ನವದೆಹಲಿ: ಇರಾನ್ (Iran) ವಶಪಡಿಸಿಕೊಂಡಿದ್ದ ಹಡಗಿನಲ್ಲಿದ್ದ ಭಾರತೀಯ (Iran) ನಾವಿಕರೊಬ್ಬರು ಸುರಕ್ಷಿತವಾಗಿ ಕೇರಳಕ್ಕೆ (Kerala) ಆಗಮಿಸಿದ್ದಾರೆ.
ಟೆಹರಾನ್‌ನಲ್ಲಿರುವ ಭಾರತೀಯ ಮಿಷನ್ ಮತ್ತು ಇರಾನ್ ಸರ್ಕಾರದ ಸಂಘಟಿತ ಪ್ರಯತ್ನಗಳೊಂದಿಗೆ ಡೆಕ್ ಕೆಡೆಟ್ ಆಗಿದ್ದ ಕೇರಳದ ತ್ರಿಶ್ಯೂರಿನ ಟೆಸ್ಸಾ ಜೋಸೆಫ್ (Ann Tessa Joseph) ಅವರು ಕೊಚ್ಚಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿದಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ (MEA) ವಕ್ತಾರ ರಣಧೀರ್ ಜೈಸ್ವಾಲ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಿನ ಬಿಸ್ಮಿಲ್ಲಾ ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ ನಾಲ್ವರು ಬಾಂಗ್ಲಾ ಪ್ರಜೆಗಳು ಅರೆಸ್ಟ್!
Advertisement
Indian deck cadet Ms. Ann Tessa Joseph from Thrissur, Kerala, a member of the crew on vessel MSC Aries returned home today. @India_in_Iran, with the support of Iranian authorities, facilitated her return. Mission is in touch with Iranian side to ensure the well being of the… pic.twitter.com/iE932Y4F4y
— Randhir Jaiswal (@MEAIndia) April 18, 2024
Advertisement
ಹಡಗಿನಲ್ಲಿದ್ದ ಉಳಿದ 16 ಭಾರತೀಯರೊಂದಿಗೆ ನಾವು ಸಂಪರ್ಕದಲ್ಲಿದ್ದೇವೆ. ಅವರೆಲ್ಲರೂ ಆರೋಗ್ಯವಾಗಿದ್ದು, ಭಾರತದಲ್ಲಿನ ಅವರ ಕುಟುಂಬ ಸದಸ್ಯರೊಂದಿಗೆ ಸಂಪರ್ಕದಲ್ಲಿದ್ದಾರೆ. ಉಳಿದ ಸಿಬ್ಬಂದಿಯ ಯೋಗಕ್ಷೇಮವನ್ನು ವಿಚಾರಿಸಿಕೊಳ್ಳಲು ಇರಾನ್ ಅಧಿಕಾರಿಗಳೊಂದಿಗೆ ನಾವು ಸಂಪರ್ಕದಲ್ಲಿದ್ದೇವೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ಇದನ್ನೂ ಓದಿ: ಪಶ್ಚಿಮ ಬಂಗಾಳ – ರಾಮನವಮಿ ಶೋಭಾಯಾತ್ರೆಯ ವೇಳೆ ಬಾಂಬ್ ಸ್ಫೋಟ, ಕಲ್ಲು ತೂರಾಟ
Advertisement
ಜೋಸೆಫ್ ಭಾರತಕ್ಕೆ ಬಂದಿಳಿದ ನಂತರ ವಿದೇಶಾಂಗ ಸಚಿವ ಎಸ್ ಜೈಶಂಕರ್ (S Jaishankar) ಅವರು, ಇರಾನ್‌ನಲ್ಲಿರುವ ಭಾರತೀಯ ಮಿಷನ್‌ನ ಅದ್ಭುತ ಕೆಲಸ. ಟೆಸ್ಸಾ ಜೋಸೆಫ್ ಮನೆಗೆ ತಲುಪಿದ್ದಕ್ಕೆ ಸಂತೋಷವಾಗಿದೆ. ದೇಶ ಅಥವಾ ವಿದೇಶದಲ್ಲಿ ಇರಲಿ ಮೋದಿ ಕೀ ಗ್ಯಾರಂಟಿ ಯಾವಾಗಲೂ ಕೆಲಸ ಮಾಡುತ್ತದೆ ಎಂದು ಪೋಸ್ಟ್ ಮಾಡಿದ್ದಾರೆ.
