CrimeLatestMain PostNational

ತನ್ನ ಪ್ರಿಯಕರನಿಗೆ ಮಗಳನ್ನು ಅತ್ಯಾಚಾರ ಮಾಡಲು ಅವಕಾಶ ನೀಡಿದ ಪಾಪಿ ತಾಯಿ

ಚೆನ್ನೈ: ತಾಯಿಯೇ ಅಪ್ರಾಪ್ತ ಮಗಳನ್ನು ಅತ್ಯಾಚಾರ ಮಾಡಲು ತನ್ನ ಪ್ರಿಯಕರನಿಗೆ ಅವಕಾಶ ಮಾಡಿಕೊಟ್ಟ ಘಟನೆ ಚೆನ್ನೈನಲ್ಲಿ ನಡೆದಿದೆ.

38 ವರ್ಷದ ಮಹಿಳೆಯೊಬ್ಬಳು ದಿನಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಳು. ಆಕೆಗೆ ಒಬ್ಬಳು ಮಗಳಿದ್ದಳು. ಅವಳು ಪಿಯುಸಿಯನ್ನು ಓದುತ್ತಿದ್ದಳು. ಆದರೆ ಮಹಿಳೆಗೆ 50 ವರ್ಷದ ಪುರುಷನೊಂದಿಗೆ ಅಕ್ರಮ ಸಂಬಂಧವಿತ್ತು. ಕಾಲ ನಂತರದಲ್ಲಿ ಆ ವ್ಯಕ್ತಿ ಅಪ್ರಾಪ್ತೆ ಮಗಳನ್ನು ಮದುವೆ ಆಗುವುದಾಗಿ ಭರವಸೆ ನೀಡಿದ್ದ. ಇದರಿಂದಾಗಿ ಮಹಿಳೆಯ ಮುಂದೆ ಹಲವು ಬಾರಿ ಮಗಳನ್ನು ಅತ್ಯಾಚಾರ ಮಾಡಿದ್ದ.

ಆದರೆ ಆ ಅಪ್ರಾಪ್ತೆಯು ಗರ್ಭಿಣಿಯಾದ್ದರಿಂದ ಮಹಿಳೆಯು ಶಿಕ್ಷಣವನ್ನು ನಿಲ್ಲಿಸಿದಳು. ನೆರೆ ಹೊರೆಯವರಿಗೆ ಅನುಮಾನ ಬಾರದೆಂದು ಅವಳನ್ನು ಮನೆಯಲ್ಲೇ ಕೂಡಿ ಹಾಕಿದ್ದರು. ಇದಾದ ಬಳಿಕ ಅಪ್ರಾಪ್ತೆ ಹೆರಿಗೆ ನೋವಿನಿಂದ ಬಳಲುತ್ತಿದ್ದಾಗ ಆಸ್ಪತ್ರೆಗೆ ಕರೆದುಕೊಂಡು ಹೋದರೆ ಅನುಮಾನ ಬರುತ್ತದೆ ಎಂದು ಮನೆಯಲ್ಲೇ ಹೆರಿಗೆ ಮಾಡಿಸಿದ್ದಳು. ಇದನ್ನೂ ಓದಿ: ನಾನು ಆ್ಯಸಿಡ್ ಹಾಕೋಕೆ ಯುವತಿನೇ ಕಾರಣ – ಕಿರಾತಕ ನಾಗೇಶ್ ಆರೋಪ

ಮಗು ಅಸ್ವಸ್ಥಗೊಂಡಿದ್ದರಿಂದ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಮಗುವಿನ ಜನ್ಮ ದಾಖಲೆಯನ್ನು ಹಾಗೂ ತಾಯಿಯ ಆಧಾರ್ ಕಾರ್ಡ್‍ನ್ನು ಕೇಳಿದ್ದಾರೆ. ಈ ಸಂದರ್ಭದಲ್ಲಿ ಈ ವಿಷಯ ಬೆಳಕಿಗೆ ಬಂದಿದೆ. ಈ ಸಂಬಂಧ ಚೆನ್ನೈ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ತನ್ನ ಪುಟ್ಟ ಮಗುವಿನೊಂದಿಗೆ ಪತ್ನಿಗಾಗಿ ಅಲೆದಾಡುತ್ತಿರುವ ಪತಿ

Leave a Reply

Your email address will not be published.

Back to top button