ಸೋಶಿಯಲ್ ಮೀಡಿಯಾದಲ್ಲಿ ನೀವು ಸಾಕಷ್ಟು ಅಡುಗೆ ರೆಸಿಪಿ ರೀಲ್ಸ್‌ಗಳನ್ನು ನೋಡಿರಬಹುದು. ಎಲ್ಲ ರೀತಿಯ ಅಡುಗೆ ಮಾಡುವವರ ಪೇಜ್‍ಗಳನ್ನು ಫಾಲೋವ್ ಕೂಡ ಮಾಡುತ್ತಿರಬಹುದು. ಮೊದಲೆಲ್ಲಾ ಅಡುಗೆ ಮಾಡಲು ಬರದೇ ಜನ ಪರದಾಡುತ್ತಿದ್ದರು. ಆದರೆ ಈಗ ರುಚಿಕರವಾದ ನಾನಾ ರೀತಿಯ ಆಹಾರ ಪದಾರ್ಥಗಳ ರೆಸಿಪಿ ನಿಮ್ಮ ಕಣ್ಣ ಮುಂದೆಯೇ ಸೋಶಿಯಲ್ ಮೀಡಿಯಾದಲ್ಲಿ ಸಿಗುತ್ತದೆ. ಕೆಲವು ದಿನಗಳ ಹಿಂದೆ ಬ್ಲ್ಯಾಕ್ ಕಲರ್ ಇಡ್ಲಿ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿತ್ತು. ಇದೀಗ ಬ್ಲ್ಯೂ ಕಲರ್ ಇಡ್ಲಿ (Blue idli) ಭಾರೀ ಸುದ್ದಿಯಾಗುತ್ತಿದೆ. ಇದನ್ನೂ ಓದಿ: ಐಸ್ ಕ್ಯಾಂಡಿ ಇಡ್ಲಿ ಆಯ್ತು ಈಗ ಬ್ಲ್ಯಾಕ್ ಇಡ್ಲಿ ಸರದಿ – ವೀಡಿಯೋ ವೈರಲ್
View this post on Instagram
ಹೌದು, ಜ್ಯೋತಿ ಕಿಚನ್ ಎಂಬವರು ಈ ಬ್ಲೂ ಕಲರ್ ಇಡ್ಲಿ ವೀಡಿಯೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೋದಲ್ಲಿ ತಟ್ಟೆ ಮೇಲೆ ಬ್ಲೂ ಹಾಗೂ ವೈಟ್ ಕಲರ್ ಇಡ್ಲಿಯನ್ನು ಜೋಡಿಸಿರುವುದನ್ನು ಕಾಣಬಹುದಾಗಿದೆ. ನೀಲಿ ಬಟಾಣಿ ಹೂವುಗಳಿಂದ ಜ್ಯೋತಿ ಅವರು ಈ ಇಡ್ಲಿಯನ್ನು ತಯಾರಿಸಿದ್ದಾರೆ. ಇದನ್ನೂ ಓದಿ: ಟ್ರೆಂಡಿಂಗ್ ಆಯ್ತು ಬೆಂಗಳೂರು ಹೋಟೆಲಿನ ಐಸ್ ಕ್ಯಾಂಡಿ ಇಡ್ಲಿ
ಮೊದಲಿಗೆ ನೀಲಿ ಬಟಾಣಿ ಹೂಗಳನ್ನು ನೀರಿನಲ್ಲಿ ಕುದಿಸಿ, ಆ ನೀರನ್ನು ಇಡ್ಲಿ ಹಿಟ್ಟಿನೊಂದಿಗೆ ಬೇರೆಸಿದರು. ಬಳಿಕ ಹಿಟ್ಟನ್ನು ಇಡ್ಲಿ ಪಾತ್ರೆಗೆ ಹಾಕಿ ಬೇಯಿಸಿದ್ದಾರೆ. ನಂತರ ಗ್ರೀನ್ ಚಟ್ನಿಯೊಂದಿಗೆ ಬಣ್ಣಬಣ್ಣದ ಇಡ್ಲಿಗಳನ್ನು ಅಲಂಕರಿಸಿ ಉಣಬಡಿಸಿದ್ದಾರೆ. ಈ ವೀಡಿಯೋವನ್ನು ಇಲ್ಲಿಯವರೆಗೂ ಸುಮಾರು 8 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ನೆಟ್ಟಿಗರಿಂದ ಕಾಮೆಂಟ್‍ಗಳ ಸುರಿಮಳೆಯೇ ಹರಿದುಬಂದಿದೆ.