ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಅಂಗನವಾಡಿ ಕಾರ್ಯಕರ್ತೆ ಒಬ್ಬರು ವಿವಾಹವಾಗಿದ್ದಾರೆ.
ಸುದ್ದಿ ಓದಿ ಕನ್‍ಫ್ಯೂಸ್ ಆಗಬೇಡಿ. ರಾಜ್ಯ ಸರ್ಕಾರದ ಗಮನ ಸೆಳೆಯಲು ಅಂಗನವಾಡಿ ಕಾರ್ಯಕರ್ತೆಯೊಬ್ಬರು ಯೋಗಿ ಆದಿತ್ಯನಾಥ್ ಅವರನ್ನು ವಿವಾಹವಾಗಿದ್ದಾರೆ. ಕಳೆದ ಕೆಲ ದಿನಗಳಿಂದ ವಿವಿಧ ಬೇಡಿಕೆ ಈಡೇರಿಸುವಂತೆ ಉತ್ತರಪ್ರದೇಶದ ಅಂಗನವಾಡಿ ಕಾರ್ಯಕರ್ತೆಯರು ಸೀತಾಪುರದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹೀಗಾಗಿ ಸರ್ಕಾರದ ಗಮನ ಸೆಳೆಯಲು ಮಹಿಳಾ ಅಂಗನವಾಡಿ ಕರ್ಮಚಾರಿ ಸಂಘದ ಜಿಲ್ಲಾಧ್ಯಕ್ಷೆ ನೀತು ಸಿಂಗ್ ಅವರು ಆದಿತ್ಯನಾಥ್ ಅವರನ್ನು ವರಿಸಿದ್ದಾರೆ.
Advertisement
ಪ್ರತಿಭಟನಾ ನಿರತ ಸಾವಿರಾರು ಕಾರ್ಯಕರ್ತೆಯರ ಮಧ್ಯೆ ಯೋಗಿ ಆದಿತ್ಯನಾಥ್ ಅವರ ಭಾವಚಿತ್ರಕ್ಕೆ ಹಾರ ಹಾಕಿ ಅವರನ್ನು ವಿವಾಹವಾಗಿದ್ದಾರೆ. ಈ ಬಗ್ಗೆ ನೀತು ಸಿಂಗ್ ಪ್ರತಿಕ್ರಿಯಿಸಿ, ಶುಕ್ರವಾರ ಯೋಗಿ ಆದಿತ್ಯನಾಥ್ ಅವರು ಸೀತಾಪುರಕ್ಕೆ ಆಗಮಿಸಲಿದ್ದಾರೆ. ಈ ವೇಳೆ ಅವರು ನಮ್ಮ ಸಮಸ್ಯೆಯನ್ನು ಬಗೆಹರಿಸುವ ಸಾಧ್ಯತೆಯಿದೆ. ಸಮಸ್ಯೆ ಬಗೆಹರಿದರೆ 4 ಲಕ್ಷ ಮಹಿಳಾ ಕಾರ್ಯಕರ್ತೆಯರಿಗೆ ಸಹಾಯವಾಗಲಿದೆ ಎಂದು ಹೇಳಿದರು.
Advertisement
ಅಂಗನವಾಡಿ ಕಾರ್ಯಕರ್ತೆಯರು ನಮ್ಮ ಸಮಸ್ಯೆಯನ್ನು ಬಗೆ ಹರಿಸಲು ಹೊಸದಾಗಿ ಆಡಳಿತಕ್ಕೆ ಬಂದಿರುವ ಬಿಜೆಪಿ ಸರ್ಕಾರಕ್ಕೆ 4 ತಿಂಗಳ ಡೆಡ್ ಲೈನ್ ನೀಡಿದ್ದರು. ಈ ಅವಧಿ ಮುಗಿದ ಹಿನ್ನೆಲೆಯಲ್ಲಿ ಕಾರ್ಯಕರ್ತೆಯರು ಪ್ರತಿಭಟನೆಗೆ ಇಳಿದಿದ್ದಾರೆ.ಇದನ್ನೂ ಓದಿ: 15 ಸರ್ಕಾರಿ ರಜೆಗಳನ್ನ ರದ್ದು ಮಾಡಿದ ಯೋಗಿ ಆದಿತ್ಯನಾಥ್
Advertisement
ಗುಜರಾತ್ ನಲ್ಲಿ ಯೋಗಿ: ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಯೋಗಿ ಆದಿತ್ಯನಾಥ್ ಅವರು ಗುರುವಾರ ಗುಜರಾತ್ ಬಿಜೆಪಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
Advertisement
आज चूडा विधान सभा, सुरेंद्र नगर, गुजरात में जनसभा को संबोधित किया। pic.twitter.com/XP603L6d02
— Yogi Adityanath (@myogiadityanath) December 7, 2017
आज पालिताना विधान सभा, भावनगर, गुजरात में जनसभा को संबोधित किया। pic.twitter.com/XeyJuGKUdv
— Yogi Adityanath (@myogiadityanath) December 7, 2017
आज तलाजा विधान सभा, भावनगर, गुजरात में जनसभा को संबोधित किया। pic.twitter.com/E6fUhvON6o
— Yogi Adityanath (@myogiadityanath) December 7, 2017
आज राजकोट (पूर्व), गुजरात में जनसभा को संबोधित किया। pic.twitter.com/O4khXSM2u6
— Yogi Adityanath (@myogiadityanath) December 7, 2017