ಸ್ಯಾಕ್ರಮೆಂಟೊ: ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ. ಯಾರ ಹಣೆಯ ಬರಹದಲ್ಲಿ ಯಾರು, ಯಾರ ಬಾಳಲ್ಲಿ ಯಾರು ಬರಬೇಕು ಎಂದು ಬರೆದಿರುತ್ತದೆ ಎಂದು ಹಿರಿಯರು ಹೇಳುತ್ತಾರೆ. ಒಂದು ಹೆಣ್ಣಿಗೆ, ಗಂಡು ಎಂದು ದೇವರು ಬರೆದಿರುತ್ತಾನೆ. ಆದರೆ ಇಲ್ಲೊಬ್ಬ ಮಹಿಳೆ ತಾನು ತುಂಬಾ ಇಷ್ಟಪಡುವ ಬಣ್ಣದ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾಳೆ. ಈ ವಿಚಾರ ಇದೀಗ ಸಖತ್ ಸುದ್ದಿಯಲ್ಲಿದೆ.
ಕ್ಯಾಲಿಫೋರ್ನಿಯಾದ ಕಿಟನ್ ಕೇಸೆರಾ ಎನ್ನುವ ಮಹಿಳೆಗೆ ಗುಲಾಬಿ ಬಣ್ಣ ಕಂಡರೆ ಎಲ್ಲಿಲ್ಲದ ಪ್ರೀತಿ. 40 ವರ್ಷಗಳ ಡೇಟಿಂಗ್ ನಂತರ ಮದುವೆಯಾಗಿದ್ದಾರೆ. ಈ ಬಣ್ಣದ ಜೊತೆಗೆ ತುಂಬಾ ಆತ್ಮೀಯವಾದ ಒಡನಾಟವನ್ನು ಇಟ್ಟುಕೊಂಡಿದ್ದಾರೆ. ಹೀಗಾಗಿ ಬಣ್ಣದ ಜೊತೆಗೆ ಮದುವೆಯಾಗಿದ್ದಾರೆ. ಈ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಪರ್ಷಿಯನ್ ಬೆಕ್ಕುಗಳಿಗೆ ಸೀಮಂತ ಮಾಡಿ ಸುದ್ದಿಯಾದ ಉದ್ಯಮಿ!
View this post on Instagram
ನಾನು ಪಿಂಕ್ ಬಣ್ಣದ ಜೊತೆಗೆ ವಿವಾಹವಾಗಿದ್ದೇನೆ. 40 ವರ್ಷಗಳ ಡೇಟಿಂಗ್ ನಂತರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದೇನೆ. ನನಗೆ ಗುಲಾಬಿ ಬಣ್ಣ ಎಂದರೆ ಮೊದಲಿನಿಂದ ಪ್ರೀತಿ, ಆದರೆ ಯಾಕೆ ಈ ಬಣ್ಣ ಇಷ್ಟೊಂದು ಪ್ರೀತಿ ಎಂದು ನನಗೆ ಗೊತ್ತಿಲ್ಲ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: BBMP ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ
ಕಿಟನ್ ಕೇಸೆರಾ ಇತ್ತೀಚೆಗೆ ತಮ್ಮ ನೆಚ್ಚಿನ ಗುಲಾಬಿ ಬಣ್ಣದ ಜೊತೆಗೆ ಲಾಸ್ ವೇಗಾಸ್‍ನಲ್ಲಿ ವಿವಾಹವಾಗಿದ್ದಾರೆ. ಇವರ ಮದುವೆಯಲ್ಲಿ ಬಟ್ಟೆಯಿಂದ ಹಿಡಿದು ಕೇಕ್‍ವರೆಗೂ ಎಲ್ಲದರ ಬಣ್ಣವೂ ಪಿಂಕ್ ಆಗಿರುವುದು ವಿಶೇಷವಾಗಿತ್ತು. ತಮ್ಮ ವಿವಾಹವನ್ನು ಗುಲಾಬಿ ಬಣ್ಣದ ಗೌನ್, ಗುಲಾಬಿ ಬಣ್ಣದ ಕೋಟ್ ಮತ್ತು ಗುಲಾಬಿ ಕಿರೀಟವನ್ನು ಧರಿಸಿದ್ದರು. ಕೂದಲಿಗೆ ಕೂಡ ಪಿಂಕ್ ಬಣ್ಣವನ್ನು ಹಾಕಿಕೊಂಡಿದ್ದಾರೆ. ಮದುವೆ ಅಲಂಕಾರ ಸಂಪೂರ್ಣವಾಗಿ ಗುಲಾಬಿ ಬಣ್ಣದಿಂದ ತುಂಬಿತ್ತು.