ಕೊರೊನಾ ವೈರಸ್‍ನಿಂದ ದೇಶ ತತ್ತರಿಸಿ ಹೋಗಿದೆ. ಆದರೆ ಕೆಲವು ಟ್ಯಾಲೆಂಟೆಡ್ ಮಂದಿ ಕೊರೊನಾ ವೈರಸ್‍ನಲ್ಲಿಯೂ ತಮ್ಮ ಸೃಜನಶೀಲತೆಯನ್ನು ಪ್ರದರ್ಶಿಸುತ್ತಿದ್ದಾರೆ. ಇದೀಗ ಮಹಿಳೆಯೊಬ್ಬರು ಕೊರೊನಾ ಶೇಪ್ ರೈಸ್ ವಡೆ ತಯಾರಿಸುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
Advertisement
2020ರಲ್ಲಿ ಕೋಲ್ಕತ್ತಾದ ಸಿಹಿತಿಂಡಿ ಅಂಗಡಿಯೊಂದರಲ್ಲಿ ಕೊರೊನಾ ಶೇಪ್‍ನಲ್ಲಿ ಖಾದ್ಯವೊಂದನ್ನು ತಯಾರಿಸಿದ್ದು, ನೆಟ್ಟಿಗರು ಅದನ್ನು ನೋಡಿ ಅಚ್ಚರಿಗೊಂಡಿದ್ದರು. ಇದೀಗ ಅದೇ ರೀತಿ ಮಹಿಳೆಯೊಬ್ಬರು ಕೊರೊನಾ ಶೇಪ್ ರೈಸ್ ವಡೆ ಮಾಡಿ ಭಾರೀ ಸದ್ದು ಮಾಡುತ್ತಿದ್ದಾರೆ. ಇದನ್ನೂ ಓದಿ: ಕೆಲವರಿಗೆ ದೇಶ ಭಕ್ತಿ ಅರ್ಥವಾಗುವುದಿಲ್ಲ: ರಾಹುಲ್ ಗಾಂಧಿ
Advertisement
Advertisement
ಮಿಂಟಿ ಅವರು ತಮ್ಮ ಟ್ವಿಟ್ಟರ್‌ನಲ್ಲಿ ಕೊರೊನಾ ರೈಸ್ ಮತ್ತು ಆಲೂಗಡ್ಡೆಯೊಂದಿಗೆ ಕೊರೊನಾ ಶೇಪ್‍ನಲ್ಲಿ ವಡೆ ಮಾಡುತ್ತಿರುವ ವೀಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಮೊದಲಿಗೆ ಹಿಟ್ಟನ್ನು ತಯಾರಿಸಿಕೊಂಡು ನಂತರ ಆಲೂಗಡ್ಡೆ, ಈರುಳ್ಳಿ ಮತ್ತು ಟೊಮೆಟೊಗಳೊಂದಿಗೆ ಸ್ಟಫಿಂಗ್ ಮಾಡುತ್ತಾರೆ. ನಂತರ ಆಲೂಗಡ್ಡೆಯನ್ನು ಉಂಡೆ ಕಟ್ಟಿ, ರೈಸ್ ತುಂಬಿದ ಬಟ್ಟಲಿನಲ್ಲಿ ಲೇಪಿಸಿ ಹಬೆಯ ಪಾತ್ರೆಯಲ್ಲಿಟ್ಟು ಬೇಯಿಸುತ್ತಾರೆ. ನಂತರ ಗರಿಗರಿಯಾದ ವಡೆ ತಯಾರಾಗಿರುವುದನ್ನು ಕಾಣಬಹುದಾಗಿದೆ.
Advertisement
Corona vada! Bharat ki naari sab par bhaari! .@arindam75 pic.twitter.com/sf1zoLPih2
— Mimpi???? (@mimpful) January 19, 2022
ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಲೈಕ್ಸ್ ಹಾಗೂ ಕಾಮೆಂಟ್‍ಗಳ ಸುರಿಮಳೆಯೇ ಹರಿದು ಬರುತ್ತಿದೆ. ಇದನ್ನೂ ಓದಿ: ರಾಷ್ಟ್ರಪಿತನ ಬಗ್ಗೆ ಅವಹೇಳನಕಾರಿ ಹೇಳಿಕೆ – ಕಾಳಿಚರಣ್ ಮಹಾರಾಜ್ ಬಂಧನ