ಬೆಂಗಳೂರು: ಒಂಟಿ ಮಹಿಳೆಯನ್ನ ಮಾರಕಾಸ್ತ್ರಗಳಿಂದ ಭೀಕರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
40 ವರ್ಷದ ರುಕ್ಮಿಣಿ ಕೊಲೆಯಾದ ಮಹಿಳೆ. ರುಕ್ಮಿಣಿ ಮೂಲತಃ ಮದುಗಿರಿಯವರಾಗಿದ್ದು, ಕಳೆದ 20 ವರ್ಷಗಳಿಂದ ಗೋರಗುಂಟೆ ಪಾಳ್ಯದಲ್ಲಿ ವಾಸವಾಗಿದ್ದರು. ಗಾರ್ಮೆಂಟ್ ಒಂದರಲ್ಲಿ ಸುಪರ್ ವೈಜರ್ ಆಗಿ ಕೆಲಸ ಮಾಡುತ್ತಿದ್ದ ರುಕ್ಮಿಣಿ ಗಂಡ ಮಕ್ಕಳನ್ನ ತೊರೆದು ಒಂಟಿಯಾಗಿ ವಾಸವಾಗಿದ್ದರು.
Advertisement
Advertisement
ಗುರುವಾರ ದುಷ್ಕರ್ಮಿಗಳು ಮನೆಗೆ ನುಗ್ಗಿ ರುಕ್ಮಿಣಿ ತಲೆ ಸೇರಿ ದೇಹದ ಹಲವೆಡೆ ಮಚ್ಚಿನಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಇತ್ತ ತಾಯಿ ಫೋನ್ ಮಾಡಿದಾಗ ರುಕ್ಮಿಣಿ ಕಾಲ್ ಪಿಕ್ ಮಾಡಲಿಲ್ಲ. ಬಳಿಕ ಅವರು ಬೇರೊಬ್ಬರನ್ನ ಮನೆಗೆ ಕಳುಹಿಸಿದ್ದಾರೆ. ಅವರು ಮನೆಗೆ ಹೋಗಿ ನೋಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.
Advertisement
ಈ ಘಟನೆ ಸಂಬಂಧ ಆರ್ ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಸೆಕ್ಷನ್ 302 ಅಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕೊಲೆಯಾದ ಮನೆಯ ಅಕ್ಕಪಕ್ಕದಲ್ಲಿರುವ ಸಿಸಿಟಿಯನ್ನು ಪರಿಶೀಲನೆ ನಡೆಸುತ್ತಿದ್ದಾರೆ.
Advertisement
ಪ್ರಾಥಮಿಕ ತನಿಖೆ ನಡೆಸಿರುವ ಪೊಲೀಸರು ಅಕ್ರಮ ಸಂಬಂಧಕ್ಕೆ ಕೊಲೆ ನಡೆದಿರಬಹುದೆಂದು ಶಂಕಿಸಿದ್ದು, ತನಿಖೆ ಆರಂಭಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv