ಮುಂಬೈ: 17 ವರ್ಷದ ಬಾಲಕನನ್ನು ಮದುವೆಯಾಗಿ ಲೈಂಗಿಕ ಕಿರುಕುಳ ನೀಡಿದ ಆರೋಪ ಮೇಲೆ 22 ವರ್ಷದ ಮಹಿಳೆಯೊಬ್ಬಳನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಮಹಿಳೆಗೆ ಈಗಾಗಲೇ ಮದುವೆಯಾಗಿ 5 ತಿಂಗಳ ಹೆಣ್ಣು ಮಗುವಿದೆ. ಮಗುವಿದ್ದರೂ ಕಳೆದ ತಿಂಗಳು 17 ವರ್ಷದ ಅಪ್ರಾಪ್ತ ಬಾಲಕನನ್ನು ಮದುವೆಯಾಗಿದ್ದಳು. ಸದ್ಯ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಪೊಲೀಸರು ಬಂಧಿಸಿದ್ದು, ಮಹಿಳೆ ಜಾಮೀನು ಕೋರಿ ಕೋರ್ಟ್ ಮೊರೆಹೋಗಿದ್ದಾಳೆ.
ಮಹಿಳೆ ವಿರುದ್ಧ ಬಾಲಕನ ತಾಯಿ ದೂರು ನೀಡಿದ್ದು, ಈ ದೂರಿನಲ್ಲಿ ತನ್ನ ಮಗನಿಗೆ ಆಕೆ ಲೈಂಗಿಕ ಕಿರುಕುಳ ನೀಡಿದ್ದಾಗಿ ಆರೋಪ ಮಾಡಿದ್ದಾರೆ. ಅಲ್ಲದೇ ಆತನೊಂದಿಗೆ ಜೀವನ ನಡೆಸಲು ಬಿಡದಿದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾಳೆ. ಇದರಿಂದ ಆತ ಮನೆ ತೊರೆದು ಹೋಗಿದ್ದಾನೆ. ಈಗಾಗಲೇ ಮಹಿಳೆಗೆ ಎರಡು ಬಾರಿ ವಿವಾಹ ವಿಚ್ಛೇದನ ಆಗಿದೆ ಎಂದು ದೂರಿದ್ದಾರೆ. ಎರಡು ವರ್ಷಗಳಿಂದ ನನಗೂ ಮತ್ತು ನನ್ನ ಮಗನಿಗೆ ಮಹಿಳೆಯ ಪರಿಚಯವಿತ್ತು ಎಂದು ಹೇಳಿದ್ದಾರೆ
ಬಾಲಕನ ತಾಯಿಯ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಮಹಿಳೆ ವಿರುದ್ಧ ಪೋಕ್ಸೋ ಕಾಯ್ದೆಯ ಹಾಗೂ ಬಾಲ್ಯ ವಿವಾಹ ನಿಷೇಧ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv