧರೆ. ಭವಿಷ್ಯದಲ್ಲಿ ದೊಡ್ಡ ಚಹಾ ಉದ್ಯಮ ನಡೆಸುವ ಕನಸು ಕಂಡಿದ್ದು, ಈಗ ಚಹಾ ಮಾರಾಟ ಮಾಡುತ್ತಿದ್ದಾರೆ.
Advertisement
ಶರ್ಮಿಷ್ಠ ಘೋಷ್ (Sharmistha Ghosh) ಅವರ ಉದ್ಯಮಕ್ಕೆ ಸ್ನೇಹಿತೆ ಲುಫ್ತಾನ್ಸಾನದಲ್ಲಿ ಕೆಲಸ ಮಾಡುತ್ತಿರುವ ಭಾವನಾ ರಾವ್ ಸಹ ಸಾಥ್ ನೀಡಿದ್ದಾರೆ. ಈಗ ಇವರಿಬ್ಬರು ಜೊತೆಯಾಗಿ ದೆಹಲಿಯ ರಸ್ತೆ ಬದಿಯಲ್ಲಿ ಸಂಜೆ ಚಹಾ ಮಾರಾಟ ಮಾಡುತ್ತಿದ್ದಾರೆ. ಇದನ್ನೂ ಓದಿ: ಭಾರತದೊಂದಿಗೆ 3 ಯುದ್ಧಗಳನ್ನು ಮಾಡಿದ ನಂತರ ಪಾಕಿಸ್ತಾನ ಪಾಠ ಕಲಿತಿದೆ – ಶೆಹಬಾಜ್ ಷರೀಫ್
Advertisement
Advertisement
ಬ್ರಿಗೇಡಿಯರ್ ಸಂಜಯ್ ಖನ್ನಾ ಅವರು ಲಿಂಕ್ಡ್‌ಇನ್‌ನಲ್ಲಿ ಇವರಿಬ್ಬರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಪೋಸ್ಟ್ ಮಾಡಿದ ಬಳಿಕ ಈಗ ಇವರು ಹೆಚ್ಚು ಸುದ್ದಿಯಾಗಿದ್ದಾರೆ.
Advertisement
ಇಬ್ಬರು ಯುವತಿಯರ ಕೆಲಸಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಯಾವುದೇ ಕೆಲಸ ದೊಡ್ಡದು, ಚಿಕ್ಕದಲ್ಲ. ಪ್ರತಿ ಕೆಲಸವು ದೊಡ್ಡದೇ. ಶ್ರಮವಹಿಸಿ ಮಾಡಿದರೆ ಖಂಡಿತ ಯಶಸ್ಸು ಸಿಗುತ್ತದೆ. ಆರಂಭದಲ್ಲಿ ಸಣ್ಣ ಕನಸು, ಸಣ್ಣ ಉದ್ಯೋಗ ಮಾಡಿದವರೇ ಈಗ ದೊಡ್ಡ ಉದ್ಯಮಿಗಳಾಗಿದ್ದಾರೆ ಎಂದು ಬರೆದು ಶ್ಲಾಘಿಸಿ ಭವಿಷ್ಯದ ಕನಸಿಗೆ ಶುಭ ಹಾರೈಸಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k