ಶವ ಸಾಗಿಸ್ತಿದ್ದಾಗ ಡಿಸಿ ಕಚೇರಿ ಮುಂದೆಯೇ ಬೈಕ್ ಸ್ಕಿಡ್- ಮಹಿಳೆಯ ಕೊಲೆ ರಹಸ್ಯ ಬಯಲು

Public TV
2 Min Read
RMG MURDER

ರಾಮನಗರ: ಮಹಿಳೆಯೊಬ್ಬರ ಶವ ಸಾಗಿಸುತ್ತಿದ್ದ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗವೇ ಬೈಕ್ ಅಪಘಾತಕ್ಕೀಡಾಗಿದೆ. ಇದರಿಂದ ಪತಿ ಹಾಗೂ ಪತ್ನಿಯ ಕೊಲೆ ರಹಸ್ಯ ಬಯಲಾಗಿದೆ. ಶ್ವೇತಾ ಕೊಲೆಯಾದ ಮಹಿಳೆ. ಈ ಘಟನೆ ಮಂಗಳವಾರ ರಾತ್ರಿ ನಡೆದಿದೆ.

ಏನಿದು ಘಟನೆ..?
ಪುರುಷರಿಬ್ಬರು ಬೈಕ್ ನಲ್ಲಿ ಮಹಿಳೆಯ ಶವ ಇಟ್ಟುಕೊಂಡು ರಾಜರಾಜೇಶ್ವರಿ ನಗರದಿಂದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಪ್ರಯಾಣಿಸಿದ್ದಾರೆ. ಹೀಗೆ ಹೋಗುತ್ತಿದ್ದ ಅವರು ರಾಮನಗರ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಬೈಕ್ ಸ್ಕಿಡ್ ಆಗಿ ಅಪಘಾತ ಸಂಭವಿಸಿದೆ.

police 2

ಅಪಘಾತ ನಡೆದ ಕೂಡಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಈ ವೇಳೆ ಮಹಿಳೆಯೊಬ್ಬರು ಬಿದ್ದಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಅಂತೆಯೇ ಅಪಘಾತದಲ್ಲಿ ಮಹಿಳೆಗೆ ಗಾಯವಾಗಿ ಬಿದ್ದಿದ್ದಾರೆ ಎಂದು ತಿಳಿದ ಅವರು ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಈ ವೇಳೆ ಮಹಿಳೆಯನ್ನು ಪರೀಕ್ಷೆ ಮಾಡಿದ ವೈದ್ಯರು, ಈಕೆ ಮೃತಪಟ್ಟು ಹಲವು ಗಂಟೆಗಳೇ ಕಳೆದಿವೆ ಎಂದಿದ್ದಾರೆ. ಇದರಿಂದ ಅನುಮಾನಗೊಂಡ ಪೊಲೀಸರು ಬೈಕ್ ಸವಾರರಾದ ನಾಗರಾಜು ಹಾಗೂ ವಿನೋದ್‍ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆಗ ರಹಸ್ಯ ಬಯಲಾಗಿದೆ. ಇದನ್ನೂ ಓದಿ: ಲವ್ವರ್‌ ಭೇಟಿ ಮಾಡಲು ಗ್ರಾಮದ ಕರೆಂಟ್ ಕಟ್ ಮಾಡುತ್ತಿದ್ದ ಲೈನ್‌ಮ್ಯಾನ್

Police Jeep

ಕೊಲೆ ಮಾಡಿದ್ದು ಯಾಕೆ..?
ಕೊಲೆಯಾದ ಶ್ವೇತಾಗೆ ಮದುವೆ ಆದರೂ ಆಕೆ ಗಂಡನಿಂದ ದೂರವಾಗಿ ನೊಂದಿದ್ದಳು. ಈ ವೇಳೆ ಗೆಳತಿ ದುರ್ಗಾ, ಶ್ವೇತಾಗೆ ತನ್ನ ಮನೆಯಲ್ಲಿಯೇ ಅಶ್ರಯ ನೀಡಿದ್ದಾಳೆ. ಇತ್ತೀಚೆಗೆ ದುರ್ಗಾ ಮನೆಯಲ್ಲಿ ಆಭರಣ ಕಳ್ಳತನವಾಗಿತ್ತು. ಇದನ್ನು ಶ್ವೇತಾಳೇ ಕದ್ದಿರುವುದಾಗಿ ಆರೋಪಿ ದುರ್ಗಾ ಕ್ಯಾತೆ ತೆಗೆದಿದ್ದಾಳೆ. ಇತ್ತ ಇದೇ ವಿಚಾರವಾಗಿ ಸೋಮವಾರ ಇಬ್ಬರ ಮಧ್ಯೆ ಜಗಳವೂ ನಡೆದಿದೆ. ಈ ಜಗಳ ತಾರಕಕ್ಕೇರಿ ದುರ್ಗಾ, ಶ್ವೇತಾಗೆ ಮನಸ್ಸೋ ಇಚ್ಛೆ ಥಳಿಸಿದ್ದಾಳೆ. ಅಲ್ಲದೆ ಕೋಣೆಯಲ್ಲಿ ಕೂಡಿ ಹಾಕಿ ಹಿಂಸಿಸಿದ್ದಾಳೆ.

Police Jeep 1

ಇತ್ತ ಸ್ನೇಹಿತೆ ದುರ್ಗಾಳ ಹಿಂಸೆಯಿಂದ ಅಸ್ವಸ್ಥಗೊಂಡ ಶ್ವೇತಾ ಅಂದು ರಾತ್ರಿಯೇ ಸಾವನ್ನಪ್ಪಿದ್ದಾಳೆ. ಈ ವೇಳೆ ಶ್ವೇತಾಳ ಸಾವನ್ನು ಹೇಗಾದರೂ ಮಾಡಿ ಮುಚ್ಚಿ ಹಾಕಬೇಕು ಎಂದು ಪತಿ ಜೊತೆ ಸೇರಿ ದುರ್ಗಾ ಪ್ಲ್ಯಾನ್ ರೂಪಿಸಿದ್ದಾಳೆ. ಇದಕ್ಕೆ ದುರ್ಗಾ ಸಹೋದರ ಕೂಡ ಸಾಥ್ ನೀಡಿದ್ದಾನೆ. ಅಂತೆಯೇ ಅಭಿ ಹಾಗೂವಿನೋದ್ ಎಂಬಿಬ್ಬರ ಸಹಾಯ ಕೂಡ ಪಡೆದುಕೊಂಡಿದ್ದಾರೆ. ಯೋಜನೆಯಂತೆ ಮಂಗಳವಾರ ರಾತ್ರಿ ಯಾರಿಗೂ ಅನುಮಾನ ಬಾರದಂತೆ ಶವವನ್ನು ಬೈಕಿನಲ್ಲಿ ಇಟ್ಟುಕೊಂಡು ನಾಗರಾಜ್ ಹಾಗೂ ವಿನೋದ್ ರಾಜರಾಜೇಶ್ವರಿ ನಗರದಿಂದ ಹೊರಟಿದ್ದಾರೆ. ಆದರೆ ರಾಮನಗರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬರುತ್ತಿದ್ದಂತೆಯೇ ಬೈಕ್ ಸ್ಕಿಡ್ ಆಗಿ ಬಿದ್ದು, ಆರೋಪಿಗಳ ನೀಚ ಕೃತ್ಯ ಬಯಲಾಗಿದೆ.

 

Share This Article
Leave a Comment

Leave a Reply

Your email address will not be published. Required fields are marked *