Advertisement
Great work, @India_in_Iran . Glad that Ms. Ann Tessa Joseph has reached home. #ModiKiGuarantee always delivers, at home or abroad. https://t.co/VxYMppcPZr
— Dr. S. Jaishankar (Modi Ka Parivar) (@DrSJaishankar) April 18, 2024
ಏಪ್ರಿಲ್ 14 ರಂದು ಜೈಶಂಕರ್ ಇರಾನ್ ವಿದೇಶಾಂಗ ಸಚಿವ ಅಮೀರ್-ಅಬ್ದುಲ್ಲಾಹಿಯಾನ್ ಜೊತೆ ಮಾತುಕತೆ ನಡೆಸಿದ್ದರು. ಈ ಮಾತುಕತೆಯ ನಂತರ ಇರಾನ್ ಭಾರತೀಯ ಅಧಿಕಾರಿಗಳಿಗೆ ತನ್ನ ಪ್ರಜೆಗಳನ್ನು ಭೇಟಿಯಾಗಲು ಅನುಮತಿ ನೀಡಿತ್ತು. ಇದನ್ನೂ ಓದಿ: ಹುಬ್ಬಳ್ಳಿ ಕಾಲೇಜ್ ಕ್ಯಾಂಪಸ್‌ನಲ್ಲಿ ಚಾಕುವಿನಿಂದ ಇರಿದು ವಿದ್ಯಾರ್ಥಿನಿಯ ಹತ್ಯೆ – ಯುವಕ ಅರೆಸ್ಟ್
ಇರಾನ್ ವಶಪಡಿಸಿಕೊಂಡ ಹಡಗಿನಲ್ಲಿ 17 ಮಂದಿ ಭಾರತೀಯ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದು, ಇವರ ಸುರಕ್ಷಿತ ಬಿಡುಗಡೆ ಸಂಬಂಧ ಭಾರತ ಸರ್ಕಾರ ಇರಾನ್ ಜೊತೆ ನಿರಂತರ ಮಾತುಕತೆ ನಡೆಸುತ್ತಿದೆ.
ಯುಎಇಯಿಂದ (UAE) ಸರಕು ತುಂಬಿಸಿಕೊಂಡು ಮುಂಬೈ (Mumbai) ಬಂದರಿಗೆ ಬರುತ್ತಿದ್ದ MCS Aries ಹೆಸರಿನ ಕಂಟೈನರ್ ಶಿಪ್ ಅನ್ನು Strait of Hormuz ಬಳಿ ಇರಾನ್ ಏ.14 ರಂದು ವಶಪಡಿಸಿಕೊಂಡಿತ್ತು. ಪೋರ್ಚುಗೀಸ್ ಧ್ವಜ ಹೊಂದಿದ್ದ ಈ ಹಡಗಿನ ಮೇಲೆ ಇರಾನ್ ನೌಕಾ ದಳದ ಸೈನಿಕರು ಹೆಲಿಕಾಪ್ಟರ್‌ನಿಂದ ನೇರವಾಗಿ ಇಳಿದು ದಾಳಿ ಮಾಡಿ ವಶ ಪಡಿಸಿಕೊಂಡಿದ್ದಾರೆ. ಈ ಹಡಗು ಇಸ್ರೇಲಿ (Israel) ಬಿಲಿಯನೇರ್ ಇಯಾಲ್ ಆಫರ್ ಒಡೆತನದ ಲಂಡನ್ ಮೂಲದ ಜೊಡಿಯಾಕ್ ಮಾರಿಟೈಮ್‌ನೊಂದಿಗೆ ಕಂಪನಿಯೊಂದಿಗೆ ಸಂಯೋಜಿತವಾಗಿದೆ. ಈ ಹಡಗು ಏ.15ರ ರಾತ್ರಿ ಮುಂಬೈ ಬಂದರಿಗೆ ಆಗಮಿಸಬೇಕಿತ್ತು.