ಬೆಂಗಳೂರು: ಬುಧವಾರದಂದು ಕೆ.ಆರ್ ಪುರಂನಲ್ಲಿ ಬರ್ಬರವಾಗಿ ಹತ್ಯೆಯಾಗಿದ್ದ ಸುಮತಿ ಕೊಲೆ ಪ್ರಕರಣದ ಆರೋಪಿ ಬಂಧನವಾಗಿದ್ದಾನೆ.
ಆತ ಬೇರ್ಯಾರು ಅಲ್ಲ ಆಕೆಯ ಭಾವ ವಿನಾಯಕ್ ರೆಡ್ಡಿ. ಭಾವನ ಜೊತೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದ ನಾದಿನಿ ಸುಮತಿ ಗಂಡನಿಗೆ ಮೋಸ ಮಾಡಿ ಹಾಸಿಗೆ ಹಂಚಿಕೊಂಡಿದ್ದಳು. ಆದ್ರೆ ಅದೇನಾಯ್ತೋ ತನ್ನ ತಪ್ಪಿನ ಅರಿವಾಗಿ ಭಾವನೊಂದಿಗೆ ಇದ್ದ ಅನೈತಿಕ ಸಂಬಂಧ ಬಿಡೋದಕ್ಕೆ ಪ್ರಯತ್ನ ಮಾಡಿದ್ದಾಳೆ.
ಯಾವಾಗ ತನ್ನ ನಾದಿನಿ ತನ್ನೊಂದಿಗೆ ಹಾಸಿಗೆ ಹಂಚಿಕೊಳ್ಳೋದಿಲ್ಲ ಅಂದಳೋ ವಿನಾಯಕ್ ರೆಡ್ಡಿಗೆ ಕೋಪ ಬಂದಿದೆ. ಬಲವಂತವಾಗಿ ಸಂಭೋಗ ಮಾಡಲು ಒಂದೆರಡು ಬಾರಿ ಪ್ರಯತ್ನ ಮಾಡಿದ್ದಾನೆ. ಆಕೆ ನಿರಾಕರಿಸಿದ್ದಕ್ಕೆ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದ.
ಪೊಲೀಸರಿಗೆ ಸಿಕ್ಕಿಬೀಳ್ತೀನಿ ಅನ್ನೋ ಭಯದಲ್ಲಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನ ಕೂಡ ಮಾಡಿದ್ದಾನೆ.
ಸದ್ಯ ಕೆ.ಆರ್ ಪುರಂ ಪೊಲೀಸರು ಆರೋಪಿಯನ್ನು ಬಂಧಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸ್ತಿದ್ದಾರೆ.