ತಿರುವನಂತಪುರಂ: ಕೇರಳದಲ್ಲಿ ಮಹಿಳೆಯೊಬ್ಬರು ಬಸ್‍ಗೆ ಸ್ಕೂಟಿಯನ್ನು ಅಡ್ಡಲಾಗಿ ನಿಲ್ಲಿಸುವ ಮೂಲಕ ಚಾಲಕನಿಗೆ ಬುದ್ಧಿ ಕಲಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾತಾಣಗಳಲ್ಲಿ ವೈರಲ್ ಆಗಿದ್ದು,
ವೈರಲ್ ಆದ ವಿಡಿಯೋದಲ್ಲಿ ಬಸ್ ಚಾಲಕ ಬಲ ಭಾಗದಲ್ಲಿ ಸಂಚರಿಸಿದ್ದು, ಇದನ್ನು ಕಂಡ ಮಹಿಳೆ ಕೆಂಡಾಮಂಡಲವಾಗಿ ತಾನೂ ಸಹ ತನ್ನ ಸ್ಕೂಟಿಯನ್ನು ರಸ್ತೆಯ ಮಧ್ಯದಲ್ಲಿ ನಿಲ್ಲಿಸಿಕೊಂಡು ನಿಂತಿದ್ದಾರೆ. ಬಸ್ ಸಣ್ಣ ಜಾಗದಲ್ಲೇ ನುಗ್ಗಲು ಯತ್ನಿಸಿದ್ದು, ಆಗ ಮಹಿಳಾ ರೈಡರ್ ತನ್ನ ಸ್ಕೂಟಿಯನ್ನು ರಸ್ತೆಯ ಬಲಭಾಗದಲ್ಲಿ ನಿಲ್ಲಿಸುತ್ತಾರೆ.
Advertisement
When you are RIGHT it gives you a very different kind of MIGHT. See Joe a lady rider down South doesn't budge an inch to give in to an erring Bus Driver. Kudos to her. @TheBikerni @IndiaWima @UrvashiPatole @utterflea @anandmahindra @mishramugdha #GirlPower #BikerLife #BikerGirl pic.twitter.com/3RkkUr4XdG
— TheGhostRider31 (@TheGhostRider31) September 25, 2019
Advertisement
ಬಸ್ ಮುಂದೆ ಸ್ಕೂಟಿ ಸಿಕ್ಕದಾಗಿ ಕಾಣುತ್ತದೆ, ಇನ್ನೊಂದೆಡೆ ಬಸ್ ಡ್ರೈವರ್ ಮಹಿಳೆಯನ್ನು ಹೆದರಿಸಲು ನೋಡುತ್ತಾನೆ. ಆದರೆ ಮಹಿಳೆ ಮಾತ್ರ ಅವರ ಸ್ಥಾನ ಬಿಟ್ಟು ಕದಲುವುದಿಲ್ಲ. ನಂತರ ಚಾಲಕನೇ ಬಸ್ಸನ್ನು ಮಹಿಳೆಯ ಬಲಕ್ಕೆ ಅಂದರೆ, ರಸ್ತೆಯ ಎಡಕ್ಕೆ ಸಂಚಾರಿ ನಿಯಮದಂತೆ ಚಲಿಸುತ್ತಾನೆ.
Advertisement
ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಹಿಳೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹೆಚ್ಚು ಜನ ಶೇರ್ ಮಾಡಿ ಮಹಿಳೆಯ ಧೈರ್ಯವನ್ನು ಮೆಚ್ಚಿದ್ದಾರೆ. ಕಮೆಂಟ್ ಮಾಡುತ್ತಿದ್ದಾರೆ.
Advertisement
Splendid, however, in North India, the bus driver probably won't stop.
There is a different sort of stupid this side of land
— Sunny Soral (@sunnysoral) September 26, 2019
ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡ ನಂತರ ನೆಟ್ಟಿಗರು ಮಹಿಳೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಸ್ ರಾಂಗ್ ರೂಟ್‍ನಲ್ಲಿ ಕಿರಿದಾದ ರಸ್ತೆಯಲ್ಲಿ ಚಲಿಸಲು ಯತ್ನಿಸಿದರೂ ಮಹಿಳೆ ಕದಲದೆ ನಿಂತಿರುವುದಕ್ಕೆ ಶಹಬ್ಬಾಶ್ ಎಂದಿದ್ದಾರೆ.
ಕೆಲವು ಉತ್ತರ ಭಾರತೀಯರು ಇದಕ್ಕೆ ಪ್ರತಿಕ್ರಿಯಿಸಿ, ಇದೇ ಘಟನೆ ಉತ್ತರ ಭಾರತದಲ್ಲಿ ನಡೆದಿದ್ದರೆ ಡ್ರೈವರ್ ಬಸ್ಸನ್ನು ನಿಲ್ಲಿಸುತ್ತಿರಲಿಲ್ಲ. ಇದೊಂದು ಅವಿವೇಕಿಗಳ ತಾಣವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.