ಭೋಪಾಲ್: ಮಧ್ಯಪ್ರದೇಶದ ರೇವಾ ಮೂಲದ ಯುವತಿಯೊಬ್ಬಳು ವ್ಯಕ್ತಿಯೊಬ್ಬನನ್ನು ಭೇಟಿಯಾಗಲು ಪಾಕಿಸ್ತಾನಕ್ಕೆ ತೆರಳುತ್ತಿದ್ದಾಗ ಗಡಿಯಲ್ಲಿ ತಡೆದಿರುವ ಪೊಲೀಸರು ಲುಕ್‍ಔಟ್ ನೋಟಿಸ್ ಜಾರಿ ಮಾಡಿದ್ದಾರೆ.
ಪಾಕಿಸ್ತಾನದಲ್ಲಿದ್ದ ವ್ಯಕ್ತಿಯೊಬ್ಬನನ್ನು ರೇವಾದ 24 ವರ್ಷದ ಯುವತಿ ಭೇಟಿಯಾಗಲು ಹೋಗುತ್ತಿದ್ದಳು. ಈ ಹಿನ್ನೆಲೆ ಆಕೆಯ ಕುಟುಂಬದ ಸದಸ್ಯರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪೊಲೀಸ್ ಅಧಿಕಾರಿಗಳು, ಯುವತಿಯನ್ನು ಅಟ್ಟಾರಿ-ವಾಘಾ ಗಡಿಯಲ್ಲಿ ತಡೆದಿದ್ದಾರೆ. ಯುವತಿಗೆ ಲುಕ್‍ಔಟ್ ನೋಟಿಸ್ ಜಾರಿ ಮಾಡಲಾಗಿದೆ. ಇದನ್ನೂ ಓದಿ: ಕೋಟೆನಾಡಿನ ಜಲಾಶಯಗಳ ಬಳಿ ಯದುವೀರ್ ಒಡೆಯರ್ ಫ್ಯಾಮಿಲಿ ರೌಂಡ್ಸ್
Advertisement
Advertisement
ನಡೆದಿದ್ದೇನು?
ಜೂನ್ 14 ರಂದು ಯುವತಿ ತನ್ನ ಮನೆ ಬಿಟ್ಟು ಹೋಗಿದ್ದಳು. ಈ ವೇಳೆ ಆಕೆಯ ಕುಟುಂಬದ ಸದಸ್ಯರಿಗೆ ಪಾಕಿಸ್ತಾನದ ಅಪರಿಚಿತ ಸಂಖ್ಯೆಯಿಂದ ಕರೆಗಳು ಬರುತ್ತಿದ್ದವು. ಈ ಹಿನ್ನೆಲೆ ಅವರು ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ನವನೀತ್ ಭಾಸಿನ್ ಹೇಳಿದ್ದಾರೆ.
Advertisement
ಯುವತಿ ತನ್ನ ಮನೆಯವರಿಗೆ ತಿಳಿಯದೆ ಪಾಸ್‍ಪೋರ್ಟ್ ಪಡೆದಿರುವುದು ನಮ್ಮ ತನಿಖೆಯಿಂದ ತಿಳಿದುಬಂದಿದೆ. ಪಾಸ್‍ಪೋರ್ಟ್ ಬಗ್ಗೆ ತಿಳಿದುಬಂದ ನಂತರ ಲುಕ್‍ಔಟ್ ನೋಟಿಸ್ ಜಾರಿ ಮಾಡಲಾಗಿದ್ದು, ಯುವತಿಯನ್ನು ಅಟ್ಟಾರಿ-ವಾಘಾ ಗಡಿಯಲ್ಲಿ ನಿಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.
Advertisement
ರವಾದಿಂದ ನಮ್ಮ ತಂಡವು ಶನಿವಾರ ಪಂಜಾಬ್‍ಗೆ ತಲುಪಿ ಯುವತಿಯನ್ನು ಮರಳಿ ಕರೆತರುತ್ತಿದೆ. ನಾವು ಯುವತಿಯೊಂದಿಗೆ ಮಾತನಾಡಿದ ನಂತರ ಹೆಚ್ಚಿನ ವಿವರಗಳನ್ನು ಪಡೆಯುತ್ತೇವೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ನೈಟ್‍ಕ್ಲಬ್‍ನಲ್ಲಿ 20 ಯುವಕರ ನಿಗೂಢ ಸಾವು
ಕುಟುಂಬಕ್ಕೆ ಹೇಳಿದ್ದೇನು?
ತಾನು ಪಾಕಿಸ್ತಾನಿ ವ್ಯಕ್ತಿಯೊಂದಿಗೆ ಸ್ನೇಹ ಬೆಳೆಸಿದ್ದು, ಆತನನ್ನು ಭೇಟಿಯಾಗಲಿದ್ದೇನೆ ಎಂದು ಯುವತಿ ಈ ಹಿಂದೆಯೇ ಕುಟುಂಬದ ಸದಸ್ಯರಿಗೆ ತಿಳಿಸಿದ್ದಳು. ರೇವಾ ನಗರದ ಕೊತ್ವಾಲಿ ಪೊಲೀಸ್ ಠಾಣೆ ಅಧಿಕಾರಿ ಆದಿತ್ಯ ಪ್ರತಾಪ್ ಸಿಂಗ್ ಅವರು ಈ ಕುರಿತು ಮಾತನಾಡಿದ್ದು, ಈ ಯುವತಿ ಶಾಲಾ ಶಿಕ್ಷಕಿಯಾಗಿದ್ದಳು. ಆಕೆ ಪಾಕಿಸ್ತಾನಕ್ಕೆ ವೀಸಾ ಸಹ ಹೊಂದಿದ್ದಳು. ಅಲ್ಲದೇ ಯುವತಿಗೆ ಪಾಕಿಸ್ತಾನದಿಂದ ಫೋನ್ ಕರೆಗಳು ಬರುತ್ತಿತ್ತು ಎಂದು ತಿಳಿಸಿದ್ದಾರೆ.