ಬ್ಯೂನಸ್ ಐರಿಸ್: ಮಹಿಳೆಯೊಬ್ಬಳು (Woman) ತನ್ನನ್ನೇ ತಾನು ಮದುವೆಯಾದ 24 ಗಂಟೆಯೊಳಗೆ ವಿಚ್ಛೇದನ (Divorce) ಪಡೆಯುತ್ತಿರುವುದಾಗಿ ಹೇಳಿರುವ ಘಟನೆ ಅರ್ಜೇಂಟಿನಾದಲ್ಲಿ ನಡೆದಿದೆ.
ಸೋಫಿ ಮೌರ್ (25) ತನ್ನನ್ನು ತಾನು ಮದುವೆಯಾದ ಮಹಿಳೆ. ಈಕೆ ಈ ಬಗ್ಗೆ ಟ್ವೀಟ್ ಮಾಡಿ, ವಧುವಿನ ಡ್ರೇಸ್ನಲ್ಲಿರುವ ಫೋಟೋವನ್ನು ಹಂಚಿಕೊಂಡಿದ್ದಳು.
Advertisement
Advertisement
ಟ್ವೀಟ್ನಲ್ಲಿ ಏನಿದೆ?: ಇಂದು ನನ್ನ ಜೀವನದ ಅತ್ಯಂತ ಸಂತೋಷದ ಕ್ಷಣ. ನಾನು ಮದುವೆಯ ಉಡುಪನ್ನು ಖರೀದಿಸಿದೆ. ಅಷ್ಟೇ ಅಲ್ಲದೇ ನನ್ನನ್ನು ಮದುವೆಯಾಗಲು (Marriage) ಕೇಕ್ ಅನ್ನು ಖರೀದಿಸಿದ್ದೇನೆ ಎಂದು ತಿಳಿಸಿದ್ದಳು.
Advertisement
ಈ ಟ್ವೀಟ್ಗೆ ಅನೇಕರು ಸಕಾರತ್ಮಕವಾಗಿ ಹಾಗೂ ನಕಾರಾತ್ಮಕವಾಗಿ ಟ್ವೀಟ್ ಮಾಡಿದ್ದರು. ಅಷ್ಟೇ ಅಲ್ಲದೇ ಈ ಬಗ್ಗೆ ಚರ್ಚೆಯೂ ಆಗಿತ್ತು. ಆದರೆ ವಿಚಿತ್ರ ಎನ್ನುವಂತೆ ಅದಾದ ಕೇವಲ ಒಂದು ದಿನದ ನಂತರ ವಿಚ್ಛೇದನ ಪಡೆದುಕೊಳ್ಳುತ್ತಿದ್ದೇನೆ ಎಂದು ಪುನಃ ಟ್ವೀಟ್ ಮಾಡಿದ್ದಾಳೆ. ಇದನ್ನೂ ಓದಿ: ರಾಜ್ಯಕ್ಕೆ ಇಂದು ಪ್ರಧಾನಿ ಮೋದಿ ಆಗಮನ – ಮಂಡ್ಯ, ಧಾರವಾಡದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ
Advertisement
ಟ್ವೀಟ್ನಲ್ಲಿ ಏನಿದೆ?: ನಾನು ನನ್ನೊಂದಿಗೆ ಮದುವೆಯಾಗಿ ಒಂದು ದಿನವಾಗಿದೆ. ಈ ನಿರ್ಧಾರವನ್ನು ಮುದುವರಿಸಲು ಸಾಧ್ಯವಿಲ್ಲ. ಹೀಗಾಗಿ ವಿಚ್ಛೇದನ ಪಡೆದುಕೊಳ್ಳಲು ಯೋಚಿಸುತ್ತಿದ್ದೇನೆ ಎಂದು ಹೇಳಿದ್ದಾಳೆ.
actualización: voy un día casada conmigo y no me aguanto más, estoy viendo como es el tema del divorcio por las dudas https://t.co/0qyOtwDiH3
— Sofi ???? (@sofimaure07) February 20, 2023
ಈ ಪೋಸ್ಟ್ಗೆ ನೆಟ್ಟಿಗರು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ನೆಟ್ಟಿಗನೊಬ್ಬ, ಓರ್ವ ಒಳ್ಳೆಯ ವಕೀಲರನ್ನು ಪಡೆಯಿರಿ ಎಂದು ಹೇಳಿದ್ದಾನೆ. ಮತ್ತೋರ್ವ, ಮೂರ್ಖತನಕ್ಕೆ ಮಿತಿಯೇ ಇಲ್ಲ, ಜಿಗುಪ್ಸೆ ಹುಟ್ಟಿಸುವಾಕೆ, ಇದರಿಂದ ಹೆಚ್ಚು ನಿರೀಕ್ಷಿಸಬೇಡಿ ಎಂದಿದ್ದಾನೆ. ಇನ್ನೋರ್ವ ಅದಕ್ಕೇ ಮದುವೆ ಆಗುವ ಮುನ್ನ ಕೂಲಂಕಷವಾಗಿ ಯೋಚಿಸಬೇಕು ಸೋಫಿ ಎಂದು ತಿಳಿಸಿದ್ದಾನೆ. ಇದನ್ನೂ ಓದಿ: ಉದ್ಘಾಟನೆಗೂ ಮುನ್ನವೇ ಹುಬ್ಬಳ್ಳಿ ಶ್ರೀ ಸಿದ್ಧಾರೂಢ ರೈಲ್ವೆ ನಿಲ್ದಾಣ ಗಿನ್ನಿಸ್ ದಾಖಲೆ