ಬೆಂಗಳೂರು: ನಗರದ ಪ್ರತಿಷ್ಠಿತ ಮಾಲ್ನಲ್ಲಿ ಮಹಿಳೆ ರೌದ್ರಾವತಾರ ತಾಳಿದ ಪ್ರಸಂಗವೊಂದು ನಡೆದಿದೆ. ಮಹಿಳೆಯ ಆರ್ಭಟ ನೋಡಿ ಶಾಪಿಂಗ್ ಮಾಲ್ (Shopping Mall) ಸಿಬ್ಬಂದಿಯೇ ಗಲಿಬಿಲಿಗೊಂಡಿದ್ದಾರೆ. ಮಹಿಳೆ ಪಂಚ್ ನೋಡಿ ಮಾಲ್ ಸಿಬ್ಬಂದಿ ದಿಕ್ಕು ತೋಚದೆ ನಿಂತಲ್ಲೇ ನಿಂತಿಬಿಟ್ಟಿದ್ರು. ಕಾಲಿಗೆ ಬಿದ್ದರೂ ಬಿಡದ ಮಹಿಳೆ ಯುವಕನನ್ನು ಕಾಲಲ್ಲೇ ಒದ್ದು ಕಾಳಿ ರೂಪ ತಾಳಿದಳು.
Advertisement
ರಾತ್ರಿ 10:30ರ ಸುಮಾರಿಗೆ ಪಿವಿಆರ್ ಐನಾಕ್ಸ್ ಚಿತ್ರಮಂದಿರಕ್ಕೆ ಬಂದಿದ್ದ ಮಹಿಳೆ ತಮ್ಮ ವ್ಯಾಲೆಟ್ (Wallet) ಅನ್ನ ಸೀಟಿನಲ್ಲಿ ಮರೆತು ಹೋಗಿದ್ದರು. ಸ್ವಚ್ಛತಾ ಕಾರ್ಯದ ವೇಳೆ ಗಮನಿಸಿದ್ದ ಹೌಸ್ ಕೀಪಿಂಗ್ ಸಿಬ್ಬಂದಿ ವ್ಯಾಲೆಟ್ ಅನ್ನ ಸೆಕ್ಯೂರಿಟಿಗೆ ಒಪ್ಪಿಸಿದ್ರು. ರಾತ್ರಿ 3 ಗಂಟೆಯ ಸುಮಾರಿಗೆ ಮಾಲ್ ಬಳಿ ಬಂದಿದ್ದ ಅದೇ ಮಹಿಳೆ ವ್ಯಾಲೆಟ್ ಕುರಿತು ವಿಚಾರಿಸಿದ್ದರು. ಈ ವೇಳೆ ಸೆಕ್ಯೂರಿಟಿ ಗಾರ್ಡ್ ನಿಯಮಾನುಸಾರ ನಿಮ್ಮ ಐಡೆಂಟಿಟಿ ಮಾಹಿತಿ ನೀಡಿ ಎಂದು ಕೇಳಿದ್ದಾರೆ ಅಷ್ಟೇ. ಇಷ್ಟಕ್ಕೆ ಕೋಪಗೊಂಡ ಮಹಿಳೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ವ್ಯಾಲೆಟ್ ಕಿತ್ತುಕೊಂಡು ಸೆಕ್ಯುರಿಟಿ ಗಾರ್ಡ್ ಮೇಲೆ ಹಲ್ಲೆ ಮಾಡಿದ್ದಾರೆ.
Advertisement
Advertisement
ಮಹಿಳೆಯ ರಾದ್ಧಾಂತ ಹೆಚ್ಚಾಗುತ್ತಿದ್ದಂತೆ ಮಾಲ್ ಸಿಬ್ಬಂದಿ ಅಶೋಕ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಪೆÇಲೀಸರು ಘಟನ ಸ್ಥಳಕ್ಕೆ ಬಂದು ಠಾಣೆಗೆ ಕರೆದುಕೊಂಡು ಹೋಗಿ ಪೆÇಲೀಸರು ಘಟನೆ ಬಗ್ಗೆ ವಿಚಾರಿಸಿದಾಗ ತನ್ನ ವ್ಯಾಲೆಟ್ನಲ್ಲಿ ಎಂಟು ಸಾವಿರ ಕಳ್ಳತನವಾಗಿದೆ ಎಂದು ದೂರಿದ್ದಾರೆ. ಆದರೆ ವ್ಯಾಲೆಟ್ ದೊರೆತ ಸಂದರ್ಭದಲ್ಲಿ ಸಿಸಿಟಿವಿ ಕ್ಯಾಮೆರಾದ ಸಮ್ಮುಖದಲ್ಲಿ ಅದರಲ್ಲಿದ್ದ 21,020 ರೂ. ಹಣ ಮತ್ತಿತರ ವಸ್ತುಗಳನ್ನ ಪರಿಶೀಲಿಸಲಾಗಿದ್ದು, ಯಾವುದೇ ಕಳ್ಳತನವಾಗಿಲ್ಲ ಅನ್ನೋದು ಗಮನಕ್ಕೆ ಬಂದಿದೆ. ಇದನ್ನೂ ಓದಿ: ಮದುವೆ ಪ್ರಪೋಸಲ್ಗೆ ನಮ್ರತಾ ಗ್ರೀನ್ ಸಿಗ್ನಲ್- ನಾಚಿ ನೀರಾದ ಸ್ನೇಹಿತ್
Advertisement
ಘಟನೆಯ ಕುರಿತು ಅಶೋಕ ನಗರ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಿಸಿಕೊಳ್ಳಲಾಗಿದ್ದು, ಮಹಿಳೆ ಹಾಗೂ ಪಿವಿಆರ್ ಸಿಬ್ಬಂದಿಯ ಹೇಳಿಕೆ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಮಾಲ್ ಸಿಬ್ಬಂದಿ ಹಾಗೂ ಮಹಿಳೆಗೆ ನೋಟಿಸ್ ಕೊಟ್ಟಿದ್ದು ತನಿಖೆ ಮಾಡಲಾಗುತ್ತಿದೆ. ಸಂಪೂರ್ಣ ವಿಚಾರಣೆ ಬಳಿಕ ಘಟನೆಯ ಬಗ್ಗೆ ಸತ್ಯಾ ಸತ್ಯಾಸತ್ಯತೆ ಹೊರಬರಲಿದೆ.