ಬೆಂಗಳೂರು: ಲೈಂಗಿಕ ಕ್ರಿಯೆ ನಡೆಸುವಾಗ ಕಾಂಡೋಮ್ ಹಾಕಲು ಒಪ್ಪದ ವ್ಯಕ್ತಿಯ ಜೊತೆ ಜಗಳವಾಡಿ ಕೊನೆಗೆ ವೇಶ್ಯೆ ತನ್ನ ಪ್ರಾಣವನ್ನೇ ಬಿಟ್ಟ ಘಟನೆ ಬೆಂಗಳೂರಿನ ಸುಬ್ರಹ್ಮಣ್ಯ ನಗರದಲ್ಲಿ ನಡೆದಿದೆ.
ಮಂಜುಳಾ ಎಂಬವಳು ವೇಶ್ಯಾವಾಟಿಕೆ ನಡೆಸುತ್ತಿದ್ದಳು. ವೇಶ್ಯೆಯ ಜೊತೆ ಲೈಂಗಿಕ ಕ್ರಿಯೆಗೆ ಬಂದ ವ್ಯಕ್ತಿ ಮುಕುಂದನಿಗೆ ಕಾಂಡೋಮ್ ಹಾಕಿಕೊಳ್ಳಲು ಹೇಳಿದ್ದಾಳೆ. ಆದರೆ ನಾನು ಹಣ ಕೊಟ್ಟಿದ್ದೀನಿ, ನೀನು ಹೇಳಿದ ಹಾಗೇ ಕೇಳುವುದಕ್ಕೆ ಆಗಲ್ಲ. ನಾನು ಕಾಂಡೋಮ್ ಹಾಕಿಕೊಳ್ಳುವುದಿಲ್ಲ ಎಂದು ರೇಗಿದ್ದಾನೆ. ಇದನ್ನೂ ಓದಿ: ಕಾಂಡೋಮ್ ಬಳಸದೇ ಸೆಕ್ಸ್- ರೇಪ್ ಕೇಸ್ ದಾಖಲಿಸಿದ ಯುವತಿ
ಮುಕುಂದನ ಮಾತಿನಿಂದ ಕೋಪಗೊಂಡ ಮಹಿಳೆ ಆತನ ಮರ್ಮಾಂಗಕ್ಕೆ ಹಲ್ಲೆ ಮಾಡಿದ್ದಾಳೆ. ಮಂಜುಳಾ, ಮುಕುಂದನಿಗೆ ದೈಹಿಕ ಹಲ್ಲೆ ಮಾಡುತ್ತಿದ್ದಂತೆ ಇಬ್ಬರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಮುಕುಂದ, ಮಂಜುಳಾ ಮೇಲೆ ಹಲ್ಲೆ ಮಾಡುವಾಗ ಆಕೆ ಜೋರಾಗಿ ಕಿರುಚಿಕೊಂಡಿದ್ದಾಳೆ.
ಮಂಜುಳಾ ಚೀರಾಟ ಅಕ್ಕಪಕ್ಕದ ಮನೆಯವರಿಗೆ ಕೇಳಿಸಿ ಮನೆಗೆ ಬರುತ್ತಾರೆ ಎಂದು ಮುಕುಂದ ಮನೆಯಲ್ಲಿದ್ದ ಚಾಕು ತೆಗೆದುಕೊಂಡು ಆಕೆಯ ಮೇಲೆ ಬರ್ಬರವಾಗಿ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ತಕ್ಷಣ ಮುಕುಂದ ಪರಾರಿಯಾಗಿದ್ದಾನೆ.
ಸದ್ಯ ಸುಬ್ರಹ್ಮಣ್ಯನಗರ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಯನ್ನು ಬಂಧಿಸಿದ್ದಾರೆ.