ರಾಯಚೂರು: ಸಿಂಧನೂರು (Sindhanur) ತಾಲೂಕಿನ ಸಿಎಸ್ಎಫ್ ಕ್ಯಾಂಪ್‌ನಲ್ಲಿ ವರದಕ್ಷಿಣೆ (Dowry) ಕಿರುಕುಳ ನೀಡಿ ನೇಣು ಬಿಗಿದು ಮಹಿಳೆಯನ್ನು ಕೊಲೆ ಮಾಡಿದ ಆರೋಪ ಕೇಳಿಬಂದಿದೆ.
ಮಾಬಮ್ಮ (26) ಮೃತಪಟ್ಟ ಗೃಹಿಣಿಯಾಗಿದ್ದಾಳೆ. ವರದಕ್ಷಿಣೆಗಾಗಿ ಕಿರುಕುಳ ನೀಡಿ ನೇಣು ಹಾಕಿ ಕೊಲೆ ಮಾಡಲಾಗಿದೆ ಎಂದು ಮೃತಳ ಪೋಷಕರು ಆರೋಪಿಸಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಮಾಬಮ್ಮಳನ್ನು ಹುಸೇನಬಾಷಾ ಜೊತೆ ಮದುವೆ ಮಾಡಲಾಗಿತ್ತು. ಮದುವೆಯಾದ ಒಂದುವರೆ ವರ್ಷದ ಬಳಿಕ ವರದಕ್ಷಿಣೆಗಾಗಿ ನಿತ್ಯ ಕಿರುಕುಳ ನೀಡಲಾಗಿದೆ. ತವರು ಮನೆಯಿಂದ ವರದಕ್ಷಿಣೆ ತರುವಂತೆ ಪೀಡಿಸಿ ನಿತ್ಯ ಪತಿ ಜಗಳವಾಡುತ್ತಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ತುಂಗಭದ್ರಾ ನದಿಯಲ್ಲಿ ನಾಪತ್ತೆಯಾಗಿದ್ದ ಮೂವರು ಯುವಕರು ಶವವಾಗಿ ಪತ್ತೆ
ಈ ಸಂಬಂಧ ಬಳಗಾನೂರು ಪೊಲೀಸ್ ಠಾಣೆಯಲ್ಲಿ ಪತಿ ಹುಸೇನ್ ಬಾಷಾ ,ಮಾವ ನಬೀಸಾಬ್, ಮೈದುನ ಹಸೇನ್ ಬಾಷಾ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ಬಿಹಾರದಲ್ಲಿ ಗುಂಡಿಕ್ಕಿ ಮತ್ತೋರ್ವ ಬಿಜೆಪಿ ನಾಯಕನ ಹತ್ಯೆ