ಮುಂಬೈ: ಚಲಿಸುತ್ತಿದ್ದ ರೈಲಿನಲ್ಲೇ ಮಹಿಳೆ ಮೇಲೆ ಕುಡುಕನೊಬ್ಬ ದೌರ್ಜನ್ಯ ಎಸಗಿರುವ ಘಟನೆ ನಗರದ ಸ್ಥಳಿಯ ರೈಲಿನಲ್ಲಿ ನಡೆದಿದೆ.
ಈ ಘಟನೆ ಗುರುವಾರ ರಾತ್ರಿ ನಡೆದಿದ್ದು, ಮುಂಬೈನ ದಾದರ್ ಕುರ್ಲಾ ಸ್ಥಳೀಯ ಟ್ರೇನ್ ನಲ್ಲಿ ನಡೆದಿದೆ. ಆರೋಪಿಯನ್ನು ರಫಿಕ್ ಅಲಿ ಶೇಖ್ ಎಂದು ಗುರುತಿಸಲಾಗಿದೆ. ಈಗಾಗಲೇ ಕುಡುಕ ಶೇಖ್ನನ್ನು ಪೊಲೀಸರು ಬಂಧಿಸಿದ್ದಾರೆ.
Advertisement
ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸಂತ್ರಸ್ತೆ ಮೇಲೆ ದಾಳಿ ಮಾಡಿದ ದೃಶ್ಯವನ್ನು ಸಹ ಪ್ರಯಾಣಿಕರು ತನ್ನ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಸಂತ್ರಸ್ತೆ ಮತ್ತು ಆರೋಪಿ ಶೇಖ್ ಇಬ್ಬರೂ ಪರಿಚಯಸ್ಥರಾಗಿದ್ದು, ಇಬ್ಬರು ಕಲ್ಯಾಣ್ ಮತ್ತು ದಾದರ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಈ ಆರೋಪಿ ಸಂತ್ರಸ್ತೆ ಮೇಲೆ ಅಟ್ಟಹಾಸ ಮೆರೆದಿದ್ದು, ಆಕೆಯ ಕೂದ ಹಿಡಿದು ಮನಸೋ ಇಚ್ಛೆ ಎಳೆದಾಡಿ, ಆಕೆ ಮೇಲೆ ದಾಳಿ ಮಾಡಿದ್ದಾನೆ.
Advertisement
ಆರೋಪಿ ಶೇಖ್ ಗೆ ಸಂತ್ರಸ್ತೆ ಅಧಿಕ ಮೊತ್ತದ ಹಣ ನೀಡಿದ್ದರು. ಆ ಹಣವನ್ನು ಮರಳಿ ನೀಡುವಂತೆ ಆರೋಪಿಗೆ ಆಕೆ ಕೇಳಿದ್ದರು. ಮರಳಿ ಹಣ ಕೇಳಿದ್ದು ಶೇಖ್ ಕೋಪಕ್ಕೆ ಕಾರಣವಾಗಿದ್ದು, ಹಲ್ಲೆ ಮಾಡುವ ಉದ್ದೇಶದಿಂದಲೇ ಸಂತ್ರಸ್ತೆಯನ್ನು ಆರೋಪಿ ಹಿಂಬಾಲಿಸಿದ್ದ ಎನ್ನಲಾಗಿದೆ.
Advertisement
ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ರೈಲ್ವೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಕೂಡಲೇ ಪೊಲೀಸರು ಸ್ಥಳಕ್ಕೆ ಬಂದು ಆರೋಪಿ ಶೇಖ್ನನ್ನು ಬಂಧಿಸಿದ್ದಾರೆ. ಸದ್ಯಕ್ಕೆ ಆರೋಪಿ ವಿರುದ್ಧ ಕಿರುಕುಳ ಮತ್ತು ಕೊಲೆ ಯತ್ನದ ಅಡಿ ಪ್ರಕರಣ ದಾಖಲಿಸಿಕೊಂಡಿದ್ದು, ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.