ಚಿತ್ರದುರ್ಗ: ಮೊದಲ ಪತಿ ಸರಿಯಿಲ್ಲ ಅಂತ ಮಹಿಳೆಯೊಬ್ಬಳಿಗೆ ಡಿವೋರ್ಸ್ ಕೊಡಿಸಿ, ಆಕೆಯೊಂದಿಗೆ ಎರಡನೇ ಪ್ರೇಮ ವಿವಾಹವಾಗಿದ್ದ ವಕೀಲ ತನ್ನ ಪತ್ನಿಯ ಶೀಲವನ್ನೇ ಶಂಕಿಸಿರುವ ಘಟನೆ ಚಿತ್ರದುರ್ಗದ ಐಯುಡಿಪಿ ಬಡಾವಣೆಯಲ್ಲಿ ನಡೆದಿದೆ.
ರಾಘವೇಂದ್ರ ಪತ್ನಿಯ ಶೀಲ ಶಂಕಿಸಿದ ವಕೀಲ. ಕಳೆದ 8 ವರ್ಷಗಳ ಹಿಂದೆ ಶೋಭಾ ಎಂಬವರು ತನ್ನ ಮೊದಲ ಪತಿ ಸರಿಯಿಲ್ಲ ಅಂತ ವಿವಾಹ ವಿಚ್ಛೇದನ ಪಡೆದಿದ್ದರು. ನಂತರ ವಿಚ್ಛೇದನ ಕೊಡಿಸಿದ್ದ ವಕೀಲ ರಾಘವೇಂದ್ರ ಅವರೊಂದಿಗೆ ಕುಟುಂಬದ ವಿರೋಧದ ನಡುವೇ ಪ್ರೀತಿಸಿ, ಪ್ರೇಮ ವಿವಾಹವಾಗಿದ್ದರು.
Advertisement
ರಾಘವೇಂದ್ರ ಅವರಿಗೂ ಈಗಾಗಲೇ ಮೊದಲ ಮದುವೆ ವಿಚ್ಚೇದನವಾಗಿದ್ದು, ಈ ವಿಷಯ ತಿಳಿದೇ ಶೋಭಾ ಆತನನ್ನು ಮನಸಾರೆ ಪ್ರೀತಿಸಿ ಮದುವೆಯಾಗಿದ್ದರು. ಸದ್ಯ ಇಬ್ಬರು ಅಂದಿನಿಂದ ಇಂದಿನವರೆಗೂ ತುಂಬಾ ಅನ್ಯೋನ್ಯವಾಗಿದ್ದು, ಇವರಿಗೆ ಇಬ್ಬರು ಮುದ್ದಾದ ಗಂಡು ಮಕ್ಕಳಿದ್ದಾರೆ.
Advertisement
Advertisement
ಕುಟುಂಬಕ್ಕೆ ಮೂರನೇ ವ್ಯಕ್ತಿ ಎಂಟ್ರಿ:
ಶೋಭಾ ಹಾಗೂ ರಾಘವೇಂದ್ರ ಕುಟುಂಬದ ನಡುವೆ ಆಸ್ತಿ ಹಾಗು ಚಿತ್ರದುರ್ಗದ 35ನೇ ವಾರ್ಡ್‍ನ ನಗರಸಭಾ ಸದಸ್ಯ ಭಾಸ್ಕರ್ ಎಂಟ್ರಿಯಾಗಿದ್ದಾರೆ. ಪ್ರೀತಿಸಿ ಮದುವೆಯಾಗಿದ್ದ ವಕೀಲ ರಾಘವೇಂದ್ರ ಮತ್ತು ಶೋಭಾ ನಡುವೆ ವಿರಸ ಶುರುವಾಗಿದೆ. ಚಿತ್ರದುರ್ಗ ನಗರಸಭೆಯ 35ನೇ ವಾರ್ಡ್‍ನ ನಗರಸಭಾ ಸದಸ್ಯ ಭಾಸ್ಕರ್ ಹಾಗೂ ತನ್ನ ಪತ್ನಿ ಶೋಭಾ ನಡುವೇ ಅಕ್ರಮ ಸಂಬಂಧವಿದೆ ರಾಘವೇಂದ್ರ ಈಗ ಆರೋಪಿಸಿದ್ದಾರೆ. ಜೊತೆಗೆ ತನ್ನ ಮೇಲೆ ಭಾಸ್ಕರ್ ಹಾಗೂ ಅವರ ಸಂಬಂಧಿಗಳು ಹಲ್ಲೆ ನಡೆಸಿದ್ದಾರೆ. ಇವರಿಗೆ ತನ್ನ ಅತ್ತೆ ಅಂಜನಾದೇವಿ ಮತ್ತು ಪತ್ನಿ ಶೋಭಾ ಕೂಡ ಸಾಥ್ ನೀಡಿದ್ದು, ಜಾತಿ ನಿಂದನೆ ಮಾಡಿದ್ದಾರೆಂದು ಕೇಸ್ ದಾಖಲಿಸಿದ್ದಾರೆ.
Advertisement
ಸದ್ಯ ತನ್ನ ಗಂಡನ ವಿರುದ್ಧ ಆಕ್ರೋಶಗೊಂಡಿರುವ ಶೋಭಾ, ತಾಯಿ ಮನೆಯ ಆಸ್ತಿ ಆಸೆಗಾಗಿ ತನಗೆ ವರದಕ್ಷಿಣೆ ಕಿರುಕುಳ, ಮಾನಸಿಕ ಕಿರುಕುಳ ಮತ್ತು ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಇದನ್ನು ಮುಚ್ಚಿ ಹಾಕಿ ತಾನು ಸಜ್ಜನ ಅಂತ ತೋರಿಸಿಕೊಳ್ಳಲು ಈ ರೀತಿಯ ಆರೋಪ ಮಾಡುತ್ತಿದ್ದಾನೆ ಎಂದು ಶೋಭಾ ತನ್ನ ಪತಿ ವಕೀಲ ರಾಘವೇಂದ್ರ ವಿರುದ್ಧ ಬಡಾವಣೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ.
ಈ ಮೂಲಕ ನ್ಯಾಯಕ್ಕಾಗಿ ಪತಿ-ಪತ್ನಿಯರ ನಡುವೇ ಹೋರಾಟ ಶುರುವಾಗಿದೆ. ತಮ್ಮ ಪಾವಿತ್ರತೆಯನ್ನು ಸಾಬೀತು ಮಾಡಲು ಸಾಮಾಜಿಕ ಜಾಲತಾಣಗಳಲ್ಲೂ ಪರಸ್ಪರ ಕೆಸರೆರೆಚಾಟ ಆರಂಭಿಸಿದ್ದಾರೆ. ನೊಂದ ಮಹಿಳೆ ಶೋಭಾ ನ್ಯಾಯಕ್ಕಾಗಿ ಮಹಿಳಾ ಸಾಂತ್ವಾನ ಕೇಂದ್ರದ ಮೊರೆ ಹೋಗಿದ್ದಾರೆ. ಆದರೆ ಪ್ರಕರಣ ಕುರಿತು ತನಿಖೆ ಮಾಡಬೇಕಾದ ಪೊಲೀಸರು ಮಾತ್ರ ಜಾಣಕುರುಡು ಪ್ರದರ್ಶಿಸಿದ್ದಾರೆಂಬ ಆರೋಪ ಕೇಳಿಬಂದಿದ್ದು, ತನಿಖೆಯ ನಂತರವೇ ಈ ಪ್ರಕರಣದ ಅಸಲಿ ಸತ್ಯ ಬಯಲಾಗಬೇಕಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews